ಹೊಚ್ಚ ಹೊಸ ಮಹೀಂದ್ರ ಥಾರ್ ದೇಶದಲ್ಲಿ ಭಾರಿ ಸಂಚಲನ ಮೂಡಿಸಿದೆ. ಸೆಲೆಬ್ರೆಟಿಗಳು, ರಾಜಕಾರಣಿಗಳು ಮಹೀಂದ್ರ ಥಾರ್ ಜೀಪ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಮಹೀಂದ್ರ ಥಾರ್ ಮಾಲೀಕರಿಗೆ ಹಾಗೂ ಖರೀದಿಸುವ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ಮಹೀಂದ್ರ ಥಾರ್ ಜೀಪ್ ಸುರಕ್ಷತಾ ಫಲಿತಾಂಶ ಬಹಿರಂಗವಾಗಿದೆ.
ಮುಂಬೈ(ನ.27): ಮಹೀಂದ್ರ ಥಾರ್ ಜೀಪ್ ದೇಶದಲ್ಲಿ ಬಿಡುಗಡೆಯಾಗಿರುವ SUV ಕಾರುಗಳ ಪೈಕಿ ಅತ್ಯಂತ ಭಿನ್ನ ಹಾಗೂ ತುಂಬಾ ಸ್ಪೆಷಲ್ . ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಗರಿಷ್ಠ ಥಾರ್ ಜೀಪ್ ಬುಕ್ ಆಗೋ ಮೂಲಕ ದಾಖಲೆ ಬರೆದಿದೆ. ಹಲವರು ಥಾರ್ ಖರೀದಿಗೆ ಮುಂದಾಗಿದ್ದಾರೆ. ಥಾರ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇದೀಗ ಸುರಕ್ಷತಾ ಫಲಿತಾಂಶವೂ ಬಹಿರಂಗವಾಗಿದೆ. ಥಾರ್ ಕಾರು 4 ಸ್ಟಾರ್ ರೇಟಿಂಗ್ ಪಡೆದಿದೆ.
ಬಿಡುಗಡೆಯಾದ ತಿಂಗಳಲ್ಲೇ ಥಾರ್‌ಗೆ 20000 ಬುಕ್ಕಿಂಗ್!.
5 ಸ್ಟಾರ್ ರೇಟಿಂಗ್ ಪೈಕಿ ಥಾರ್ ವಾಹನ ಇದೀಗ 4 ಸ್ಟಾರ್ ರೇಟಿಂಗ್ ಪಡೆದಿದೆ. ವಯಸ್ಕರ ಸುರಕ್ಷತೆಯಲ್ಲಿ 12.52 ಪಾಯಿಂಟ್ಸ್ ಪಡೆದಿದ್ದರೆ, ಮಕ್ಕಳ ಸುರಕ್ಷತಯಲ್ಲೆ 14.11 ಪಾಯಿಂಟ್ಸ್ ಪಡೆದಿದೆ. ಈ ಮೂಲಕ ಮಕ್ಕಳ ಹಾಗೂ ವಯಸ್ಕರ ಪ್ರಯಾಣ ಸುರಕ್ಷತೆಯಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ.
J&K ಮಾಜಿ ಮುಖ್ಯಮಂತ್ರಿ ಮೋಡಿ ಮಾಡಿದ ಮಹೀಂದ್ ಥಾರ್; ಕಣಿವೆ ರಾಜ್ಯದಲ್ಲೊಂದು ಸುತ್ತು!.
ಸುರಕ್ಷತಾ ಪರೀಕ್ಷೆಗಾಗಿ ಮಹೀಂದ್ರ ಥಾರ್ ಬೇಸಿಕ್ ಕಾರು ಬಳಸಲಾಗಿದೆ. 2 ಏರ್‌ಬ್ಯಾಗ್ ಹೊಂದಿರುವ ಕಾರು ಬಳಸಲಾಗಿತ್ತು. ಇದೀಗ 4 ಸ್ಟಾರ್ ರೇಟಿಂಗ್ ಪಡೆಯುವ ಮೂಲಕ ಮತ್ತೊಮ್ಮೆ ಭಾರತೀಯ ಕಾರುಗಳು ಗರಿಷ್ಠ ಸುರಕ್ಷತೆ ಒದಗಿಸಬಲ್ಲ ಕಾರು ಅನ್ನೋ ಮಾತನ್ನು ಉಳಿಸಿಕೊಂಡಿದೆ.
ದೇಶದಲ್ಲಿ ಮಹೀಂದ್ರ ಹಾಗೂ ಟಾಟಾ ಕಾರುಗಳು ಕೈಗೆಟುಕುವ ದರದಲ್ಲಿ ಗರಿಷ್ಠ ಸುರಕ್ಷತೆ ನೀಡುವ ಕಾರುಗಳಾಗಿವೆ. ಮಹೀಂದ್ರ XUV300 ಹಾಗಾ ಟಾಟಾದ ನೆಕ್ಸಾನ್, ಅಲ್ಟ್ರೋಜ್ ಸೇರಿದಂತ ಇತರ ಟಾಟಾ ಕಾರುಗಳು 5 ಸ್ಟಾರ್ ಸೇಫ್ಟಿ ನೀಡುತ್ತಿದೆ.