ಮರ್ಸಿಡಿಸ್ ಬೆಂಝ್ ಇದೀಗ 7 ಸೀಟರ್ ಐಷಾರಾಮಿ ಕಾರು ಬಿಡುಗಡೆ ಮಾಡಿದೆ. ವೈವಿಧ್ಯಮಯ ವಿನ್ಯಾಸ ಬೆಂಝ್ ವಿ- ಕ್ಲಾಸ್ ಹೊಸ ಕಾರನ್ನು ಬಿಡುಗಡೆಯಾಗಿದೆ. ಈ ಕಾರಿನ ವಿಶೇಷತೆ ಏನು? ಇದರ ಬೆಲೆ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು(ಜ.31): ಲಕ್ಸುರಿ ವಾಹನಗಳಿಗೆ ಮತ್ತೊಂದು ಹೆಸರು ಮರ್ಸಿಡಿಸ್-ಬೆಂಝ್. ವಾಹನ ಕ್ಷೇತ್ರದಲ್ಲಿ ಹೈಟೆಕ್ ಟೆಕ್ನಾಲಜಿಯನ್ನು ಪರಿಚಯಿಸಿ, ಐಷಾರಾಮಿ ಪ್ರಯಾಣದ ಹಿತಾನುಭವ ಕೊಟ್ಟಮೊದಲ ಖ್ಯಾತಿ ಅದರದ್ದು. ಇದೀಗ ಮರ್ಸಿಡಿಸ್ -ಬೆಂಝ್ ವೈವಿಧ್ಯಮಯ ವಿನ್ಯಾಸ ಬೆಂಝ್ ವಿ- ಕ್ಲಾಸ್ ಹೊಸ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, ವಾಹನ ಪ್ರೇಮಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಇದು ಪಕ್ಕಾ ಭಾರತೀಯ ನಿರ್ಮಾಣದ ವಿಶ್ವ ಶ್ರೇಣಿಯ ಬಹುಪಯೋಗಿ ಕಾರು. ಮೇಡ್ ಇನ್ ಇಂಡಿಯಾದ ಕೊಡುಗೆ.
undefined
ಇದನ್ನೂ ಓದಿ: ಸರ್ಕಾರಕ್ಕೆ ಎಲೆಕ್ಟ್ರಿಕ್ ಕಾರು ಹಸ್ತಾಂತರಿಸಿದ ಕಿಯಾ ಮೋಟಾರ್ಸ್!
ಜನವರಿ 24ರಂದು ಭಾರತೀಯ ಕಾರು ಮಾರುಕಟ್ಟೆಗೆ ಇದು ಅಧಿಕೃತವಾಗಿ ಲಾಂಚ್ ಆಗಿದೆ. ಜನವರಿ 24 ಮರ್ಸಿಡಿಸ್ -ಬೆಂಝ್ ಹೈಟೆಕ್ ಬ್ರಾಂಡ್ ಸಂಸ್ಥೆಗೆ ಐತಿಹಾಸಿಕ ದಿನ. ಹಾಗೆಯೇ 2019 ಬೆಂಝ್ ಇತಿಹಾಸಕ್ಕೆ ಮಹತ್ವದ ವರ್ಷ. ಯಾಕಂದ್ರೆ ಭಾರತದಲ್ಲಿ ಮರ್ಸಿಡಿಸ್- ಬೆಂಝ್ ಕಾರ್ಯಚರಣೆ ಶುರುವಾಗಿ 25 ವರ್ಷ. ಅದಕ್ಕೀಗ ಬೆಳ್ಳಿ ಹಬ್ಬದ ಸಂಭ್ರಮ.
‘ಅತ್ಯುತ್ತಮವಾದದ್ದು ಎಂದಿಗೂ ವಿಶ್ರಮಿಸದು’; ಇದು ಬೆಂಝ್ ನ ಮೂಲ ಮಂತ್ರ. ಅದಕ್ಕನುಗುಣವಾಗಿಯೇ ವಿಶ್ವದರ್ಜೆಯ ಶ್ರೇಣಿಯಲ್ಲಿ ತಯಾರಾದ ಕಾರು ಇದು. ಬಹು ಬೇಡಿಕೆಯುಳ್ಳ ವಾಹನ ವರ್ಗವೇ ಇದರ ಟಾರ್ಗೆಟ್. ಮೇಲ್ನೋಟಕ್ಕೆ ಇನ್ನೋವಾ ಕಾರುಗಳ ಲುಕ್ ಹೊಂದಿರುವ ಬೆಂಝ್ ವಿ- ಕ್ಲಾಸ್ ಹಲವು ವಿಶೇಷತೆಯುಳ್ಳ ಕಾರು.
ಇದನ್ನೂ ಓದಿ: ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಎಡಿಶನ್ ಕಾರು ಬಿಡುಗಡೆ!
ಬಿಸಿನೆಸ್, ಸ್ಪೋರ್ಟ್ಸ್, ಲೈಫ್ ಸ್ಟೈಲ್ ಹಾಗೂ ಫ್ಯಾಮಿಲಿ ಸೇರಿ ಎಲ್ಲಾ ವರ್ಗಕ್ಕೂ ಹೇಳಿ ಮಾಡಿಸಿದಂತಿದೆ ಈ ಕಾರು. ವಿ-ಕ್ಲಾಸ್ ಎಕ್ಸ್ ಎಕ್ಸ್‌ಶೋ ರೂಮ್(ಮುಂಬೈ) ಬೆಲೆ ರೂ.68.40 ಲಕ್ಷದಿಂದ ಆರಂಭ. ಎಕ್ಸಕ್ಲೂಸಿವ್ ದರ ರೂ.81.90 ಲಕ್ಷದಿಂದ ಆರಂಭ. ಜನವರಿ 24 ರಂದು ಮುಂಬೈನ ಪಂಚತಾರಾ ಹೋಟೆಲ್‌ವೊಂದರಲ್ಲಿ ಮರ್ಸಿಡಿಸ್ -ಬೆಂಝ್ ಭಾರತದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಶ್ವೆಕ್ , ಈ ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
‘ಜಾಗತಿಕ ಬೇಡಿಕೆಯ ಭಾಗವಾಗಿಯೇ ಮರ್ಸಿಡಿಸ್ -ಬೆಂಝ್ ವಿಕ್ಲಾಸ್ ನಂತಹ ವೈವಿಧ್ಯಮಯ ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ. ಮರ್ಸಿಡಿಸ್-ಬೆಂಝ್‌ನ ಹೊಸ ವರ್ಷ ಈ ಮೂಲಕ ಆರಂಭಗೊಂಡಿದೆ. ಭಾರತೀಯ ಗ್ರಾಹಕರಿಗೆ ದುಬಾರಿಯಲ್ಲದ ದರದಲ್ಲಿ ಐಷಾರಾಮಿ ಬಹುಪಯೋಗಿ ವಾಹನವನ್ನು ಪರಿಚಯಿಸಬೇಕೆನ್ನುವ ಮಹದಾಸೆಯಲ್ಲಿ ಇದನ್ನು ಮಾರುಕಟ್ಟೆಗೆ ತಂದಿದ್ದೇವೆ. ಫ್ಯಾಮಿಲಿ, ಬಿಸಿನೆಸ್, ಸ್ಪೋರ್ಟ್ಸ್ ಹಾಗೂ ಲೈಫ್‌ಸ್ಟೈಲ್ ವರ್ಗವೇ ನಮ್ಮ ಟಾರ್ಗೆಟ್. ಐಷಾರಾಮಿ ಪ್ರಯಾಣದಲ್ಲಿ ಇದೊಂದು ಬೆಂಚ್ ಮಾರ್ಕ್ ಸ್ಥಾಪಿಸುವುದು ಗ್ಯಾರಂಟಿ ಆಗಿದೆ ’ಎಂಬ ವಿಶ್ವಾಸದ ಮಾತು ಅವರದ್ದು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಟಾಟಾ ಹರಿಯರ್ ಕಾರಿನ ಆನ್ ರೋಡ್ ಬೆಲೆ ಎಷ್ಟು?
ವಿ-ಕ್ಲಾಸ್ ವಿಶೇಷತೆ
- ಎರಡು ಬಗೆಯಲ್ಲಿ ಕಾರಿನ ಬಾಡಿ ಶೈಲಿ
- ಪಾರ್ಸಲ್ ಶೆಲ್ಫ್ ಹಾಗೂ ಶಾಪಿಂಗ್ ಕ್ರೇಟ್‌ನೊಂದಿಗೆ ಹಿಂಬದಿ ಕಿಟಕಿ
- ಐಷಾರಾಮಿ ಆಸನಗಳು, ಸೀಟ್ ಕಲರ್ ಮರೂನ್ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯ
- ನಪ್ಪಾ ಲೆದರ್‌ನಲ್ಲಿ ಮಲ್ಟಿಸ್ಟಿರೀಂಗ್ ವೀಲ್
- ಆಕ್ಟಿವ್ ಪಾರ್ಕ್ ಅಸಿಸ್ಟ್‌ನೊಂದಿಗೆ 360 ಡಿಗ್ರಿಗಳ ರಿವರ್ಸಿಂಗ್ ಕ್ಯಾಮರಾ
- ಎಲೆಕ್ಟ್ರಿಕ್ ಸ್ಲೈಡಿಂಗ್ ಡೋರ್
- ಅತ್ಯಧಿಕ ಬೆಳಕಿನ ಎಲ್‌ಇಡಿ ಹೆಡ್‌ಲ್ಯಾಂಪುಗಳು
- 6 ಏರ್ ಬ್ಯಾಗ್‌ಗಳು, 360 ಡಿಗ್ರಿ ಕ್ಯಾಮರಾ ಆ್ಯಕ್ಟಿವ್ ಪಾರ್ಕಿಂಗ್
ಇಂಜಿನ್ ಮತ್ತು ಬಣ್ಣಗಳು
-120 ಕಿಲೋವ್ಯಾಟ್ ಶಕ್ತಿ, 380 ಎನ್‌ಎಂ ಟಾರ್ಕ್, 2143 ಸಿಸಿ ಡೀಸಲ್ ಇಂಜಿನ್
- ಒಬ್ಸಿಡಿಯನ್ ಬ್ಲ್ಯಾಕ್ ಮೆಟಾಲಿಕ್, ಕ್ಯಾವೆನ್ಸೈಟ್ ಬ್ಲೂ ಮೆಟಾಲಿಕ್ , ಮೌಂಟನ್ ಕ್ರಿಸ್ಟಲ್ ವೈಟ್ ಮೆಟಾಲಿಕ್ ಹಾಗೂ ಬ್ರಿಲಿಯಂಟ್ ಸಿಲ್ವರ್ ಮೆಟಾಲಿಕ್ ವರ್ಣಗಳಲ್ಲಿ ಬೆಂಝ್ ವಿ-ಕ್ಲಾಸ್ ಕಾರು ಲಭ್ಯ.
ದೇಶಾದ್ರಿ ಹೊಸ್ಮನೆ