ಮಾರುತಿ ಬಲೆನೊ ಮೈಲ್ಡ್ ಹೈಬ್ರಿಡ್ ಕಾರು ಬಿಡುಗಡೆ- 23.87 Kmpl ಮೈಲೇಜ್!

ಮಾರುತಿ ಸುಜುಕಿ ಬಲೆನೊ ಕಾರು ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ನೂತನ ಕಾರು ಮೈಲ್ಡ್ ಹೈಬ್ರಿಡ್ ಕಾರಾಗಿ ಬಿಡುಗಡೆ ಮಾಡಲಾಗಿದೆ. ಈ ಕಾರಿನ  ವಿಶೇಷತೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ವಿವರ.
 


ನವದೆಹಲಿ(ಏ.22): ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಮಾರುತಿ ಬಲೆನೊ ಗರಿಷ್ಠ ಮಾರಾಟ ದಾಖಲೆ ಹೊಂದಿದೆ. ಇದೀಗ ಮಾರುತಿ ಬಲೆನೊ ಮೈಲ್ಡ್ ಹೈಬ್ರಿಡ್ ಕಾರು ಬಿಡುಗಡೆಯಾಗಿದೆ. ಭಾರತ್ ಸ್ಟೇಜ್ BS-VI ಎಮಿಶನ್ ನಿಮಯ ಕೂಡ ಪಾಲಿಸಿದೆ. ನೂತನ ಬಲೆನೊ ಕಾರು, ಡೆಲ್ಟಾ ಹಾಗೂ ಝೆಟಾ ಎರಡು ವೇರಿಯೆಂಟ್‌ಗಳಲ್ಲಿ ಮಾತ್ರ ಲಭ್ಯವಿದೆ.

ಇದನ್ನೂ ಓದಿ: ಹೊಂಡಾ ಎಲೆಕ್ಟ್ರಿಕ್ ಕಾರು ಅನಾವರಣ- 340 ಕಿ.ಮಿ ಮೈಲೇಜ್!

Latest Videos

ಬಲೆನೋ ಹೈಬ್ರಿಡ್ ಕಾರು ಪ್ರತಿ ಲೀಟರ್ ಪೆಟ್ರೋಲ್‌ಗೆ 23.87 ಮೈಲೇಜ್ ನೀಡಲಿದೆ. ಇನ್ನೂ ಹೈಬ್ರಿಡ್ ರಹಿತ ಬಲೆನೊ ಕಾರು  21.4 Kmpl ಮೈಲೇಜ್ ನೀಡುತ್ತಿದೆ. ನೂತನ ಬಲೆನೊ ಹೈಬ್ರಿಡ್ ಕಾರಿನ ಬೆಲೆ 90,000  ರೂಪಾಯಿ ಹೆಚ್ಚಿಗೆಯಾಗಿದೆ. ಹೈಬ್ರಿಡ್ ಡೆಲ್ಟಾ ಕಾರಿನ ಬೆಲೆ 7.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ) ಹಾಗೂ ಝೆಟಾ ಕಾರಿನ ಬೆಲೆ 7.86 ಲಕ್ಷ ರೂಪಾಯಿಎಕ್ಸ್ ಶೋ ರೂಂ ದೆಹಲಿ) .

ಇದನ್ನೂ ಓದಿ: ಬರುತ್ತಿದೆ ಕಡಿಮೆ ಬೆಲೆಯ ರೆನಾಲ್ಟ್ ಕ್ವಿಡ್ SUV ಕಾರು!

1.2 ಲೀಟರ್, 4 ಸಿಲಿಂಡರ್, VVT ಪೆಟ್ರೋಲ್ ಹಾಗೂ ಡುಯೆಲ್‌ಜೆಟ್ ಹೈಬ್ರಿಡ್ ಎಂಜಿನ್ ಹೊಂದಿದೆ.  82 Bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. ಮಾರುತಿ ಸಿಜಾಯ್ ಹಾಗೂ ಎರ್ಟಿಗಾ ಕೂಡ ಹೈಬ್ರಿಡ್ ಎಂಜಿನ್ ಹೊಂದಿದೆ. ಆದರೆ ಈ ಎರಡು ಕಾರುಗಳು 1.5 ಲೀಟರ್ ಎಂಜಿನ್ ಹೊಂದಿದೆ.

click me!