ಕೊರೊನಾ ವೈರಸ್ ಬೆನ್ನಲ್ಲೇ ಚೀನಾಗೆ ಮತ್ತೊಂದು ಹೊಡೆತ; ಹೊಂಡಾ ಘಟಕ ಸ್ಥಗಿತ!

By Suvarna News  |  First Published Feb 3, 2020, 4:12 PM IST

ಚೀನಾದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ರೋಗಾಣುವಿನಿಂದ ಜನರನ್ನು ರಕ್ಷಿಸಲು ಚೀನಾ ಸರ್ಕಾರ ಹರಸಾಹಸ ಪಡುತ್ತಿದೆ. ಕೊರೊನಾ ವೈರಸ್ ಚೀನಾ ಆರ್ಥಿಕತೆ ಮೇಲೆ ತೀವ್ರ ಹೊಡೆತ ನೀಡಿದೆ. ಹಲವು ಕಂಪನಿಗಳು ಬಾಗಿಲು ಮುಚ್ಚಿದೆ. ಇದೀಗ ಹೊಂಡಾ ಕಾರು ಘಟಕಕ್ಕೆ ಕೊರೊನಾ ವೈರಸ್ ಇನ್ನಿಲ್ಲದ ಸಂಕಷ್ಟ ತಂದಿದೆ


ವುಹಾನ್(ಫೆ.03): ಚೀನಾದ ಕೊರೊನಾ ವೈರಸ್ ಇದೀಗ ಭಾಕತಕ್ಕೆ ಆಗಮಿಸಿದೆ. ಹೀಗಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಎಲ್ಲೆಡೆ ತೀವ್ರ ನಿಗಾ ವಹಿಸಲಾಗಿದೆ. ಚೀನಾದಲ್ಲಿ ಕೊರೊನಾ ವೈರಸ್‌ನಿಂದ ಸಾವಿನ ಸಂಖ್ಯೆ ಏರುತ್ತಿದೆ. ವೈರಸ್‌ನಿಂದ ತತ್ತರಿಸಿರುವ ಚೀನಾಗೆ ಇದೀಗ ಮತ್ತೊಂದು ಹೊಡೆತ ಬಿದ್ದಿದೆ. ವುಹಾನ್‌ನಲ್ಲಿರುವ ಹೊಂಡಾ ಕಾರುು ಘಟಕ ತಾತ್ಕಾಲಿಕ ಸ್ಥಗಿತಗೊಂಡಿದೆ.

ಇದನ್ನೂ ಓದಿ: ಭಾರತದಲ್ಲಿ ನಡೆಯಲಿರುವ ಆಟೋ ಎಕ್ಸ್ಪೋ 2020ಗೆ ಕೊರೊನಾ ಭೀತಿ!

Latest Videos

undefined

 ಬಹುತೇಕಾ ಎಲ್ಲಾ ಆಟೋಮೊಬೈಲ್ ಕಂಪನಿಗಳ ಕಾರು ಘಟಕ ಚೀನಾದಲ್ಲಿದೆ. ಇದೀಗ ಒಂದೊಂದೆ ಘಟಕಲು ಸ್ಥಗಿತಗೊಳ್ಳುತ್ತಿದೆ. ಕೊರೊನಾ ವೈರಸ್‌ನಿಂದ ಜರ್ಝರಿತವಾಗಿರುವ ವುಹಾನ್ ನಗರದಲ್ಲಿನ ಹೊಂಡಾ ಘಟಕ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಫೆ.13ರ ವರೆಗೆ ಸ್ಥಗತಿಗೊಳಿಸಲಾಗಿದೆ. ಆದರೆ ಮತ್ತೆ ಆರಂಭ ದಿನಾಂಕ ಇನ್ನು ಸ್ಪಷ್ಟವಿಲ್ಲ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: ಬಜೆಟ್ ಬೆನ್ನಲ್ಲೇ ಮತ್ತೊಂದು ಶಾಕ್; ಆಟೋಮೊಬೈಲ್ ಮಾರಾಟ ಕುಸಿತ!.

ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಹಲವರಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ . ಯಾವುದೇ ವ್ಯವಹಾರ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಾರು ಘಟಕ ತಾತ್ಕಾಲಿಕ ಸ್ಥಗಿತಗೊಳಿಸುತ್ತಿದ್ದೇವೆ ಎಂದು ಹೊಂಡಾ ಹೇಳಿದೆ.

ಕೊರೊನಾ ವೈರಸ್ ಭೀತಿಯಿಂದ ಫೆ.7 ರಿಂದ ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್ಪೋ ಮೋಟಾರು ಶೋಗೆ ಭಾರಿ ನಿಗಾ ವಹಿಸಲಾಗಿದೆ. ಹಲವು ಚೀನಾ ಕಂಪನಿಗಳು ಭಾರತದ ಆಟೋ ಎಕ್ಸ್ಪೋದಲ್ಲಿ ಭಾಗವಹಿಸುತ್ತಿವೆ. ಹೀಗಾಗಿ ಚೀನಾದಿಂದ ಕೊರೊನಾ ವೈರಸ್ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯ ಇಲಾಖೆ ಜೊತೆ ಆಯೋಜಕರು ಮಾತುಕತೆ ನಡೆಸಿ ಮುನ್ನಚ್ಚೆರಿಕೆ ವಹಿಸಿದೆ.

ಫೆಬ್ರವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!