ಟಾಟಾ ಇಂಟರ್ನ್‌ಶಿಪ್‌ನಲ್ಲಿ ನನ್ನ 6 ತಿಂಗಳು ವ್ಯರ್ಥವಾಯ್ತು; ರತನ್ ಟಾಟಾ!

By Suvarna NewsFirst Published Feb 24, 2020, 10:06 PM IST
Highlights

ಟಾಟಾ ಗ್ರೂಪ್ ಚೇರ್ಮೆನ್ ರತನ್ ಟಾಟಾ ಭಾರತದ ಅತೀ ದೊಡ್ಡ ಹಾಗೂ ಯಶಸ್ವಿ ಉದ್ಯಮಿ. ಇದೀಗ ತಮ್ಮದೇ ಟಾಟಾ ಗ್ರೂಪ್‌ನಲ್ಲಿ ಆರಂಭಿಕ ದಿನದಲ್ಲಿ ಮಾಡಿದ ಇಂಟರ್ನ್‌ಶಿಪ್ ಸಮಯ ವ್ಯರ್ಥ ಎಂದಿದ್ದಾರೆ.
 

ಮುಂಬೈ(ಫೆ.24):  ಟಾಟಾ ಗ್ರೂಪ್ ಆಫ್ ಕಂಪನಿ ವಿಶ್ವದ ಅತೀ ದೊಡ್ಡ ಕಂಪನಿಗಳಲ್ಲೊಂದು. ಹಾಲಿ ಚೇರ್ಮೆನ್ ರತನ್ ಟಾಟಾ ಕಾಲೇಜು ಮುಗಿಸಿ ತಮ್ಮದೇ ಟಾಟಾ ಸಂಸ್ಥೆಯಲ್ಲಿ ಮಾಡಿದ ತರಬೇತಿ ಸಮಯ ವ್ಯರ್ಥವಾಯಿತೇ ಹೊರತು ಏನೂ ಕಲಿಯಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಸೇಫ್ಟಿಗೆ ಮೊದಲ ಆದ್ಯತೆ- 5 ಸ್ಟಾರ್ ಕಾರನ್ನೇ ನೀಡುತ್ತೇವೆ: ರತನ್ ಟಾಟಾ

ವಿದ್ಯಾಬ್ಯಾಸ ಮುಗಿಸಿದ ರತನ್ ಟಾಟಾ, ಟಾಟಾ ಗ್ರೂಪ್‌ನಲ್ಲಿ ಇಂಟರ್ನ್‌ಶಿಪ್ ಮಾಡಲು ಮುಂದಾದರು. ಟಾಟಾ ಪುತ್ರನಿಗೆ ತಮ್ಮದೇ ಸಂಸ್ಥೆಯಲ್ಲಿ ಯಾರೂ ಕೂಡ ಏನನ್ನೂ ಹೇಳಿಕೊಡಲಿಲ್ಲ. ಪೋಷಕರು ಸುಮ್ಮನಿದ್ದರು, ಇತ್ತ ಟಾಟಾ ಸಂಸ್ಥೆಯ ಉದ್ಯೋಗಿಗಳು ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ ನನ್ನ 6 ತಿಂಗಳ ಸಮಯ ವ್ಯರ್ಥವಾಯಿತು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಮುಂಬೈ ಹುಡುಗನ ಡಾಗ್ ಕೇರ್; ಟಾಟಾ ಮಾಲೀಕರಿಂದ ಸಿಕ್ತು ಭರ್ಜರಿ ಆಫರ್!

ನನ್ನ ಮೊದಲ ಕೆಲಸ ಟಾಟಾ ಸ್ಟೀಲ್ ಕಂಪನಿಯಲ್ಲಿ. ಸ್ಟೀಲ್ ಕಂಪನಿ ಸೇರಿಕೊಂಡ ಬಳಿಕ ನನಗೆ ಕೆಲಸಗಳನ್ನು ನೀಡಿದರು. ಅಲ್ಲಿಂದ ಕೆಲಸವನ್ನು ಹೆಚ್ಚು ಪ್ರೀತಿಸತೊಡಗಿದೆ. 6 ವರ್ಷ ನಾನು  ಜೆಮ್‌ಶೆಡ್‌ಪುರದಲ್ಲಿ ಕಾರ್ಯನಿರ್ವಹಿಸಿದೆ. ಟಾಟಾ ಸಂಸ್ಥೆಯ ಅಧಿಕಾರ ವಹಿಸಿಕೊಂಡಾಗ ಟೀಕೆಗಳ ಸುರಿಮಳೆ ಎದುರಿಸಿದೆ ಎಂದು ರತನ್ ಟಾಟಾ ಹೇಳಿದ್ದಾರೆ

click me!