ಸಲ್ಟೋಸ್ ಪ್ರತಿಸ್ಪರ್ಧಿ ವೋಕ್ಸ್‌ವ್ಯಾಗನ್ AO SUV ಬಿಡುಗಡೆಗೆ ರೆಡಿ!

Suvarna News   | Asianet News
Published : Feb 02, 2020, 10:04 PM IST
ಸಲ್ಟೋಸ್ ಪ್ರತಿಸ್ಪರ್ಧಿ ವೋಕ್ಸ್‌ವ್ಯಾಗನ್ AO SUV ಬಿಡುಗಡೆಗೆ ರೆಡಿ!

ಸಾರಾಂಶ

ಹ್ಯುಂಡೈ ಕ್ರೆಟಾ, ನಿಸಾನ್ ಕಿಕ್ಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಕಿಯಾ ಸೆಲ್ಟೋಸ್ ಬಿಡುಗಡೆಯಾಗಿ ದಾಖಲೆ ಬರೆದಿದೆ. ಇದೀಗ ಸೆಲ್ಟೋಸ್ ಕಾರಿಗೆ ಪೈಪೋಟಿ ನೀಡಲು ಮೇಡ್ ಇನ್ ಇಂಡಿಯಾ ವೋಕ್ಸ್‌ವ್ಯಾಗನ್ SUV ಕಾರು ಬಿಡುಗಡೆಯಾಗುತ್ತಿದೆ. ನೂತನ ಕಾರಿನ ವಿವರ ಇಲ್ಲಿದೆ.

ನವದೆಹಲಿ(ಫೆ.02): ಭಾರತದಲ್ಲಿ SUV ಕಾರಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಪೈಪೋಟಿ ಜೋರಾಗಿದೆ. ಪ್ರತಿ ಆಟೋಮೊಬೈಲ್ ಕಂಪನಿಗಳು ಹೊಸ ಹೊಸ SUV ಕಾರು ಬಿಡುಗಡೆ ಮಾಡುತ್ತಿದೆ. ಇದೀಗ ವೋಕ್ಸ್‌ವ್ಯಾಗನ್ ಸರದಿ. ಸಂಪೂರ್ಣವಾಗಿ ಭಾರತದಲ್ಲೇ ತಯಾರಾದ ವೋಕ್ಸ್‌ವ್ಯಾಗನ್ AO ಕಾರು ಸೋಮವಾರ(ಫೆ.03) ಬಿಡುಗಡೆಯಾಗುತ್ತಿದೆ. 

ಇದನ್ನೂ ಓದಿ: ಮಹತ್ತರ ಬದಲಾವಣೆಯೊಂದಿಗೆ ಬರುತ್ತಿದೆ ಹ್ಯುಂಡೈ ಕ್ರೆಟಾ ಕಾರು!

ವೋಕ್ಸ್‌ವ್ಯಾಗನ್ AO ಕಾರು  2,651mm ವೀಲ್ಹ್‌ಬೇಸ್ ಹೊಂದಿದೆ.  ನೂತನ ಕಾರು 2 ಪೆಟ್ರೋಲ್ ಎಂಜಿನ್ ವೇರಿಯೆಂಟ್‌ನಲ್ಲಿ ಬಿಡುಗಡೆಯಾಗವ ಸಾಧ್ಯತೆ ಇದೆ.  1.0 ಲೀಟರ್, 3 ಸಿಲಿಂಡರ್, ಟರ್ಬೋಚಾರ್ಜ್ಡಡ್ ಎಂಜಿನ್, 115bhp ಪವರ್ ಹೊಂದಿದೆ. ಇನ್ನು 1.5-ಲೀಟಪ್ EVO TSI ಎಂಜಿನ್ ವೇರಿಯೆಂಟ್ ಬಿಡುಗಡೆಯಾಗುವ ಸಾಧ್ಯತೆ ಇದೆ.  6 ಮ್ಯಾನ್ಯುಯೆಲ್ ಹಾಗೂ 7 ಸ್ಪೀಡ್ ಡ್ಯುಯೆಲ್ ಕ್ಲಚ್ ಅಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.

ಇದನ್ನೂ ಓದಿ: BS6 ಹೊಂಡಾ ಅಮೇಜ್ ಬಿಡುಗಡೆ; ಬೆಲೆ 6.10 ಲಕ್ಷ ರೂ!

ಹೆಚ್ಚು ಆಕರ್ಷಕ ಹಾಗೂ ಬಲಿಷ್ಠ SUV ಕಾರು ಇದಾಗಿದ್ದು, ಗ್ರಾಹಕರಿಗೆ ಆರಾಮದಾಯದ ಪ್ರಯಾಣ ನೀಡಲಿದೆ ಎಂದು ಕಂಪನಿ ಹೇಳಿದೆ. ನೂತನ SUV ಜೊತೆಗೆ ವೋಕ್ಸ್‌ವ್ಯಾಗನ್ ಟಿಗ್ವಾನ್ ಅಪ್‌ಗ್ರೇಡ್ ಸೇರಿದಂತೆ 4 ಕಾರುಗಳನ್ನು ನವದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್ಪೋದಲ್ಲಿ ಅನಾವರಣ ಮಾಡಲಾಗುತ್ತಿದೆ.  

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ