ಪೆಟ್ರೋಲ್,ಡೀಸೆಲ್,ವಿದ್ಯುತ್ ಬೇಡ; ಬಂದಿದೆ ಸೋಲಾರ್ ಕಾರು!

Published : Jul 15, 2019, 05:11 PM ISTUpdated : Jul 15, 2019, 09:49 PM IST
ಪೆಟ್ರೋಲ್,ಡೀಸೆಲ್,ವಿದ್ಯುತ್ ಬೇಡ; ಬಂದಿದೆ ಸೋಲಾರ್ ಕಾರು!

ಸಾರಾಂಶ

ವಿಶ್ವದಲ್ಲೇ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಕಾರನ್ನು ಭಾರತದಲ್ಲಿ ಆವಿಷ್ಕರಿಸಲಾಗಿದೆ. ಮೊಬೈಲ್ ಆ್ಯಪ್ ಮೂಲಕ ಈ ಕಾರನ್ನು ಚಲಾಯಿಸಬಹುದು. ಇಷ್ಟೇ ಅಲ್ಲ ನಿಮ್ಮ ಮನಸ್ಸಿನ ಸಂಕೇತಗಳನ್ನು ಗ್ರಹಿಸೋ ಶಕ್ತಿ ಈ ಕಾರಿಗಿದೆ. ವಿಶೇಷ ಕಾರಿನ ಕುರಿತ ಕುತೂಹಲ ಮಾಹಿತಿ ಇಲ್ಲಿದೆ.

ಕೊಚ್ಚಿ(ಜು.15): ಭಾರತದಲ್ಲಿ ಹೊಸ ಹೊಸ ಅವಿಷ್ಕಾರಗಳು ನಡೆಯುತ್ತಿರುತ್ತವೆ. ಕೆಲವು ಬೆಳಕಿಗೆ ಬಂದರೆ ಇನ್ನೂ ಕೆಲವು ಪ್ರತಿಭೆಗಳು ಬೆಳಕಿಗೆ ಬರುವುದೇ ಇಲ್ಲ. ಇದೀಗ ಕೇರಳದಲ್ಲಿ ಯಾರೂ ಊಹಿಸದ ಕಾರಿನ ಮೆಕಾನಿಸಂ ಆವಿಷ್ಕರಿಸಲಾಗಿದೆ. ಈ ಕಾರು ಸೋಲಾರ್‌ನಿಂದ ಚಲಿಸುತ್ತೆ. ಇಷ್ಟೇ ಅಲ್ಲ ಮೊಬೈಲ್ ಆ್ಯಪ್ ಹಾಗೂ ಮನಸ್ಸಿನಲ್ಲಿ ನೀಡೋ ಸನ್ನೆ ಮೂಲಕ ಕಂಟ್ರೋಲ್ ಮಾಡಬಹುದು.

ಇದನ್ನೂ ಓದಿ: ಕಾರು ಕ್ಲೀನ್ ಇಲ್ಲದಿದ್ದರೆ ಬೀಳುತ್ತೆ 9 ಸಾವಿರ ರೂ ದಂಡ!

ಮಾರುತಿ 800 ಹಳೆ ಕಾರನ್ನು ಕೇರಳದ 6 ಯುವಕರು ಸಂಪೂರ್ಣವಾಗಿ ಬದಲಾಯಿಸಿ ಹೊಸ ಲೋಕಕ್ಕೆ ಕರೆದೊಯ್ದಿದ್ದಾರೆ. ಕಾರಿನ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಎಂಜಿನ್ ಹಾಗೂ ಟೆಕ್ನಾಲಜಿ ಸಂಪೂರ್ಣ ಬದಲಿಸಿದ್ದಾರೆ.  ಸೋಲಾರ್ ಚಾಲಿತ ವಾಹನ ಹಲವು ವಿಶೇಷತೆ ಹೊಂದಿದೆ. ಈ ಕಾರನ್ನು ಮೊಬೈಲ್ ಆ್ಯಪ್ ಮೂಲಕ ಸ್ಟಾರ್ಟ್ ಮಾಡಬಹುದು. ಹೊರಗಡೆ ನಿಂತು ಆ್ಯಪ್ ಮೂಲಕವೇ ಡ್ರೈವ್ ಮಾಡಬಹುದು. ಅಂದರೆ ಕಾರ್ ರೇಸ್ ಗೇಮ್‌ನಲ್ಲಿ ಮೊಬೈಲ್ ಮೂಲಕ ಹೇಗೆ ಕಾರನ್ನೂ ಓಡಿಸುತ್ತಾರೋ, ಅದೇ ರೀತಿ ಇಲ್ಲಿ ಆ್ಯಪ್ ಮೂಲಕ ಕಾರು ಚಲಾಯಿಸಬಹುದು. 

ಇದನ್ನೂ ಓದಿ: ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಬಿಡುಗಡೆ- ಇಲ್ಲಿದೆ ಬೆಲೆ, ವಿಶೇಷತೆ!

ಪಾರ್ಕಿಂಗ್ ಅಸಿಸ್ಟ್ ಮೂಲಕ ಕಾರಿನಿಂದ ಇಳಿದು ಆ್ಯಪ್ ಮೂಲಕ ಪಾರ್ಕ್ ಮಾಡಬಹುದು. ಇಷ್ಟೇ ಅಲ್ಲ, ನಿಮ್ಮ ಮನಸ್ಸಿನ ಸಂಕೇತಗಳನ್ನು ಈ ಕಾರು ಗ್ರಹಿಸುತ್ತದೆ. ಕಾರು ಸ್ಟಾರ್ಟ್ ಆಗಬೇಕು ಎಂದು ನೀವು ಮನಸ್ಸಿನಲ್ಲಿ ಸಂಕೇತ ನೀಡಿದರೆ ಸಾಕು, ಕಾರು ಸ್ಟಾರ್ ಆಗಲಿದೆ. ಇಷ್ಟೇ ಅಲ್ಲ, ಕಾರು ಓಡಿಸಲು, ರಿವರ್ಸ್ ಗೇರ್ , ರೈಟ್ ಟರ್ನ್, ಲೆಫ್ಟ್ ಟರ್ನ್ ಏನೂ ಬೇಕಾದರೂ ಮನಸ್ಸಿನಲ್ಲಿ ಹೇಳಿದರೆ ಸಾಕು, ಈ ಕಾರು ಗ್ರಹಿಸುತ್ತದೆ. ಆ ಅತ್ಯಾಧುನಿಕ ತಂತ್ರಜ್ಞಾನ ವಿಶ್ವದಲ್ಲೇ ಮೊದಲು. ಡ್ರೈವರ್ ಲೆಸ್ ಕಾರುಗಳು ಈಗಾಗಲೇ ಪರಿಚಯಿಸಲಾಗಿದೆ. ಆದರೆ ಮೈಂಡ್ ರೀಡರ್ ಕಾರು ಇನ್ನೂ ಬಂದಿಲ್ಲ. ಕೇರಳ ಹುಡುಗರ ಸಾಧನೆಗೆ ಆಟೋಮೊಬೈಲ್ ಕಂಪನಿಗಳೇ ಮೆಚ್ಚುಗೆ ವ್ಯಕ್ತಪಡಿಸಿದೆ.


 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ