ಫ್ಯಾಶನ್ ನಂಬರ್ ಪ್ಲೇಟ್; 940 ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್!

By Web Desk  |  First Published Jul 14, 2019, 8:27 PM IST

ವಾಹನದ ನಂಬರ್ ಪ್ಲೇಯ್ ಮೇಲೆ ಆಟವಾಡಬೇಡಿ. ನಿಯಮದ ಪ್ರಕಾರ ನಂಬರ್ ಪ್ಲೇಟ್ ಅಳವಡಿಸಬೇಕು. ಇಷ್ಟಬಂದಂತೆ ನಂಬರ್ ಬರೆಯಿಸಿದರೆ ಕ್ರಿಮಿನಲ್ ಕೇಸ್ ದಾಖಲಾಗುತ್ತೆ. 


ಹೈದರಾಬಾದ್(ಜು.14): ಟ್ರಾಫಿಕ್ ನಿಮಯಗಳು ಬಿಗಿಗೊಳ್ಳುತ್ತಿದೆ. ದಂಡದ ಮೊತ್ತ ಹೆಚ್ಚಾಗಿದೆ. ಸಣ್ಣ ತಪ್ಪಿಗೂ ಸಾವಿರಕ್ಕೂ ಹೆಚ್ಚು ರೂಪಾಯಿ ಫೈನ್ ಕಟ್ಟಬೇಕು. ಇದೀಗ ತಮಗಿಷ್ಟ ಬಂದಂತೆ ನಂಬರ್ ಪ್ಲೇಟ್ ಹಾಕಿ ಓಡಿಸುತ್ತಿದ್ದ ಬರೋಬ್ಬರಿ 940 ವಾಹನ ಮಾಲೀಕರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಇದು ಹೈದರಾಬಾದ್ ಪೊಲೀಸರ ಕೇವಲ 2 ದಿನದಲ್ಲಿ ನಡೆಸಿದ ಕಾರ್ಯಚರಣೆ.

ಇದನ್ನೂ ಓದಿ: ಕಾರು ಕ್ಲೀನ್ ಇಲ್ಲದಿದ್ದರೆ ಬೀಳುತ್ತೆ 9 ಸಾವಿರ ರೂ ದಂಡ!

Latest Videos

ಮೋಟಾರು ವಾಹನ ಕಾಯ್ದೆ ನಿಯಮದಲ್ಲಿರುವ ನಂಬರ್ ಪ್ಲೇಟ್ ಬದಲು, ತಮಗಿಷ್ಟ ಬಂದಂತೆ ನಂಬರ್ ಪ್ಲೇಟ್ ಬದಲಾಯಿಸಿದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 940 ವಾಹನಗಳ ಪೈಕಿ 363 ವಾಹನಗಳಲ್ಲಿ ರಿಜಿಸ್ಟ್ರೇಶನ್ ನಂಬರ್ ಇರಲಿಲ್ಲ. ಇನ್ನುಳಿದ ವಾಹನಗಳಲ್ಲಿ ಫ್ಯಾಶನ್ ನಂಬರ್ ಪ್ಲೇಟ್,  ಲವ್ ಯು ಚಿನ್ನು, ಗಾಡ್ ಗಿಫ್ಟ್ ಸೇರಿದಂತೆ  ಹಲವು ವಾಕ್ಯಗಳನ್ನೊಳಗೊಂಡ ನಂಬರ್ ಪ್ಲೇಟ್, ನಂಬರ್ ಪ್ಲೇಟ್ ತೆಗೆದು ಹಾಕಿ ಬೈಕ್ ಮೇಲೆ ನಂಬರ್ ಬರೆದಿರುವ ವಾಹನ ಹಾಗೂ ಮಾಲೀಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಡಿಮೆ ಬೆಲೆಯಲ್ಲಿ ರಾಯಲ್ ಎನ್‌ಫೀಲ್ಡ್ 250cc ಬೈಕ್ ಬಿಡುಗಡೆಗೆ ಸಿದ್ಧತೆ!

ಈಗಾಗಲೇ ನಗರದೆಲ್ಲಡೆ ನೊಟೀಸ್ ನೀಡಲಾಗಿದೆ. ಟ್ರಾಫಿಕ್ ನಿಯಮ ಮೀರಿದಂತೆ ಪೊಲೀಸರು ಎಚ್ಚರಿಸಿದ್ದಾರೆ. ಆದರೆ ಹೆಚ್ಚಿನ ವಾಹನ ಸವಾರರು ಮಾತ್ರ ಗಂಭೀರವಾಗಿ ಪರಿಗಣಿಸಿಲ್ಲ. ರಾಂಗ್ ಸೈಡ್, ಸಿಗ್ನಲ್ ಜಂಪ್, ಒನ್ ವೇ, ನೋ ಪಾರ್ಕಿಂಗ್ ಸೇರಿದಂತೆ ಹಲವು ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಡೆಗಟ್ಟಲು ಹೈದರಾಬಾದ್ ಪೊಲೀಸರು ವಿವಿದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹೊಸ ಸಿಗ್ನಲ್, ಝಿಬ್ರಾ ಕ್ರಾಸಿಂಗ್ ಅಳವಡಿಸಿದ್ದಾರೆ.

click me!