20ನೇ ವರ್ಷದ ಸಂಭ್ರಮದಲ್ಲಿ ಹೊಂಡಾ ಆ್ಯಕ್ಟೀವಾ; ಸ್ಪೆಷಲ್ ಎಡಿಶನ್ ಸ್ಕೂಟರ್ ಬಿಡುಗಡೆ!

Published : Nov 27, 2020, 05:57 PM IST
20ನೇ ವರ್ಷದ ಸಂಭ್ರಮದಲ್ಲಿ ಹೊಂಡಾ ಆ್ಯಕ್ಟೀವಾ; ಸ್ಪೆಷಲ್ ಎಡಿಶನ್ ಸ್ಕೂಟರ್ ಬಿಡುಗಡೆ!

ಸಾರಾಂಶ

ಸ್ಕೂಟರ್ ವಿಭಾಗದಲ್ಲಿ ಭಾರತದ ನಂಬರ್ 1 ಖ್ಯಾತಿಯ, ಜನರ ಅಚ್ಚು ಮೆಚ್ಚಿನ ಹೊಂಡಾ ಆ್ಯಕ್ಟೀವಾ ಇದೀಗ 20ನೇ ವರ್ಷದ ಸಂಭ್ರಮದಲ್ಲಿದೆ. ಈ ಸಂಭ್ರಮದಲ್ಲಿ ಸ್ಪೆಷಲ್ ಎಡಿಶನ್ ಸ್ಕೂಟರ್ ಬಿಡುಗಡೆ ಮಾಡಿದೆ.

ನವದೆಹಲಿ(ನ.27): 20ನೇ ವರ್ಷಾಚರಣೆ ಸಂಭ್ರಮ. ಹೌದು, ಹೊಂಡಾ ಆ್ಯಕ್ಟಿವಾ ಸ್ಕೂಟರ್‌ಗೆ ಇದೀಗ ಭಾರತದಲ್ಲಿ 20 ವರ್ಷ ಪೂರೈಸಿದೆ.  ಕಳೆದ 20 ವರ್ಷಗಳಿಂದ ಭಾರತದ ಸ್ಕೂಟರ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡು ಬಂದಿರುವ ಹೊಂಡಾ ಆ್ಯಕ್ಟೀವಾ ಇದೀಗ ಸ್ಪೆಷಲ್ ಎಡಿಶನ್ ಸ್ಕೂಟರ್ ಬಿಡುಗಡೆ ಮಾಡಿದೆ. 

ಹೊಂಡಾ ಆ್ಯಕ್ಟೀವಾ 6G ಸ್ಕೂಟರ್ ಬಿಡುಗಡೆ; ಇಲ್ಲಿದೆ ಬೆಲೆ, ವಿಶೇಷತೆ!...

20 ವರ್ಷಗಳಲ್ಲಿ 2 ಕೋಟಿ ಗ್ರಾಹಕರನ್ನು ಹೊಂದಿದ ಸಾಧನೆಗೆ ಹೊಂಡಾ ಆ್ಯಕ್ಟೀವಾ ಪಾತ್ರವಾಗಿದೆ. 20ನೇ ವರ್ಷಾಚರಣೆ ಸಂಭ್ರಮದಲ್ಲಿ ಹೊಂಡಾ ಇದೀಗ ಆ್ಯಕ್ಟೀವಾ 6G ಸ್ಪೆಷಲ್ ಎಡಿಶನ್ ಸ್ಕೂಟರ್ ಬಿಡುಗಡೆ ಮಾಡಿದೆ. ನೂತನ ಆ್ಯಕ್ಟೀವಾ 6G ಸ್ಪೆಷಲ್ ಎಡಿಶನ್ ಸ್ಕೂಟರ್ ಬೆಲೆ 65,316 ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ.

ಇವನೆಂಥಾ ಕಿಲಾಡಿ! ಚೀಲದಲ್ಲಿ ನಾಣ್ಯ ತಂದು ಸ್ಕೂಟರ್‌ ಖರೀದಿಸಿದ!

ಸದ್ಯ ಮಾರುಕಟ್ಟೆಯಲ್ಲಿರುವ ಆ್ಯಕ್ಟೀವಾ ಸ್ಕೂಟರ್‌ಗಿಂತ ಸ್ಪೆಷಲ್ ಎಡಿಶನ್ ಆ್ಯಕ್ಟೀವಾ 6G ಸ್ಕೂಟರರ್ ಬೆಲೆ 1,500 ರೂಪಾಯಿ ದುಬಾರಿಯಾಗಿದೆ.  ಸ್ಪೆಷಲ್ ಎಡಿಶನ್ ಕಾರಣ ಬ್ರೌನ್ ಬಣ್ಣ ಹಾಗೂ ಗೋಲ್ಡನ್ ಫಿನೀಶ್ ನೀಡಲಾಗಿದೆ. ಆ್ಯಕ್ಟೀವಾ ಲೋಗೋ ಸೇರಿದಂತೆ ಗ್ರಾಫಿಕ್ಸ್ ಡಿಸೈನ್‌ಗಳು ಗೋಲ್ಡನ್ ಬಣ್ಣದಲ್ಲಿದೆ.

ಬಿಎಸ್‌6 ಎಮಿಶನ್ ಎಂಜಿನ್, 110 ಸಿಸಿ ಹೊಂದಿದೆ. 7.68 hp ಪವರ್ ಹಾಗೂ 8.79nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಸ್ಟಾಂಡರ್ಡ್ ಹಾಗೂ ಡಿಲೆಕ್ಸ್ ವೇರಿಯೆಂಟ್‌ಗಳಲ್ಲಿ ಸ್ಪೆಷಲ್ ಎಡಿಶನ್ ಸ್ಕೂಟರ್ ಲಭ್ಯವಿದೆ. 

20 ವರ್ಷಗಳಿಂದ ಹೊಂಡಾ ಆ್ಯಕ್ಟೀವಾ ಭಾರತದ ಮಾರುಕಟ್ಟೆಯಲ್ಲಿ ನಂಬರ್ 1 ದ್ವಿಚಕ್ರ ವಾಹನವಾಗಿ ಗುರುತಿಸಿಕೊಂಡಿದೆ. ಆ್ಯಕ್ಟೀವಾಗೆ ಪ್ರತಿಸ್ಪರ್ಧಿಯಾಗಿ ಹಲವು ಸ್ಕೂಟರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇತರ ಹಲವು ದ್ವಿಚಕ್ರವಾಹನಗಳು ಅಗ್ರಸ್ಥಾನಕ್ಕೆ ತೀವ್ರ ಪೈಪೋಟಿ ನೀಡುತ್ತಿದೆ. ಆದರೆ ಆ್ಯಕ್ಟೀವಾ ಗ್ರಾಹಕರ ನಂಬಿಕೆ ಉಳಿಸಿಕೊಂಡಿದೆ

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ