ಹಾರ್ಲೆ ಡೇವಿಡ್ಸನ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ಅನಾವರಣ!

Published : Jan 31, 2019, 12:28 PM IST
ಹಾರ್ಲೆ ಡೇವಿಡ್ಸನ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ಅನಾವರಣ!

ಸಾರಾಂಶ

ಹಾರ್ಲೆ ಡೇವಿಡ್ಸನ್ ಕಂಪೆನಿ ನೂತನ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ಅನಾವರಣ ಮಾಡಿದೆ.  ಕಡಿಮೆ ತೂಕ, ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗಲಿದೆ. ಈ ಬೈಕ್ ವಿಶೇಷತೆ ಏನು? ಇಲ್ಲಿದೆ.

ಅಮೆರಿಕಾ(ಜ.31): ಹಾರ್ಲೆ ಡೇವಿಡ್ಸನ್ ನೂತನ ಎಲೆಕ್ಟ್ರಿಕ್ ಕಾನ್ಸೆಪ್ಟ್ ಬೈಕ್ ಅನಾವರಣ ಮಾಡಿದೆ. ವಿಶೇಷ ಅಂದರೆ ಲೈಟ್ ವೈಟ್ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ರೆಟ್ರೋ ಶೈಲಿ ಹೊಂದಿದೆ. X Games Aspen 2019 ಶೋನಲ್ಲಿ ನೂತನ ಎಲೆಕ್ಟ್ರಿಕ್ ಬೈಕ್ ಅನಾವರಣ ಮಾಡಲಾಗಿದೆ.

 

 

ಇದನ್ನೂ ಓದಿ: ಕವಾಸಕಿಗೆ ಪೈಪೋಟಿ - ಹಸಿರು ಬಣ್ಣದ ಬಜಾಜ್ ಡೋಮಿನಾರ್!

ಹಾರ್ಲೆ ಡೇವಿಡ್ಸನ್ ಕಂಪೆನಿಯ ಮೊದಲ ಎಲೆಕ್ಟ್ರಿಕ್ ಬೈಕ್ ಇದಾಗಿದ್ದು, ಕಡಿಮೆ ಬೆಲೆಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಇದಕ್ಕಾಗಿ ಕಡಿಮೆ ತೂಕ ಹಾಗೂ ಅತ್ಯಂತ ಸರಳ ಬೈಕ್ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ನೂತನ ಕಾನ್ಸೆಪ್ಟ್ ಬೈಕ್ ಇದೀಗ ಮೋಟಾರ್ ಶೋನಲ್ಲಿ ಎಲ್ಲರ ಗಮನಸೆಳೆದಿದೆ.

ಇದನ್ನೂ ಓದಿ: ಜಾವಾ ಪೆರಾಕ್ ಬಾಬರ್ ಬೈಕ್ ಬುಕಿಂಗ್ ದಿನಾಂಕ ಬಹಿರಂಗ!

ಇದರ ಜೊತೆಗೆ ಇನ್ನೆರಡು ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲು ಹಾರ್ಲೆ ಮುಂದಾಗಿದೆ. ಆದರೆ ನೂತನ ಎಲೆಕ್ಟ್ರಿಕ್ ಮೋಟರ್‌ಸೈಕಲ್ ಚಾರ್ಜಿಂಗ್, ಮೈಲೇಜ್ ರೇಂಜ್ ಸೇರಿದಂತೆ ಹಲವು ವಿಚಾರಗಳನ್ನ ಬಹಿರಂಗ ಪಡಿಸಿಲ್ಲ.  ಸದ್ಯ ಟೆಸ್ಟಿಂಗ್ ನಲ್ಲಿ ನಿರತವಾಗಿರೋ ಈ ಎಲೆಕ್ಟ್ರಿಕ್ ಕಾನ್ಸೆಪ್ಟ್ ಶೀಘ್ರದಲ್ಲೇ ರಸ್ತೆಗಿಳಿಯಲಿದೆ.

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ