ಹೊಂಡಾ CBR650R ಸ್ಪೋರ್ಟ್ ಬೈಕ್ ಬಿಡುಗಡೆ!

Published : Apr 22, 2019, 04:50 PM IST
ಹೊಂಡಾ CBR650R ಸ್ಪೋರ್ಟ್ ಬೈಕ್ ಬಿಡುಗಡೆ!

ಸಾರಾಂಶ

ಹೊಂಡಾ CBR650R ಸ್ಪೋರ್ಟ್ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಬಲಿಷ್ಠ ಎಂಜಿನ್, ಗರಿಷ್ಠ ಪವರ್ ಹೊಂದಿರುವ ನೂತನ ಬೈಕ್ ಆಧುನಿಕ ತಂತ್ರಜ್ಞಾನ ಒಳಗೊಂಡಿದೆ. ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ನವದೆಹಲಿ(ಏ.22): ಹೊಂಡಾ ಮೋಟರ್‌ಸೈಕಲ್ & ಸ್ಕೂಟರ್ ಇಂಡಿಯಾ ಇದೀಗ ನೂತನ ಸ್ಪೋರ್ಟ್ ಬೈಕ್ ಬಿಡುಗಡೆ ಮಾಡಿದೆ. ಹೊಂಡಾ CBR650R ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. 2 ಬಣ್ಣಗಳಲ್ಲಿ ನೂತನ ಬೈಕ್ ಲಭ್ಯವಿದೆ. ಹೊಂಡಾ CBR650F ಬೈಕ್ ಬದಲು ಇದೀಗ ನೂತನ CBR650F ಬೇಕ್ ಬಿಡುಗಡೆಯಾಗಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಬಜಾಜ್ ಅವೆಂಜರ್ 160 ABS ಬಿಡುಗಡೆ- 180 ಸ್ಥಗಿತ!

ಭಾರತದಲ್ಲಿ ಬಿಡುಗಡೆಯಾಗಿರುವ ಹೊಂಡಾ CBR650R ಬೈಕ್  649 cc, ಲಿಕ್ವಿಡ್ ಕೂಲ್ಡ್, ಇನ್‌ಲೈನ್ 4 ಸಿಲಿಂಡರ್ ಎಂಜಿನ್ ಹೊಂದಿದ್ದು, 87 bhp ಪವರ್ (@11,500 rpm) ಹಾಗೂ  60.1 Nm (@8000 rpm) ಪೀಕ್ ಟಾರ್ಕ್ ಉತ್ಪಾದಿಸಲಿದೆ. ವಿದೇಶಗಳಲ್ಲಿ ಬಿಡುಗಡೆಯಾಗಿರು  ಹೊಂಡಾ  CBR650R ಬೈಕ್  94 bhp ಪವರ್ ಹಾಗೂ  64 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.

ಇದನ್ನೂ ಓದಿ: ದ್ವಿಚಕ್ರ ವಾಹನದ ಜೊತೆಗೆ ಹೆಲ್ಮೆಟ್ ಖರೀದಿ ಕಡ್ಡಾಯ!

ಹೊಂಡಾ CBR650R ಸ್ಪೋರ್ಟ್ ಬೈಕ್ ಬೆಲೆ 7.7 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಡ್ಯುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್), ಹೊಂಡಾ ಟ್ರಾಕ್ಷನ್ ಕಂಟ್ರೋಲ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಈ ಬೈಕ್‌ನಲ್ಲಿದೆ. ಗ್ರ್ಯಾಂಡ್ ಪ್ರಿಕ್ಸ್ ರೆಡ್ ಹಾಗೂ ಗನ್‌ಪೌಡರ್ ಬ್ಲಾಕ್ ಕಲರ್‌ಗಳಲ್ಲಿ ನೂತನ ಬೈಕ್ ಲಭ್ಯವಿದೆ.
 

PREV
click me!

Recommended Stories

ಬರುತ್ತಿದೆ ಎಥೆನಾಲ್ ಮಿಶ್ರಿತ ಇಂಧನದಲ್ಲಿ ಓಡುವ ಮಾರುತಿ ಬ್ರೆಝಾ, ಫ್ರಾಂಕ್ಸ್ ಕಾರು
ಒಂದು ಕೆಜಿ ಸಿಎನ್‌ಜಿಗೆ 34 ಕಿ.ಮೀ ಮೈಲೇಜ್! ನಿಮ್ಮ ಹಣ ಉಳಿಸಲಿವೆ ಈ 5 ಬಜೆಟ್ CNG ಕಾರುಗಳು