ಪ್ಲೆಶರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬಿಡುಗಡೆ ಮಾಡಿದ ಹೀರೋ !

By Suvarna NewsFirst Published Oct 16, 2020, 6:08 PM IST
Highlights

ಹೀರೋ ಮೋಟೊಕಾರ್ಪ್ ಇತ್ತೀಚೆಗಷ್ಟೆ ನೂತನ ಮ್ಯಾಸ್ಟ್ರೋ ಸ್ಟೆಲ್ತ್ 125 ಸ್ಕೂಟರ್ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ನೂತನ ಪ್ಲೆಶರ್ ಪ್ಲಸ್ ಪ್ಲಾಟಿನಂ ಸ್ಕೂಟರ್ ಬಿಡುಗಡೆ ಮಾಡಿದೆ. ನೂತನ ಸ್ಕೂಟರ್ ಬೆಲೆ ಹಾಗೂ ವಿಶೇಷತೆ ಇಲ್ಲಿದೆ.

ಬೆಂಗಳೂರು(ಅ.16): ಗ್ರಾಹಕರಿಗೆ ಆಕರ್ಷಕ ಮತ್ತು ಸಮಗ್ರ ಶ್ರೇಣಿಯ ಉತ್ಪನ್ನಗಳನ್ನು ನೀಡುತ್ತಿರುವ ಹೀರೋ ಮೋಟೊಕಾರ್ಪ್ ಇದೀಗ ಹೊಚ್ಚ ಹೊಸ ಸ್ಕೂಟರ್ ಬಿಡುಗಡೆ ಮಾಡಿದೆ.  ಹೊಸ ಪ್ಲೆಶರ್ + ಪ್ಲಾಟಿನಂ ಮಾರಕಟ್ಟೆ ಪ್ರವೇಶಿಸಿದೆ.

ಹೊಚ್ಚ ಹೊಸ ಗ್ಲಾಮರ್ ಬ್ಲೇಜ್ ಬೈಕ್ ಬಿಡುಗಡೆ ಮಾಡಿದ ಹೀರೋ!.

ಹೊಸ ಪ್ಲೆಶರ್ + ಪ್ಲಾಟಿನಂ ಇತ್ತೀಚೆಗೆ ಪರಿಚಯವಾದ ಮ್ಯಾಸ್ಟ್ರೋ ಎಡ್ಜ್ 125 ಸ್ಟೆಲ್ತ್ ಬೆನ್ನಲ್ಲೇ  ಮಾರುಕಟ್ಟೆ ಪ್ರವೇಶಿಸಿದೆ. ಸ್ಕೂಟರ್ ವರ್ಗದಲ್ಲಿ ತನ್ನ ಸ್ಥಾನವನ್ನು ವಿಸ್ತರಿಸುವ ಸಂಸ್ಥೆಯ ಉದ್ದೇಶವನ್ನು ಪ್ರದರ್ಶಿಸುತ್ತಿದೆ. ಗ್ರಾಹಕರಿಗೆ ತಮ್ಮ ಉತ್ಕೃಷ್ಟ ಮತ್ತು ಉತ್ಸಾಹಭರಿತ ಉತ್ಪನ್ನಗಳನ್ನು ನೀಡುತ್ತಾ ಬಂದಿದೆ.

ಆತ್ಯಾಕರ್ಷಕ ಮೇಸ್ಟ್ರೋ ಎಡ್ಜ್ 125 ಸ್ಟೆಲ್ತ್ ಎಡಿಶನ್ ಸ್ಕೂಟರ್ ಬಿಡುಗಡೆ!.

ಪ್ಲೆಶರ್ + ಪ್ಲಾಟಿನಂ ಹೆಸರುಮಾಡಿದ ಪ್ಲೆಶರ್ ಬ್ರ್ಯಾಂಡ್ ನ ಜನಪ್ರಿಯತೆಗೆ ಮತ್ತೊಂದು ಸೇರ್ಪಡೆಯಾಗಿದೆ. ಈ ಸ್ಕೂಟರ್ ತನ್ನ ಅಂದ, ಎತ್ತಿತೋರಿಸಿದ ರೆಟ್ರೊ ವಿನ್ಯಾಸ ಮತ್ತು ಉತ್ಕೃಷ್ಟ ಕ್ರೋಂ ಅಂಶಗಳಿಂದ ಭಿನ್ನವಾದ ಅನುಭವ ನೀಡುತ್ತದೆ. ಹೊಸ ಸ್ಕೂಟರ್ ದೇಶದ ಎಲ್ಲಾ ಹೀರೊ ಮೊಟೊಕಾರ್ಪ್ ಮಳಿಗೆಗಳಲ್ಲಿ ರೂ. 60,950 ಗಳ ಆಕರ್ಷಕ ದರದಲ್ಲಿ ಅಕ್ಟೋಬರ್ 20ರಿಂದ ಲಭ್ಯವಿರುತ್ತದೆ (ಎಕ್ಸ್ ಶೋರೂಂ ದೆಹಲಿ)

ಲಾಂಛನೀಯ ಪ್ಲೆಶರ್ ಬ್ರ್ಯಾಂಡ್ ಗ್ರಾಹಕರೊಂದಿಗೆ ಬಹಳ ಬಲವಾದ ಸಂಬಂಧ ಹೊಂದಿದೆ. ಹೊಸ ಪ್ಲೆಶರ್+ ಪ್ಲಾಟಿನಂ ತನ್ನ ವರ್ಧಿತ ವಿನ್ಯಾಸದಿಂದ ಖಂಡಿತ ನಮ್ಮ ಸ್ಕೂಟರ್ ಶ್ರೇಣಿಯನ್ನು ಬಲಪಡಿಸುತ್ತದೆ ಮತ್ತು ಸವಾರಿಯ ಆರಾಮ ಮತ್ತು ಸೊಗಸಿನ ಆನಂದ ನೀಡುತ್ತದೆ ಎಂದು ಹೀರೊ ಮೊಟೊಕಾರ್ಪ್ ಮಾರಾಟ ಮತ್ತು ಸೇವೆ ಮುಖ್ಯಸ್ಥ ನವೀನ ಚೌಹಾನ್ ಹೇಳಿದ್ದಾರೆ.

ಪ್ಲೆಶರ್+ ಪ್ಲಾಟಿನಂ ಹೊಸ ಶೈಲಿ ಮತ್ತು ವಿನ್ಯಾಸ
ಪ್ಲೆಶರ್+ ಪ್ಲಾಟಿನಂ ಹೊಸ ಮ್ಯಾಟ್ ಕಪ್ಪು ವರ್ಣದಲ್ಲಿ ಲಭ್ಯವಿದ್ದು, ಇದರ ಜೊತೆಗೆ ಕಂದುಬಣ್ಣದ ಒಳ ಪ್ಯಾನಲ್ ಗಳನ್ನು ಸೇರಿಸಲಾಗಿದೆ, ಇದರಿಂದ ಅದಕ್ಕೆ ಸೊಗಸಾದ ನೋಟ ನೀಡುತ್ತದೆ. ಇದರ ಕ್ರೊಂ ಅಂಶಗಳಾದ ಕನ್ನಡಿಗಳು, ಮಫ್ಲರ್ ರಕ್ಷಣೆ, ಹ್ಯಾಂಡಲ್ ಬಾರ್ ತುದಿಗಳು, ಮತ್ತು ಫೆಂಡರ್ ಸ್ಟ್ರೈಪ್‍ಗಳು ಅದರ ರೆಟ್ರೊ ಶೈಲಿಯನ್ನು ವರ್ಧಿಸುತ್ತದೆ, ಮತ್ತು ಈ ಬ್ರ್ಯಾಂಡ್‍ನ ಗುಣಮಟ್ಟವನ್ನು ಹೇಳುತ್ತದೆ.

ಪ್ಲೆಶರ್+ ಪ್ಲಾಟಿನಂ ಇಂಧನ ಮಟ್ಟದ ಸೂಚಕವನ್ನು, ಹೆಚ್ಚು ಆರಾಮಕ್ಕೆ ಆಸನದ ಬ್ಯಾಕ್ ರೆಸ್ಟ್, ಪ್ಲಾಟಿನಂ ಹಾಟ್ ಸ್ಟಾಂಪ್ ಹೊಂದಿರುವ ಎರಡು ವರ್ಣದ ಆಸನ, ಬಿಳಿ ರಿಂ ಟೇಪ್ ಮತ್ತು ಉತ್ಕೃಷ್ಟ 3ಡಿ ಲೊಗೊ ಬ್ಯಾಡ್ಜ್ ಹೊಂದಿದ್ದು, ಹೆಚ್ಚು ಆಕರ್ಷಕವಾಗಿದೆ.

ಪ್ಲೆಶರ್+ ಪ್ಲಾಟಿನಂನಲ್ಲಿದೆ 110 cc, bs6 ಎಕ್ಸೆನ್ಸ್ ತಂತ್ರಜ್ಞಾನದ ಎಂಜಿನ್ ಹೊಂದಿದೆ.  ಫ್ಯುಯೆಲ್ ಇಂಜೆಕ್ಷನ್ ಇಂಜಿನ್ - ಇದು 8bhp ಪವರ್ ಹಾಗೂ 8.7 NMಪೀಕ್ ಟಾರ್ಕ್ ನೀಡುತ್ತದೆ. ಪ್ಲೆಶರ್+ ಪ್ಲಾಟಿನಂ 10% ರಷ್ಟು ಹೆಚ್ಚು ಇಂಧನ ದಕ್ಷತೆ ನೀಡುತ್ತದೆ, ಜೊತೆಗೆ ಉತ್ತಮ ಕಾರ್ಯಶೀಲತೆ ಮತ್ತು 10% ರಷ್ಟು ವೇಗವರ್ಧನೆ ಒದಗಿಸುತ್ತದೆ.

click me!