53 ಬಾರಿ ನಿಯಮ ಉಲ್ಲಂಘಿಸಿದ ಬೆಂಗಳೂರು ಫುಡ್ ಡೆಲಿವರಿ ಬಾಯ್!

By Web Desk  |  First Published Jul 15, 2019, 6:54 PM IST

ಗ್ರಾಹಕರಿಗೆ ತಕ್ಷಣ ಫುಡ್ ತಲಪಿಸುವ ಡೆಲಿವರಿ ಬಾಯ್ ಸಿಗ್ನಲ್,ಟ್ರಾಫಿಕ್ ನಿಯಮ ಗಾಳಿಗೆ ತೂರುವುದು ಸಹಜ. ಇದೀಗ ಬೆಂಗಳೂರಿನ ಫುಡ್ ಡೆಲಿವರಿ ಬಾಯ್ 53 ಬಾರಿ ನಿಯಮ ಉಲ್ಲಂಘಿಸಿದ ಘಟನೆ ನಡೆದಿದೆ.
 


ಬೆಂಗಳೂರು(ಜು.15): ವಿಶ್ವವೇ ಈಗ ಡಿಜಿಟಲೀಕರಣವಾಗಿದೆ. ಊಟ, ತಿಂಡಿ ಸೇರಿದಂತೆ ಯಾವುದೇ ಆಹಾರ ಇದೀಗ ಆ್ಯಪ್ ಮೂಲಕ ತರಿಸಿಕೊಳ್ಳೋ ಕಾಲ. ಭಾರತದಲ್ಲಿ ಫುಡ್ ಡೆಲಿವರಿ ಮಾಡೋ ಹಲವು ಆ್ಯಪ್‌ಗಳಿವೆ. ಹೀಗಾಗಿ ಪೈಪೋಟಿ ಕೂಡ ಹೆಚ್ಚಾಗಿದೆ.  ಗ್ರಾಹಕರು ಆರ್ಡರ್ ಮಾಡಿದ ಕೆಲ ಕ್ಷಣಗಳಲ್ಲಿ ಮನೆ ಬಾಗಿಲಿಗೆ ಫುಡ್ ಡೆಲಿವರಿಯಾಗಿರುತ್ತೆ.  ತಡವಾದರೆ ಡೆಲಿವರಿ ಬಾಯ್ ಸೇವೆ ಚೆನ್ನಾಗಿಲ್ಲ ಎಂದೇ ಪರಿಗಣಿಸಲಾಗುತ್ತೆ.  ಡೆಲಿವರಿ ಬಾಯ್ಸ್ ಬೈಕ್ ಮೂಲಕ ಟ್ರಾಫಿಕ್ ಭೇದಿಸಿ ಮುನ್ನುಗ್ಗುತ್ತಾರೆ. ಹೀಗಾಗಿ ಹೆಚ್ಚು ರಸ್ತೆ ನಿಯಮ ಉಲ್ಲಂಘನೆಯಾಗುತ್ತೆ. 

ಇದನ್ನೂ ಓದಿ: ಪೆಟ್ರೋಲ್,ಡೀಸೆಲ್,ವಿದ್ಯುತ್ ಬೇಡ; ಬಂದಿದೆ ಸೋಲಾರ್ ಕಾರು!

Latest Videos

undefined

ಬೆಂಗಳೂರಿನ ಫುಡ್ ಡೆಲಿವರಿ ಬಾಯ್ ಬರೋಬ್ಬರಿ 52 ಬಾರಿ ರಸ್ತೆ ನಿಯಮ ಉಲ್ಲಂಘಿಸಿ, 53ನೇ ಬಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಿಯಮ ಉಲ್ಲಂಘಿಸಿದ ಕಾರಣಕ್ಕೆ ಪೊಲೀಸರು ಹಿಡಿದು ನಿಲ್ಲಿಸಿ, ವಾಹನಗ ರಿಜಿಸ್ಟ್ರೇಶನ್ ನಂಬರ್ ಹಾಕಿ ಚೆಕ್ ಮಾಡಿ, ಒಂದೆರಡು ಪ್ರಕರಣ ಅಂದುಕೊಂಡು ಪ್ರಿಂಟ್ ಕೊಟ್ಟಿದ್ದಾರೆ. ಪೊಲೀಸರ ಮಶೀನ್‌ನಲ್ಲಿರುವ ಪ್ರಿಂಟಿಂಗ್ ಪೇಪರ್ ಕಾಲಿಯಾದರೂ ಈ ಡೆಲಿವರಿ ಬಾಯ್ ನಿಯಮ ಉಲ್ಲಂಘನೆ ಪ್ರಕರಣ ಮುಗಿಯುತ್ತಿಲ್ಲ.

ಇದನ್ನೂ ಓದಿ: ನೋ ಪಾರ್ಕಿಂಗ್: 23 ಸಾವಿರ ರೂಪಾಯಿ ದಂಡ!

ಕೊನೆಗೆ 53 ಬಾರಿ ರಸ್ತೆ ನಿಯಮ ಉಲ್ಲಂಘನೆ ಪ್ರಕರಣದೊಂದಿಗೆ ಪ್ರಿಂಟ್ ಅಂತ್ಯವಾಯಿತು. ಸಿಗ್ನಲ್ ಜಂಪ್, ಒನ್ ವೇ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿತ್ತು. ಹೀಗಾಗಿ ಒಟ್ಟು ಮೊತ್ತ 5,300 ರೂಪಾಯಿ. ಅದೃಷ್ಟವಶಾತ್ ಈತ  ಜುಲೈ 20 ರ ಬಳಿಕ ಹೆಚ್ಚು ನಿಯಮ ಉಲ್ಲಂಘಿಸಿಲ್ಲ. ಕಾರಣ ಜುಲೈ 20 ರಿಂದ  ವಾಹನ ಮೋಟಾರು ಕಾಯ್ದೆ ತಿದ್ದುಪಡಿಯಾಗಿದ್ದು, ದಂಡದ ಮೊತ್ತ 10 ಪಟ್ಟು ಹೆಚ್ಚಿಸಲಾಗಿದೆ. ಹೀಗಾಗಿ ಫುಡ್ ಡೆಲಿವರಿ ಬಾಯ್ ದಂಡ ಮೊತ್ತ 5,300 ರೂಪಾಯಿ ಬಂದಿದೆ. ಇಲ್ಲವಾದರೆ 15,000ಕ್ಕೂ ಹೆಚ್ಚು ರೂಪಾಯಿ ಫೈನ್ ಕಟ್ಟಬೇಕಿತ್ತು.
 

click me!