ಪೆಟ್ರೋಲ್, ಡೀಸೆಲ್ ಬೆಲೆ ಶತಕದತ್ತ ಮುನ್ನಗ್ಗುತ್ತಿದೆ. ಕಳೆದೊಂದು ವಾರದಿಂದ ಇಂಧನ ಬೆಲೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ವಸ್ತುಗಳ ಬೆಲೆಯೂ ಏರಿಕೆಯಾಗುವ ಸೂಚನೆ ಸಿಕ್ಕಿದೆ. ಮೊದಲೇ ಕೊರೋನಾದಿಂದ ಹೈರಾಣಾಗಿರುವ ಜನರ ಬದುಕಿಗೆ ಇದೀಗ ಪೆಟ್ರೋಲ್, ಡೀಸೆಲ್ ಕೊಳ್ಳಿ ಇಡುವಂತಿದೆ.
ದೆಹಲಿ(ನ.27); ಜಾಗತಿಮಟ್ಟಜಲ್ಲಿ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಕಳೆದೊಂದು ವಾರದಿಂದ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸಲ್ ಬೆಲೆ ಏರಿಕೆಯಾಗುತ್ತಿದೆ. ಶುಕ್ರವಾರ(ನ.27): ಪೆಟ್ರೋಲ್ ಬೆಲೆ 19 ಪೈಸೆ ಹಾಗೂ ಡೀಸೆಲ್ ಬಲೆ 24 ಪೈಸೆ ಹೆಚ್ಚಳವಾಗಿದೆ.
2 ತಿಂಗಳ ಬಳಿಕ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!.
ದೆಹಯಲ್ಲಿ ಶುಕ್ರವಾರ ಪೆಟ್ರೋಲ್ ಬೆಲೆ 81.89 ರೂಪಾಯಿ ಆಗಿದೆ. ಇದು ಗುರವಾರ(ನ.26): ದೆಹಲಿಯಲ್ಲಿ ಪೆಟ್ರೋಲ್ ಬೆಲೆ 81.70 ರೂಪಾಯಿ ಆಗಿತ್ತು. ಇನ್ನು ಡೀಸೆಲ್ ಬೆಲೆ 71.86 ರೂಪಾಯಿ ಆಗಿದೆ. ಗುರವಾರ ಇದೇ ಡೀಸೆಲ್ ಬೆಲೆ 71.62 ರೂಪಾಯಿ ಆಗಿತ್ತು.
ಕಳೆದ 5 ದಿನಗಳಿಂದ ಪೆಟ್ರೋಲ್ ಬೆಲೆ ಒಟ್ಟು 83 ಪೈಸೆ ಹಾಗೂ ಡೀಸೆಲೆ ಬೆಲೆ 1.40 ರೂಪಾಯಿ ಹೆಚ್ಚಳವಾಗಿದೆ. ಕಳೆದ ಸೆಪ್ಟೆಂಬರ್ 22ರಿಂದ ಪೆಟ್ರೋಲ್ ಬೆಲೆ ಸ್ಥಿರವಾಗಿತ್ತು. ಇನ್ನು ಅಕ್ಟೋಬರ್ 2 ರಿಂದ ಡೀಸೆಲ್ ಬೆಲೆಯೂ ಸ್ಥಿರವಾಗಿತ್ತು. ಆದರೆ ಕಳೆದ ಶುಕ್ರವಾರದಿಂದ ಇಂಧನ ಬೆಲೆಯಲ್ಲಿ ಏರಿಕೆಯಾಗುತ್ತಿದೆ.
ಸತತ 4ನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ!.
ಕಚ್ಚಾ ತೈಲ ಬೆಲೆ ಹೆಚ್ಚಳ ಕಾರಣ ಪೆಟ್ರೋಲ್ ಹಾಗೂ ಡೀಸೆಲ್ ಚಿಲ್ಲರೆ ಬೆಲೆಯಲ್ಲಿ 40 ಪೈಸೆ ಹೆಚ್ಚಳ ಮಾಡಲಾಗಿದೆ. ಮಾರಾಟ ಬೆಲೆ ಸರಿದೂಗಿಸಲು ಕ್ರೂಡ್ ಆಯಿಲ್ ಮೇಲೆ 1 ಡಾಲರ್ ಹೆಚ್ಚಿಸಲಾಗಿದೆ.