ರಾಂಗ್ ಸೈಡ್‌ನಲ್ಲಿ ಬಂದ BMTC ಬಸ್ಸನ್ನೇ ಹಿಂದೆಕ್ಕೆ ತೆಗೆಸಿದ ಬೈಕರ್!

By Web DeskFirst Published Dec 25, 2018, 8:49 PM IST
Highlights

ಒನ್ ವೇಯಲ್ಲಿ ಬಂದ BMTC ಬಸ್ಸನ್ನೇ ಹಿಂದಕ್ಕೆ ಕಳುಹಿಸಿ, ಎಲ್ಲರಿಗೂ ಪಾಠ ಹೇಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಂಗ್ ಸೈಡ್ ರಂಪಾಟ ಹೇಗಿತ್ತು? ಇಲ್ಲಿದೆ ವೀಡಿಯೋ.

ಬೆಂಗಳೂರು(ಡಿ.25): ಭಾರತದಲ್ಲಿ ಒನ್ ವೇ, ರಾಂಗ್ ಸೈಡ್‌ಗಳಲ್ಲಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನ ತಡೆಗಟ್ಟಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ರಾಂಗ್ ಸೈಡ್ ಡ್ರೈವ್ ಮಾಡಿದವರ ಲೈಸೆನ್ಸ್ ರದ್ದು ಮಾಡಲು ಕೆಲ ನಗರಗಳಲ್ಲಿ ಕ್ರಮ ಕೈಗೊಂಡಿದ್ದಾರೆ. 

ಇದನ್ನೂ ಓದಿ: ಕಾರು, ಬಸ್ಸು, ಟ್ರಕ್‌ಗಳಿಗೆ ಹೊಸ ನಿಯಮ-2019ರಿಂದ ಜಾರಿ-ನಿಮಗಿದು ತಿಳಿದಿರಲಿ!

Latest Videos

ರಸ್ತೆ ನಿಯಮ ಪಾಲನೆಯಲ್ಲಿ ದಕ್ಷಿಣ ಭಾರತದ ಇತರ ನಗರಗಳಿಗೆ ಹೋಲಿಸದರೆ ಬೆಂಗಳೂರು ಮುಂದಿದೆ. ಆದರೆ ರಾಂಗ್ ಸೈಡ್‌ನಲ್ಲಿ ಬರುವವರ ಸಂಖ್ಯೆ ಕಡಿಮೆಯೇನಿಲ್ಲ. ಹೀಗೆ ರಾಂಗ್ ಸೈಡ್ ಮೂಲಕ ಬಂದ BMTC ಬಸ್ಸನ್ನ ನಿಲ್ಲಿಸಿ ಹಿಂದಕ್ಕೆ ಕಳುಹಿಸಿದ ಘಟನೆ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ಬಜಾಜ್ ಅವೆಂಜರ್ ಶೀಘ್ರದಲ್ಲೇ ಬಿಡುಗಡೆ!

ಯಶವಂತಪುರ ಬನಶಂಕರಿ ಬಸ್ ರಾಂಗ್ ಸೈಡ್ ಮೂಲಕ ನೇರವಾಗಿ ಬರುತ್ತಿತ್ತು. ಒನ್ ವೇಯಲ್ಲಿ ಬರುತ್ತಿದ್ದ ಬೈಕ್ ರೈಡರ್ ರೊಚ್ಚಿಗೆದ್ದು, BMTC ಬಸ್‌ನ್ನ ತಡೆದು ನಿಲ್ಲಿಸಿ ನಿಯಮ ಎಲ್ಲರಿಗೂ ಒಂದೇ ಇದು ಒನ್ ವೇ ಹಿಂದಕ್ಕೆ ಹೋಗಲು ಸೂಚಿಸಿದ. ಹೀಗಾಗಿ ಕೆಲ ಹೊತ್ತು ವಾಗ್ವಾದವೇ ನಡೆಯಿತು. ಇದೇ ವೇಳೆ ಕೆಲ ಕಾರು, ಬೈಕ್ ಕೂಡ ರಾಂಗ್ ಸೈಡಲ್ಲಿ ಬರೋ ಯತ್ನ ಮಾಡಿತು.

ಬೈಕ್ ಸವಾರ ಮಾತ್ರ ತನ್ನ ನಿಲುವು ಬದಲಿಸಲಿಲ್ಲ. ಇಷ್ಟೇ ಅಲ್ಲ ರಾಂಗ್ ಸೈಡ್‌ನಲ್ಲಿ ಬಂದ ಬಸ್ಸನ್ನೇ ಹಿಂದಕ್ಕೆ ಕಳುಹಿಸಿದ. ಇದು ಎಲ್ಲಾ ವಾಹನ ಸವಾರರಿಗೆ ಪಾಠ. ಟ್ರಾಫಿಕ್, ಇಲ್ಲೇ ಇದ್ದರೂ ಒಂದು ರೌಂಡ್ ಹೊಡೆಯಬೇಕು ಎಂದೆಲ್ಲಾ ಕಾರಣ ನೀಡಿ ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸುತ್ತಾರೆ. ಇದರಿಂದ ಹೆಚ್ಚಿನ ಅಪಘಾತಗಳು ಸಂಭವಿಸಿದೆ. ಹೀಗಾಗಿ ಎಲ್ಲರೂ ನಿಯಮ ಪಾಲನೆ ಮಾಡಿದರೆ ಸೂಕ್ತ.
ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!