ಸಾರ್ವಜನಿಕ ರಸ್ತೆಯಲ್ಲಿ ರೇಸ್, ಲ್ಯಾಂಬೋರ್ಗಿನಿ, ಆಡಿ ಕಾರು ಸೀಝ್!

By Suvarna News  |  First Published Feb 3, 2020, 3:26 PM IST

ಭಾರತದಲ್ಲಿ ರೇಸ್ ಟ್ರ್ಯಾಕ್ ಎಲ್ಲಾ ಕಡೆ ಲಭ್ಯವಿಲ್ಲ. ಗ್ರೇಟರ್ ನೋಯ್ಡಾದಲ್ಲಿರುವ ಬುದ್ ಇಂಟರ್‌ನ್ಯಾಷನಲ್ ರೇಸ್ ಟ್ರ್ಯಾಕ್ ಹೊರತು ಪಡಿಸಿದರೆ ಸುಸ್ಸಜ್ಜಿತ ಟ್ರ್ಯಾಕ್‌ಗಳಿಲ್ಲ. ಹೀಗಾಗಿ ಹೆಚ್ಚಿನ ಸೂಪರ್ ಕಾರು ಮಾಲೀಕರು ಸಾರ್ವಜನಿಕ ರಸ್ತೆಯನ್ನು ರೇಸ್ ಟ್ರ್ಯಾಕ್ ಅಂದುಕೊಂಡು ಡ್ರೈವಿಂಗ್ ಮಾಡುತ್ತಾರೆ. ಹೀಗೆ ಸಾರ್ವಜನಿಕ ರಸ್ತೆಯಲ್ಲಿ ರೇಸ್ ಮಾಡುತ್ತಿದ್ದ ಸೂಪರ್ ಕಾರು ಮಾಲೀಕರಿಗೆ ಪೊಲೀಸರು ಶಾಕ್ ನೀಡಿದೆ.


ಹೈದರಾಬಾದ್(ಫೆ.03): ನಗರಗಳಲ್ಲಿ ಸೂಪರ್ ಕಾರು ಖರೀದಿಸುವ ಗ್ರಾಹಕರು ಟ್ರಾಫಿಕ್ ಜಾಮ್ ನಡುವೆ ಡ್ರೈವಿಂಗ್ ಮಾಡುವುದೇ ದೊಡ್ಡ ಸಾಹಸ. ಹೀಗಾಗಿ ಸೂಪರ್ ಕಾರು ಮಾಲೀಕರು ಔಟರ್ ರಿಂಗ್, ರೋಡ್, ನೈಸ್ ರಸ್ತೆ, ಎಕ್ಸ್‌ಪ್ರೆಸ್ ರಸ್ತೆಗಳಲ್ಲಿ ಸೂಪರ್ ಕಾರುನ್ನು ರೇಸ್ ಟ್ರ್ಯಾಕ್‌ನಲ್ಲಿ ಓಡಿಸಿದಂತೆ ಚಲಾಯಿಸುತ್ತಾರೆ. ಇದೇ ರೀತಿ ಹೈದರಾಬಾದ್‌ ಸಾರ್ವಜನಿಕ ರಸ್ತೆಯಲ್ಲಿ ರೇಸ್ ಮಾಡಿದ ದುಬಾರಿ ಕಾರುಗಳನ್ನುಪೊಲೀಸರು ಸೀಝ್ ಮಾಡಿದ್ದಾರೆ.

ಇದನ್ನೂ ಓದಿ: ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಫೋನ್ ಮೂಲಕ ಮಾತನಾಡಿದರೂ ಬೀಳುತ್ತೆ ಫೈನ್!

Tap to resize

Latest Videos

undefined

ವೀಕೆಂಡ್‌ಗಳಲ್ಲಿ ಸೂಪರ್ ಕಾರು ಮಾಲೀಕರು ಸಾರ್ವಜನಿಕ ರಸ್ತೆಗಳಲ್ಲಿ ರೇಸಿಂಗ್ ಮಾಡುತ್ತಾರೆ. ಇದರಿಂದ ಇತರ ವಾಹನ ಸವಾರರಿಗೆ ಸಮಸ್ಯೆಯಾಗುತ್ತದೆ. ಇಷ್ಟೇ ಅಲ್ಲ ಅಪಾಯದ ಸಂಭವ ಹೆಚ್ಚಾಗಿರುತ್ತೆ. ಹೀಗೆ ಸಾರ್ವಜನಿಕರಿಂದ  ದೂರು ಬಂದ ಆಧಾರದಲ್ಲಿ PVNR ಎಕ್ಸ್‌ಪ್ರೆಸ್ ಮಾರ್ಗದಲ್ಲಿ ರೇಸಿಂಗ್ ಮಾಡುತ್ತಿದ್ದ ಲ್ಯಾಂಬೋರ್ಗೀನಿ ಹುರಾಕಾನ್ ಹಾಗೂ  ಆಡಿ R8  ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: Zebra ಲೈನ್ ಕ್ರಾಸ್: ಇನ್ಸ್‌ಪೆಕ್ಟರ್ ಜನರಲ್ ಪೊಲೀಸ್ ಕಾರಿಗೆ ಡಬಲ್ ಫೈನ್!

ವಾಹನ ಸವಾರರು ದೂರು ಬಂದ ತಕ್ಷಣವೇ ರಾಜೇಂದ್ರ ನಗರ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ತಂಡ ರಚಿಸಿ PVNR ಎಕ್ಸ್‌ಪ್ರೆಸ್ ರಸ್ತೆಯಲ್ಲಿ ಕಾದು ಕುಳಿತಿದ್ದಾರೆ. ವೀಕೆಂಡ್ ಬರುತ್ತಿದ್ದಂತೆ ಸೂಪರ್ ಕಾರು ಮಾಲೀಕರ ರೇಸಿಂಗ್ ಆರಂಭವಾಗಿದೆ. ಪೊಲೀಸರು ಬೆನ್ನ ಹಿಂದೆ ಬಿದ್ದಿದ್ದಾರೆ ಎಂದು ತಿಳಿದಾಗ ಸಿನಿಮಿಯ ರೀತಿಯಲ್ಲಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ.

 

Traffic police of booked two high-end cars for ’over speeding’ on Outer Ring Road under Rajendra Nagar ps jurisdiction. and Audi cars ’caught’ participating in racing. pic.twitter.com/06lXw4qy5B

— Mohd Lateef Babla (@lateefbabla)

ಇದನ್ನೂ ಓದಿ: ತನ್ನದೇ ಬೈಕ್ ಸುಟ್ಟು ಆಕ್ರೋಶ; ವಾಹನವೂ ಹೋಯ್ತು, ಅರೆಸ್ಟ್ ಆದ!

ಆದರೆ ಪೊಲೀಸರು ಕಾರನ್ನು ಚೇಸ್ ಮಾಡಿದ್ದಾರೆ. ಸೂಪರ್ ಕಾರಾದ ಕಾರಣ ರೇಸಿಂಗ್ ಮಾಡುತ್ತಿದ್ದ ಚಾಲಕಿ ಮಾಲೀಕರು ವೇಗವಾಗಿ ಕಾರು ಚಲಾಯಿಸಿ ನಗರದೊಳಗೆ ಪ್ರವೇಶಿಸಿದ್ದಾರೆ. ಆದರೆ ಪೊಲೀಸರು ಕಾರನ್ನು ಚೇಸ್ ಮಾಡಿ ಹಿಡಿದಿದ್ದಾರೆ. ಇಷ್ಟೇ ಅಲ್ಲ, ಕಾರನ್ನು ಸೀಝ್ ಮಾಡಿದ್ದಾರೆ.
 

click me!