ಕೊರೋನಾ ಸಂಕಷ್ಟದಿಂದ ಹೊರಬಂದ ಭಾರತದ ಆಟೋ ಇಂಡಸ್ಟ್ರಿ; ಶೇ.29ರಷ್ಟು ಚೇತರಿಕೆ!

By Suvarna News  |  First Published Oct 16, 2020, 4:43 PM IST

2019ರಲ್ಲಿ ಭಾರತದ ಆಟೋ ಇಂಡಸ್ಟ್ರಿ ಪಾತಾಳಕ್ಕೆ ಕುಸಿದಿತ್ತು. ವಾಹನ ಮಾರಾಟ ಕಳೆದೆರಡು ದಶಕದಲ್ಲಿ ಕಾಣದಂತ ಕುಸಿತ ಕಂಡಿತ್ತು. ಜಿಎಸ್‌ಟಿ ಕಡಿತಗೊಳಿಸಿ, ಸುಂಕ ಕಡಿತಗೊಳಿಸಿ ಎಂಬ ಹಲವು ಮನವಿಗಳು ಕೇಂದ್ರ ಸರ್ಕಾರದ ಕೈಸೇರಿತ್ತು. ಇದರ ಬೆನ್ನಲ್ಲೇ ಕೊರೋನಾ ಹೊಡೆತ ನೀಡಿತ್ತು. ಇದೀಗ  ಭಾರತೀಯ ಆಟೋಮೊಬೈಲ್ ಕಂಪನಿಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.


ನವದೆಹಲಿ(ಅ.16): ಕೊರೋನಾ ವೈರಸ್ ಹೊಡೆತದಿಂದ ಬಹುತೇಕ ಕ್ಷೇತ್ರ ತೀವ್ರ ಹೊಡೆತ ಅನುಭವಿಸಿದೆ. ಇದರಲ್ಲಿ ಪ್ರಮುಖವಾಗಿ ಭಾರತದ ಆಟೋಮೊಬೈಲ್ ಕ್ಷೇತ್ರ ಕೂಡ ಒಂದು.  ಚೀನಾದಲ್ಲಿ ಕೊರೋನಾ ಅಪ್ಪಳಿಸಿದಾಗಲೇ ಭಾರತದ ಆಟೋಮೊಬೈಲ್ ಇಂಡಸ್ಟ್ರಿಗೆ ಬಿಡಿ ಭಾಗಗಳ ಕೊರತೆ ಎದುರಾಗಿತ್ತು. ಆದರೆ ಇದೀಗ ಕೊರೋನಾ ಹೊಡೆತದಿಂದ ಭಾರತದ ಆಟೋಮೊಬೈಲ್ ಕ್ಷೇತ್ರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.  ಸೆಪ್ಟೆಂಬರ್ ತಿಂಗಳಲ್ಲಿ ಪ್ಯಾಸೆಂಜರ್ ಕಾರು ವಿಭಾಗ ಶೇಕಡಾ 28.92 ರಷ್ಟು ಚೇತರಿಕೆ ಕಂಡಿದೆ.

 

A growth of 28.92% has been registered in the sales of Passenger Cars in September'20, as compared to September'19.

— SIAM India (@siamindia)

Tap to resize

Latest Videos

undefined

ಟಾಟಾ ಕಾರು ಖರೀದಿಗೆ ಮುಂದಾದ ಜನ, ಸೆಪ್ಟೆಂಬರ್ ತಿಂಗಳ ಮಾರಾಟ ವರದಿ ಬಹಿರಂಗ!

2019ರಲ್ಲಿ ಭಾರತದ ಆಟೋ ಇಂಡಸ್ಟ್ರೀ ಅತ್ಯಂತ ಕೆಟ್ಟ ಸಮಯ ಎದುರಿಸಿತ್ತು. ಕಾರಣ 2 ದಶಕದಲ್ಲೇ ಕಾಣದ ಕುಸಿತವನ್ನು ಭಾರತೀಯ ಆಟೋ ಕ್ಷೇತ್ರ ಕಂಡಿತ್ತು. ಶೇಕಡಾ 50 ಕ್ಕಿಂತ ಹೆಚ್ಚು ಕುಸಿತ ಕಂಡಿತ್ತು. ಈ ಹೊಡೆತದಿಂದ ಚೇತರಿಸಿಕೊಳ್ಳುವ ಯತ್ನದಲ್ಲಿರುವಾಗಲೇ ಕೊರೋನಾ ವೈರಸ್ ವಕ್ಕರಿಸಿ ಸಂಪೂರ್ಣ ಉಲ್ಟಾ ಮಾಡಿತ್ತು. ಆದರೆ 2019ರ ಮಾರಾಟಕ್ಕೆ ಹೋಲಿಸಿದರೆ 2020ರ ಸೆಪ್ಟೆಂಬರ್ ತಿಂಗಳ ಮಾರಾಟ ಚೇತರಿಕೆಯಾಗಿದೆ.

54 ತಿಂಗಳಲ್ಲಿ ಮಹತ್ವದ ಮೈಲಿಗಲ್ಲು ದಾಟಿದ ಮಾರುತಿ ಬ್ರಜಾ!.

2019ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ 2020ರ ಸೆಪ್ಬೆಂಬರ್ ತಿಂಗಳಲ್ಲಿ ಪ್ಯಾಸೆಂಜರ್ ಕಾರು ವಿಭಾಗ 28.92% ಹೆಚ್ಚಳವಾಗಿದೆ. ಇನ್ನು ಉತ್ಪಾದನೆಯಲ್ಲೂ ಚೇತರಿಕೆ ಕಂಡಿದೆ.  ಪ್ಯಾಸೆಂಜರ್ ವಾಹನ, ಮೂರು ಚಕ್ರ ವಾಹನ ಹಾಗೂ ದ್ವಿಚಕ್ರ ವಾಹನ, ಕ್ವಾರ್ಡ್ರಾಸೈಕಲ್ ಸೇರಿದಂತೆ 2020 ಸೆಪ್ಟೆಂಬರ್ ತಿಂಗಳಲ್ಲಿ 2,619,045 ವಾಹನ ಉತ್ಪಾದನೆ ಮಾಡಲಾಗಿದೆ.  ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಈ ಸಂಖ್ಯೆ 2,344,328 ಆಗಿತ್ತು. ಈ ಮೂಲಕ ಉತ್ಪಾದನೆಯಲ್ಲಿ ಶೇಕಡಾ 11.72ರಷ್ಟು ಹೆಚ್ಚಳವಾಗಿದೆ.

A total of 2,619,045 units, including Passenger Vehicles, Three-wheelers, Two-wheelers & Quadricycle were produced in September'20, as against 2,344,328 in September'19, witnessing a growth of 11.72%.

— SIAM India (@siamindia)

ಭಾರತದಲ್ಲಿ ಚೇತರಿಸಿಕೊಂಡ ಆಟೋ ಸೇಲ್ಸ್, ಮಾರುತಿಗೆ ಮೊದಲ ಸ್ಥಾನ!.

ಕಳೆದ ವರ್ಷದ  ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ, 2020ರ ಸೆಪ್ಟೆಂಬರ್ ತಿಂಗಳ ಮಾರಾಟದಲ್ಲಿ ಭಾರತದ ಹೆಮ್ಮೆಯ ಟಾಟಾ ಮೋಟಾರ್ಸ್ ಕಾರು  ಮಾರಾಟದಲ್ಲಿ 162 ಶೇಕಡಾ ಹೆಚ್ಚಳವಾಗಿದೆ.  ಇನ್ನು ಕಿಯಾ ಮೋಟಾರ್ಸ್ ವಾಹನ ಮಾರಾಟದಲ್ಲಿ 147% ರಷ್ಟು ಹೆಚ್ಚಳವಾಗಿದೆ. ಭಾರತದ ಅತೀ ದೊಡ್ಡ ಕಾರು ಉತ್ಪಾದಕ ಹಾಗೂ ಮಾರಾಟ ಕಂಪನಿ ಮಾರುತಿ ಸುಜುಕಿ ಸೆಪ್ಟೆಂಬರ್ ತಿಂಗಳಲ್ಲಿ ಶೇಕಡಾ 34 ರಷ್ಟು ಹೆಚ್ಚಳ ಕಂಡಿದೆ.   ಆದರೆ ಕೆಲ ವಾಹನ ಕಂಪನಿಗಳು ಮಾರಾಟದಲ್ಲಿ ಕುಸಿತ ಕಂಡಿದೆ. ನಿಸಾನ್ ಕಾರು ಮಾರಾಟದಲ್ಲಿ ಶೇಕಡಾ 46ರಷ್ಟು ಕುಸಿತ ಕಾಣೋ ಮೂಲಕ ಗರಿಷ್ಠ ಎನಿಸಿದೆ.

ಟಾಟಾ ನೆಕ್ಸಾನ್ ಮಾರಾಟ ದ್ವಿಗುಣ, ವಿದೇಶಿ ಕಾರುಗಳಿಗಿಲ್ಲ ಬೇಡಿಕೆ!.

ದ್ವಿಚಕ್ರ ವಾಹನ ಮಾರಾಟದಲ್ಲೂ ಚೇತರಿಕೆ
ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಬಹುತೇಕರು ಸಾರಿಗೆ ವಾಹನ ಪ್ರಯಾಣಕ್ಕೆ ಗುಡ್ ಬೈ ಹೇಳಿದ್ದಾರೆ. ಕಚೇರಿ ಸೇರಿದಂತೆ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ದ್ವಿಚಕ್ರ ವಾಹನ ಖರೀದಿಗೆ ಮುಂದಾಗಿದ್ದಾರೆ. ಹೀಗಾಗಿ 2019ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ, 2020ರ ಸೆಪ್ಟೆಂಬರ್ ತಿಂಗಳಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ 11.64% ರಷ್ಟು ಹೆಚ್ಚಳವಾಗಿದೆ 

Sales of Two-wheelers grew by 11.64% in September'20, as compared to September'19.

— SIAM India (@siamindia)
click me!