ಪ್ರವಾಹದ ಸಂದರ್ಬದಲ್ಲಿ ಸಂತ್ರಸ್ತರನ್ನು ಕಾಪಾಡಿದ ಜೀಪ್‌ಗೆ ನಿಯಮ ಉಲ್ಲಂಘಿಸಿದ ಕಾರಣಕ್ಕೆ ದಂಡ ಹಾಕಲಾಗಿದೆ. ಕಷ್ಟದಲ್ಲಿರುವಾಗ ಇಲ್ಲದ ನಿಯಮ ಈಗೇಕೆ ಎಂದು ಜೀಪ್ ಮಾಲೀಕ ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಕೊಚ್ಚಿ(ಅ.03): ಕಳೆದ ವರ್ಷ ಕೇರಳ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಮಲಪ್ಪುರಂ ತ್ರಿಶೂರ್ ಸೇರಿದಂತೆ 14 ಜಿಲ್ಲೆಗಳು ಕೂಡ ನೆರೆಗೆ ತುತ್ತಾಗಿತ್ತು. ಕೇರಳ ಇದುವರೆಗೆ ಕಂಡು ಕೇಳರಿಯದ ಪ್ರವಾಹಕ್ಕೆ ರಾಜ್ಯವೇ ತತ್ತರಿಸಿತ್ತು. ಕರ್ನಾಟಕ, ತಮಿಳುನಾಡು ಸೇರಿದಂತೆ ನೆರೆ ರಾಜ್ಯಗಳು ಕೇರಳಕ್ಕೆ ನೆರವು ನೀಡಿತ್ತು. ಈ ಭೀಕರ ಪ್ರವಾಹಕ್ಕೆ ಸಿಲುಕಿದವರನ್ನು NDRF, ಭಾರತೀಯ ಸೇನೆ, ಪೊಲೀಸ್, ಸ್ಥಳೀಯರು, ಸಂಘ ಸಂಸ್ಥೆಗಳು, ಸ್ವಯಂ ಸೇವಕರು ರಕ್ಷಿಸಿದ್ದರು. ಇದೇ ವೇಳೆ ನೆರೆ ಸಂತ್ರಸ್ತರನ್ನು ರಕ್ಷಿಸಲು ಬಳಸಿದ ಜೀಪ್‌ಗೆ ಹೊಸ ಟ್ರಾಫಿಕ್ ನಿಯಮದನ್ವಯ ದಂಡ ಹಾಕಲಾಗಿದೆ.
ಇದನ್ನೂ ಓದಿ: ಸೈಕಲ್‌ನಲ್ಲಿ ಬಂದ ವಿದ್ಯಾರ್ಥಿಗೂ ಬಿತ್ತು ಟ್ರಾಫಿಕ್ ಫೈನ್; ವಿಡಿಯೋ ವೈರಲ್!
undefined
ನೆರೆ ಹಾಗೂ ಗುಡ್ಡ ಕುಸಿತದ ವೇಳೆ ಜನರನ್ನು ರಕ್ಷಿಸಲು ಜೀಪ್ ಅತ್ಯುತ್ತಮ ವಾಹನ. ಕಳೆದ ವರ್ಷ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೇಸ್‌ಬುಕ್ ಮೂಲಕ ಮನವಿ ಮಾಡಿದ್ದರು. 4X4 ವಾಹನ ಮಾಲೀಕರು ಸಂತ್ರಸ್ತರ ರಕ್ಷಣೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದರು. ಈ ಮನವಿಗೆ ಒಗೊಟ್ಟ ಕೇರಳ ಥಾರ್ ಜೀಪ್ ಮಾಲೀಕ ತನ್ನ ವಾಹನವನ್ನು ಪೊಲೀಸರಿಗೆ ನೀಡಿದ್ದ. ಈ ಜೀಪ್‌ನಲ್ಲಿ ಪೊಲೀಸರು ಹಲವರನ್ನು ರಕ್ಷಿಸಿದ್ದರು. ಆದರೆ ಮಾಡಿಫಿಕೇಶನ್ ಮಾಡಿದ್ದ ಈ ಜೀಪ್‌ಗೆ ಇದೀಗ ದಂಡ ಹಾಕಲಾಗಿದೆ.
ಇದನ್ನೂ ಓದಿ: 8 ವರ್ಷದ ಬಾಲಕನ ಬೈಕ್ ರೈಡ್; ತಂದೆಗೆ 30,000 ರೂ ದಂಡ!
ನೆರೆ ವೇಳೆ ಎಕ್ಸ್‌ಹಾಸ್ಟ್(ಸೈಲೆನ್ಸರ್) ಮಾಡಿಫೈಡ್ ವಾಹನ ಉತ್ತಮ. ಜೀಪ್ ಅರ್ಧಭಾಗ ನೀರಿನಲ್ಲಿ ಮುಳುಗಿದರೂ ಸೈಲೆನ್ಸರ್ ಮುಂಭಾಗದಲ್ಲಿ ಮಾಡಿಫೈ ಮಾಡಿರುವ ಕಾರಣ ನೀರು ಒಳಪ್ರವೇಶಿಸುವುದಿಲ್ಲ. ಹೀಗಾಗಿ ಈ ಜೀಪನ್ನು ಪೊಲೀಸರು ಬಳಸಿಕೊಂಡಿದ್ದರು. ಇದೀಗ ಅಕ್ಟೋಬರ್ 1 ರಂದು ನಗರದಲ್ಲಿ ಕಾಣಿಸಿಕೊಂಡ ಈ ಜೀಪ್‌ಗೆ ಪೊಲೀಸರು ದಂಡ ಹಾಕಿದ್ದಾರೆ. ಮಾಡಿಫಿಕೇಶನ್, ಟಿಂಟೆಡ್ ಗ್ಲಾಸ್ ಹಾಗೂ ಮಾಡಿಫೈಡ್ LED ಹೆಡ್‌ಲೈಡ್ ಬಳಸಲಾಗಿದೆ. ಹೀಗಾಗಿ 3000 ರೂಪಾಯಿ ದಂಡ ಹಾಕಲಾಗಿದೆ.
ಇದನ್ನೂ ಓದಿ: ಮೋದಿ ಕನಸಿಗೆ ಕೈಜೋಡಿಸಿದ ಟೊಯೊಟಾ, ಮಹೀಂದ್ರ!
ವಾಹನ ಮಾಡಿಫಿಕೇಶನ್ ಮಾಡುವುದು ಕಾನೂನು ಬಾಹಿರ. ಹೀಗಾಗಿ ನೆರೆ ಸಂತ್ರಸ್ತರನ್ನು ಕಾಪಾಡಿದ ಜೀಪ್‌ಗೆ ದಂಡ ಹಾಕಲಾಗಿದೆ. ದಂಡ ಹಾಕಿರುವುದಕ್ಕೆ ಥಾರ್ ಜೀಪ್ ಮಾಲೀಕ ಅಸಮಧಾನ ವ್ಯಕ್ತಪಡಿಸಿದ್ದಾರೆ. ಅಗತ್ಯವಿದ್ದಾಗ ಬಳಸಿಕೊಂಡ ಈಗ ನಿಯಮದ ಕಾರಣ ಹೇಳುತ್ತಿರುವುದು ಸರಿಯಲ್ಲ. 2012ರಲ್ಲೇ ಮಾಡಿಫಿಕೇಶನ್ ನಿಮಯ ಜಾರಿಗೆ ಬಂದಿದೆ. ಸಂಕಷ್ಟದಲ್ಲಿದ್ದಾಗ ಇಲ್ಲದ ನಿಯಮ ಈಗೇಕೆ ಎಂದು ಪ್ರಶ್ನಿಸಿದ್ದಾರೆ.