ಸೇತುವೆಯಿಂದ 15 ಅಡಿ ಕೆಳಕ್ಕೆ ಬಿದ್ದ ಟಾಟಾ ನೆಕ್ಸಾನ್, ಪ್ರಯಾಣಿಕರು ಸೇಫ್!

By Suvarna News  |  First Published Feb 26, 2020, 3:38 PM IST

ಭಾರತದ ಮೊದಲ ಸೇಫ್ ಕಾರು ಅನ್ನೋ ಹೆಗ್ಗಳಿಕೆಗೆ ಟಾಟಾ ನೆಕ್ಸಾನ್ ಪಾತ್ರವಾಗಿದೆ. ಕಾರು ಸುರಕ್ಷತಾ ಪರೀಕ್ಷೆಯಲ್ಲಿ ಟಾಪ್ 5 ಸ್ಟಾರ್ ರೇಟಿಂಗ್ ಪಡೆದ  ಸೇತುವೆ ಮೇಲಿಂದ 15 ಅಡಿ ಕೆಳಕ್ಕೆ ಬಿದ್ದರೂ ಪ್ರಯಾಣಿಕರೆಲ್ಲರೂ ಸೇಫ್ ಆಗೋ ಮೂಲಕ ಮತ್ತೊಮ್ಮೆ ಸುರಕ್ಷತೆಯನ್ನು ಸಾಬೀತು ಪಡಿಸಿದೆ. 


ಮುಂಬೈ(ಫೆ.26): ಭಾರತದಲ್ಲಿ ಇದೀಗ ವಾಹನ ಸುರಕ್ಷತೆಗೆ ಕೆಟ್ಟ ಕಟ್ಟು ನಿಟ್ಟಿನ ಮಾನದಂಡಗಳನ್ನು ಜಾರಿಗೆ ತರಲಾಗಿದೆ. ABS, ಸ್ಪೀಡ್ ಅಲರ್ಟ್, ಸೀಟ್ ಬೆಲ್ಟ್ ಸೇರಿದಂತೆ ಕೆಲಲ ಫೀಚರ್ಸ್ ಕಡ್ಡಾಯ ಮಾಡಲಾಗಿದೆ. ಇತ್ತ ಕಾರಿನ ಕ್ರಾಶ್‌ ಟೆಸ್ಟ್‌ ಸುರಕ್ಷತೆಗೂ ಅದ್ಯತೆ ನೀಡಲಾಗುತ್ತಿದೆ. ಕ್ರಾಶ್ ಟೆಸ್ಟ್‌ನಲ್ಲಿ ಟಾಟಾ ನೆಕ್ಸಾನ್ ಕಾರು 5 ಸ್ಟಾರ್ ರೇಟಿಂಗ್ ಪಡೆಯೋ ಮೂಲಕ ಗರಿಷ್ಠ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಸಾಬೀತಾಯ್ತು ಟಾಟಾ ನೆಕ್ಸಾನ್ ಕಾರು ಸುರಕ್ಷತೆ- ಪಿಲ್ಲರ್ ಬಿದ್ದರೂ ಪ್ರಯಾಣಿಕರು ಸೇಫ್!...

Latest Videos

undefined

ಟಾಟಾ ನೆಕ್ಸಾನ್ ಕಾರು 5 ಸ್ಟಾರ್ ರೇಟಿಂಗ್ ಪಡೆದ ಭಾರತದ ಮೊದಲ ಕಾರು. ಕಡಿಮೆ ಬೆಲೆಯಲ್ಲಿ ಅತ್ಯಂತ ಸುರಕ್ಷತೆ ಕಾರನ್ನು ಬಿಡುಗಡೆ ಮಾಡಿದ ಹೆಗ್ಗಳಿಕೆ ಟಾಟಾ ಮೋಟಾರ್ಸ್‌ಗೆ ಸಲ್ಲಲಿದೆ. ಕೆಲ ಅಪಘಾತ ಪ್ರಕರಣಗಳಲ್ಲಿ ನೆಕ್ಸಾನ್ ಗರಿಷ್ಠ ಸುರಕ್ಷತೆ ಕಾರು ಅನ್ನೋದನ್ನು ಸಾಬೀತು ಪಡಿಸಿದೆ. ಇದೀಗ 15 ಅಡಿ ಕಳೆಕ್ಕೆ ಬಿದ್ದರೂ, ಪ್ರಯಾಣಿಕರೆಲ್ಲರನ್ನು ಸೇಫ್ ಮಾಡಿದ ಹೆಗ್ಗಳಿಕೆಯೂ ಟಾಟಾ ನೆಕ್ಸಾನ್‌ಗೆ ಸೇರಿಕೊಂಡಿದೆ.

ಇದನ್ನೂ ಓದಿ: ಟಾಟಾ ಅಲ್ಟ್ರೋಜ್ ಬಿಡುಗಡೆ; ಕಡಿಮೆ ಬೆಲೆ, ಅತ್ಯಂತ ಸುರಕ್ಷತೆಯ ಕಾರು!.

ಮುಂಬೈ-ಗೋವಾ ದಾರಿಯಲ್ಲಿ 3 ಪ್ರಯಾಣಿಕರಿದ್ದ ಟಾಟಾ ನೆಕ್ಸಾನ್ ಕಾರು ರಾಯ್‌ಘಡ್ ಫ್ಲೈಓವರ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಸೇತವೆ ಮೇಲಿನಿಂದ ಬರೋಬ್ಬರಿ 15 ಅಡಿ ಕೆಳಕ್ಕೆ ಬಿದ್ದಿತು. ಬಿದ್ದ ರಭಸಕ್ಕೆ ಕಾರು  ಪಲ್ಟಿಯಾಗಿದೆ. ಸುರಕ್ಷತೆಯ ಕಾರು ಟಾಟಾ ನೆಕ್ಸಾನ್ ಕಾರಿನೊಳಗಿದ್ದ ಮೂವರು ಪ್ರಯಾಣಿಕರಿಗೆ ಸಣ್ಣ ಗಾಯಗಳಾಗಿದೆ. ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕಾರಿನಲ್ಲಿ ಮೂವರು ಪ್ರಯಾಣಿಕರು ಕಾರಿನಿಂದ ಹೊರಬಂದಿದ್ದಾರೆ. ಇನ್ನು ಪೊಲೀಸರು ಚಾಲಕನ ಡ್ರೈವಿಂಗ್ ವೇಳೆ ಮದ್ಯ ಸೇವಿಸಿಲ್ಲ ಅನ್ನೋದು ಪೊಲೀಸರು ದೃಢಪಡಿಸಿದ್ದಾರೆ. ಅತೀಯಾದ ವೇಗದ ಕಾರಣ ನಿಯಂತ್ರಣ ತಪ್ಪಿ ನೆಕ್ಸಾನ್ ಕಾರು ಫ್ಲೈಓವರ್ ಮೇಲಿನಿಂದ ಕೆಳಕ್ಕೆ ಬಿದ್ದಿದೆ ಎಂದು ಪೊಲೀಸರು ಹೇಳಿದ್ದಾರೆ. ಮಧ್ಯರಾತ್ರಿಯಾದ ಕಾರಣ ಫ್ಲೈ ಓವರ್ ಕೆಳಭಾಗದಲ್ಲಿ ಯಾವುದೇ ವಾಹನ ಅಥವಾ ಪಾದಾಚಾರಿಗಳು ಇರಲಿಲ್ಲ. 

ಇದನ್ನೂ ಓದಿ: ಮಹೀಂದ್ರ XUV300 ಕ್ರಾಶ್ ಟೆಸ್ಟ್ ರಿಸಲ್ಟ್ ಬಹಿರಂಗ; ಭಾರತದ ಮತ್ತೊಂದು ಸೇಫ್ಟಿ ಕಾರು!

ಈ ಅಪಘಾತದ ಬಳಿಕ ಟಾಟಾ ನೆಕ್ಸಾನ್ ಅತ್ಯಂತ ಸುರಕ್ಷತೆಯ ರೇಟಿಂಗ್ ಪಡೆದಿರುವುದು ಯಾಕೆ ಅನ್ನೋದು ಸಾಬೀತಾಗಿದೆ. ಈ ಹಿಂದೆ ಕೂಡ ಹಲವು ಅಪಘಾತದಲ್ಲಿ ಟಾಟಾ ನೆಕ್ಸಾನ್ ಕಾರು ಪ್ರಯಾಣಿಕರನ್ನು ಸೇಫಾಗಿಸಿದ ಊದಾಹರಣೆಗಳಿವೆ. ಕಾರು ಪಾರ್ಕ್ ಮಾಡಿದ ಬೆನ್ನಲ್ಲೇ ಪಕ್ಕದಲ್ಲೇ ಇದ್ದ ಕಬ್ಬಿಣದ ಜಾಹೀರಾತು ಕಂಬ ನೆಕ್ಸಾನ್ ಕಾರಿನ ಮೇಲೆ ಬಿದ್ದಿತ್ತು. ಈ ವೇಳೆ ಕಾರಿನೊಳಗಿದ್ದ ಎಲ್ಲರೂ ಸುರಕ್ಷಿತವಾಗಿದ್ದರು. ಈ ರೀತಿ ಹಲವು ಘಟನೆಗಳು ನೆಕ್ಸಾನ್ ಕಾರಿನ ಸುರಕ್ಷತೆ ಹೇಳುತ್ತವೆ.

click me!