ಕಡಿಮೆ ಖರ್ಚು, ಇಂಧನ ಉಳಿತಾಯಕ್ಕಾಗಿ ಶೆಲ್ ಫ್ಲೀಟ್ ಸಲ್ಯೂಶನ್!

By Suvarna News  |  First Published Feb 26, 2020, 3:04 PM IST

ವಾಹನ ಮಾಲೀಕರಿಗೆ ಇಂಧನ ಉಳಿತಾಯ, ಖರ್ಚು, ವಾಹನ ನಿರ್ವಹಣೆ ವೆಚ್ಚ, ವಂಚನೆ ಸೇರಿದತೆ ಹಲವು ರೀತಿಯಲ್ಲಿ ಉಪಯೋಗಕಾರಿಯಾಗಿರವು ಫ್ಲೀಟ್ ಸಲ್ಯೂಶನ್ ಸೇವೆಯನ್ನು ಶೆಲ್ ಆರಂಭಿಸಿದೆ. ನೂತನ ಫ್ಲೀಟ್ ಸಲ್ಯೂಶನ್ ಕುರಿತ ಹೆಚ್ಚಿನ ವಿವರ ಇಲ್ಲಿದೆ. 


ಬೆಂಗಳೂರು(ಫೆ.26):  ಉದ್ಯಮಗಳು ಮತ್ತು ಸಾರಿಗೆ ಚಟುವಟಿಕೆಗಳನ್ನು ನಡೆಸುತ್ತಿರುವವರು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿಶ್ವಾಸಾರ್ಹವಾದ ಶೆಲ್ ಇಂಧನ ಭಾರತದಲ್ಲಿ ಫ್ಲೀಟ್ ಸಲೂಶನ್ಸ್ ಅನ್ನು ಪರಿಚಯಿಸಿದೆ. 

ಇದನ್ನೂ ಓದಿ: ಸ್ವಲ್ಪ ವಿಚಿತ್ರ, ಆದ್ರೂ ಸತ್ಯ! ಕಾರು ಪಾರ್ಕಿಂಗ್ ವೈರಲ್ ವಿಡಿಯೋ ನೋಡಿದ್ರಾ?...

ಫ್ಲೀಟ್ ಮಾಲೀಕರಿಗೆ ನಿರ್ವಹಣಾ ವೆಚ್ಚವನ್ನು (ಟೋಟಲ್ ಕಾಸ್ಟ್ ಆಫ್ ಓನರ್‌ಶಿಪ್-ಟಿಸಿಒ) ಕಡಿಮೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ. ಶೆಲ್ ಫ್ಯುಯೆಲ್ಸ್, ಶೆಲ್ ಫ್ಲೀಟ್ ಪ್ರೀಪೇಯ್ಡ್ ಪ್ರೋಗ್ರಾಂ ಮತ್ತು ಶೆಲ್ ಟೆಲಿಮ್ಯಾಟಿಕ್ಸ್‍ನಂತಹ ಸೇವೆಗಳ ಮೂಲಕ ಅತ್ಯುತ್ತಮವಾದ ಕಾರ್ಯಾಚರಣೆಯನ್ನು ನಡೆಸುವುದರ ಜತೆಗೆ ವಂಚನೆ ವಿರುದ್ಧದ ರಕ್ಷಣೆ ಪ್ರಮಾಣ ಹೆಚ್ಚಿಸಲಾಗುತ್ತದೆ.

Tap to resize

Latest Videos

ಕಳೆದ 60 ವರ್ಷಗಳಿಂದ ಜಾಗತಿಕ ಮಟ್ಟದ ಫ್ಲೀಟ್ ಮ್ಯಾನೇಜ್‍ಮೆಂಟ್ ಬ್ಯುಸಿನೆಸ್ ಮತ್ತು 6 ದಶಲಕ್ಷಕ್ಕೂ ಅಧಿಕ ಫ್ಲೀಟ್ ಕಾರ್ಡ್ ವಿತರಣೆ ಮಾಡಿರುವ ಆಧಾರದಲ್ಲಿ ಶೆಲ್ ಭಾರತದಲ್ಲಿ ಈ ಪರಿಹಾರಗಳನ್ನು ಪರಿಚಯಿಸುವ ಮೂಲಕ ಇಲ್ಲಿನ ಗ್ರಾಹಕರಿಗೆ ಜಾಗತಿಕ ಮಟ್ಟದ ಅನುಭವ ಮತ್ತು ಪರಿಣತಿಯನ್ನು ನೀಡಲಿದೆ. ಅಲ್ಲದೇ, ಕಟ್ಟಿಂಗ್-ಎಡ್ಜ್ ತಂತ್ರಜ್ಞಾನ ಮತ್ತು ವಿಶ್ವ ಮಟ್ಟದ ಆವಿಷ್ಕಾರಗಳನ್ನು ಭಾರತೀಯ ಫ್ಲೀಟ್ ಮಾಲೀಕರಿಗೆ ಪೂರೈಸಲಿದೆ.

ಇದನ್ನೂ ಓದಿ: ಟಾಟಾ ಇಂಟರ್ನ್‌ಶಿಪ್‌ನಲ್ಲಿ ನನ್ನ 6 ತಿಂಗಳು ವ್ಯರ್ಥವಾಯ್ತು; ರತನ್ ಟಾಟಾ!

ಈ ಸಂದರ್ಭದಲ್ಲಿ ಮಾತನಾಡಿದ ಶೆಲ್‍ನ ಫ್ಲೀಟ್ ಸಲೂಶನ್ಸ್‍ನ ಬ್ಯುಸಿನೆಸ್ ಡೆವಲಪ್‍ಮೆಂಟ್ ಮಾರ್ಕೆಟಿಂಗ್ ಅಂಡ್ ಆಪರೇಷನ್ಸ್‍ನ ಪ್ರಧಾನ ವ್ಯವಸ್ಥಾಪಕ ಪರ್ಮಿಂದರ್ ಕೊಹ್ಲಿ, ``ಹೊಸ ತಂತ್ರಜ್ಞಾನಗಳು, ಸೇವೆಗಳು ಮತ್ತು ಅತ್ಯದ್ಭುತವಾದ ಸಂಪರ್ಕ ವ್ಯವಸ್ಥೆಯು ಹೊಸ ಕೌಶಲ್ಯಗಳ ಬೇಡಿಕೆ, ಹೊಸ ಪಾಲುದಾರರು ಮತ್ತು ಬ್ಯುಸಿನೆಸ್ ಮಾದರಿಗಳ ಸೃಷ್ಟಿಯೊಂದಿಗೆ ಫ್ಲೀಟ್ ಕ್ಷೇತ್ರವನ್ನು ಉತ್ತಮವಾದ ರೀತಿಯಲ್ಲಿ ಪುನರ್‍ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. 

ಆದಾಗ್ಯೂ, ಫ್ಲೀಟ್ ಮಾಲೀಕರು, ಮ್ಯಾನೇಜರ್‌ಗಳು ಈ ಪರಿವರ್ತನೆಯನ್ನು ಅಳವಡಿಸಿಕೊಳ್ಳುವಲ್ಲಿ ಮತ್ತು ಅಸಂಖ್ಯಾತ ಸವಾಲುಗಳನ್ನು ಎದುರಿಸುವಲ್ಲಿ ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅತಿಯಾದ ಕಾರ್ಯಾಚರಣೆ ವೆಚ್ಚಗಳು ಮತ್ತು ಗ್ರಾಹಕರ ಬೇಡಿಕೆಗಳು ಹೆಚ್ಚಾಗುತ್ತಿರುವುದು. ನಮ್ಮ ಮೊಟ್ಟ ಮೊದಲ ಧ್ಯೇಯೋದ್ಧೇಶವೆಂದರೆ ನಮ್ಮ ಮೊದಲ ಆಯ್ಕೆ ಗ್ರಾಹಕರಿಗೆ ಸುಸ್ಥಿರವಾದ ಸಾರಿಗೆ ಪರಿಹಾರಗಳನ್ನು ಒದಗಿಸುವುದಾಗಿದೆ. ಈ ನಿಟ್ಟಿನಲ್ಲಿ ನಾವು ಫ್ಲೀಟ್ ಮ್ಯಾನೇಜ್‍ಮೆಂಟ್‍ನ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಗ್ರಾಹಕ ಕೇಂದ್ರಿತ ಪರಿಹಾರಗಳನ್ನು ನೀಡುವ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಬದ್ಧವಾಗಿದ್ದೇವೆ’’ ಎಂದು ಪರ್ಮಿಂದರ್ ಕೊಹ್ಲಿ ತಿಳಿಸಿದರು.

ಶೆಲ್‍ನ ಏಷ್ಯಾ ವಿಭಾಗದ ಫ್ಲೀಟ್ ಸಲೂಶನ್ಸ್‍ನ ಪ್ರಧಾನ ವ್ಯವಸ್ಥಾಪಕರಾದ ಝೈನ್ ಹಾಕ್ ಅವರು ಮಾತನಾಡಿ, ``ಫ್ಲೀಟ್ ಮ್ಯಾನೇಜ್‍ಮೆಂಟ್‍ನಲ್ಲಿ ವಿಸ್ತಾರವಾದ ಅನುಭವವನ್ನು ಶೆಲ್ ಹೊಂದಿದ್ದು, 30 ಕ್ಕೂ ಹೆಚ್ಚು ದೇಶಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ನಾವು ಫ್ಲೀಟ್ ಓನರ್‍ಗಳ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅದಕ್ಕೆ ತಕ್ಕಂತೆ ಪರಿಹಾರಗಳನ್ನು ಪೂರೈಸುತ್ತಿದ್ದೇವೆ. ಇದೀಗ ನಾವು ಜಾಗತಿಕ ಮಟ್ಟದ ಸಾರಿಗೆ ಪರಿಹಾರಗಳನ್ನು ಭಾರತೀಯ ಗ್ರಾಹಕರಿಗೆ ನೀಡಲಿದ್ದೇವೆ ಎಂಬ ಭರವಸೆಯನ್ನು ನೀಡುತ್ತಿದ್ದೇವೆ ಎಂದರು. 

ಈ ಮೂಲಕ ಸಾರಿಗೆ ಕಾರ್ಯಾಚರಣೆಯನ್ನು ಸುಗಮವಾಗುವಂತೆ ಮಾಡಲಿದ್ದೇವೆ. ನಾವು ಭಾರತಕ್ಕೆ ಹೊಸ ಹೊಸ ಅತ್ಯುತ್ತಮವಾದ ಉತ್ಪನ್ನಗಳನ್ನು ತರುವುದನ್ನು ಮುಂದುವರಿಸಲಿದ್ದೇವೆ. ಈ ಮೂಲಕ ಬದಲಾಗುತ್ತಿರುವ ಗ್ರಾಹಕರ ಮತ್ತು ಮಾರುಕಟ್ಟೆಯ ಬೇಡಿಕೆಗಳಿಗೆ ಅನುಗುಣವಾಗಿ ಸೇವೆಗಳನ್ನು ಒದಗಿಸಲಿದ್ದೇವೆ. ಅದು ಭಾರೀ ಸರಕುಗಳನ್ನು ಸಾಗಿಸುವ ವಾಹನವಾಗಿರಲಿ ಅಥವಾ ಪ್ರಯಾಣಿಕರನ್ನು ಹೊತ್ತೊಯ್ಯುವ ಟ್ಯಾಕ್ಸಿ ಆಗಿರಲಿ ಎಲ್ಲಾ ರೀತಿಯ ವಾಹನಗಳಿಗೆ ಸೂಕ್ತವಾದ ಪರಿಹಾರಗಳನ್ನು ಶೆಲ್ ಒದಗಿಸಲಿದೆ. ಒಟ್ಟಾರೆ ವಿವಿಧ ಬಗೆಯ ಉದ್ಯಮಗಳು ಸುಗಮ ಮತ್ತು ಸರಳವಾಗಿ ಕಾರ್ಯಾಚರಣೆ ಮಾಡಬೇಕೆಂಬುದು ನಮ್ಮ ಉದ್ದೇಶವಾಗಿದೆ’’ ಎಂದು ಝೈನ್ ಹಾಕ್ ಹೇಳಿದರು.  

ಶೆಲ್ ಫ್ಲೀಟ್ ಸಲೂಶನ್ಸ್‍ನ ಆಫರ್:

ಶೆಲ್ ಫ್ಯೂಯೆಲ್ಸ್: ಎಕ್ಸ್‍ಕ್ಲೂಸಿವ್ ಡ್ಯುಯೆಲ್ ಡಿಟರ್ಜೆಂಟ್ ತಂತ್ರಜ್ಞಾನವಾದ ಡೈನಾಫ್ಲೆಕ್ಸ್‍ನಿಂದ ಈ ಶೆಲ್ ಫ್ಯೂಯೆಲ್ಸ್ ಅನ್ನು ರೂಪಿಸಲಾಗಿದೆ. ಈ ತಂತ್ರಜ್ಞಾನವು ಕಾಂಪ್ಲೆಕ್ಸ್ ಬ್ಲೆಂಡ್‍ಗಳಿಂದ ಕೂಡಿದ್ದು, ಇಂಜಿನ್‍ನನ್ನು ಶಕ್ತಿಶಾಲಿ ಶುದ್ಧ ಮಾಡುವ ಅಂಶಗಳನ್ನು ಹೊಂದಿರುತ್ತದೆ. ಇದು ಹೊಸ ಮತ್ತು ಹಳೆಯ ಇಂಜಿನ್ ತಂತ್ರಜ್ಞಾನಗಳಿಗೆ ಪೂರಕವಾಗಿದ್ದು, ಭಾರತದಲ್ಲಿನ ವೈವಿಧ್ಯಮಯ ಫ್ಲೀಟ್‍ಗಳ ಆರೈಕೆಗೆ ಸೂಕ್ತವಾಗಿದೆ.

ಶೆಲ್ ಫ್ಲೀಟ್ ಪ್ರೀಪೇಯ್ಡ್: ಈ ಶೆಲ್ ಪ್ರೀಪೇಯ್ಡ್ ಪ್ರೋಗ್ರಾಂ ಇಂಧನ ಬಳಕೆ, ಸುಲಭವಾದ ಕಾರ್ಯಾಚರಣೆ, ಉನ್ನತೀಕರಿಸಿದ ಅನುಕೂಲತೆಗಳ ಮೂಲಕ ಫ್ಲೀಟ್ ಓನರ್‍ಗಳಿಗೆ ಪಾರದರ್ಶಕವಾದ ಕಾರ್ಯಾಚರಣೆಗಳಿಗೆ ಅವಕಾಶ ಮಾಡಿಕೊಡುತ್ತದೆ. ಇದಲ್ಲದೇ, ವಂಚನೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಶೆಲ್ ಟೆಲಿಮ್ಯಾಟಿಕ್ಸ್: ಶೆಲ್ ಟೆಲಿಮ್ಯಾಟಿಕ್ಸ್ ಆಟೋಮೋಟಿವ್ ಇಂಡಸ್ಟ್ರಿ ಸ್ಟಾಂಡರ್ಡ್ 140 ಯನ್ನು ಹೊಂದಿದೆ ಮತ್ತು ನಿಯಂತ್ರಣ, ಸುರಕ್ಷತೆ ಮತ್ತು ಕಾರ್ಯಕ್ಷಮತೆ ಮಟ್ಟವನ್ನು ಹೆಚ್ಚಿಸಲಿದೆ.

click me!