ಕಾರು ಖರೀದಿಗೆ 5 ಸಾವಿರ ರೂ ಸಾಲ ಮಾಡಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ!

By Web DeskFirst Published Nov 3, 2018, 5:45 PM IST
Highlights

ಭಾರತದ 2ನೇ ಪ್ರಧಾನ ಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರಧಾನಿಯಾದ ಬಳಿಕ ಕಾರು ಖರೀದಿಸಿದ್ದಾರೆ. ಶಾಸ್ತ್ರಿ ಕಾರು ಖರೀದಿ ಹಿಂದೆ ರೋಚಕ ಕಹಾನಿ ಇದೆ. ಆ ಸ್ಟೋರಿ ಏನು? ಶಾಸ್ತ್ರಿ ಖರೀದಿಸಿದ ಕಾರು ಯಾವುದು? ಇಲ್ಲಿದೆ.

ನವದೆಹಲಿ(ನ.03): ಜೈಜವಾನ್, ಜೈಕಿಸಾನ್ ಘೋಷಣೆ ಮೂಲಕ ಭಾರತದಲ್ಲಿ  ಹೊಸ ಶಕೆ ಆರಂಭಿಸಿದ 2ನೇ ಪ್ರಧಾನ ಮಂತ್ರಿ ಎಂದರೆ ಅದು ಲಾಲ್ ಬಹದ್ದೂರ್ ಶಾಸ್ತ್ರಿ. ಭಾರತ ಸ್ವಾತಂತ್ಯ ಸಂಗ್ರಾಮದ ವೇಳೆ ಬರೋಬ್ಬರಿ 9 ವರ್ಷ ಜೈಲು ವಾಸ ಅನುಭವಿಸಿದ ಶಾಸ್ತ್ರಿ ಭಾರತದ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1965ರಲ್ಲಿ ಪಾಕಿಸ್ತಾನ ವಿರುದ್ಧ ಯುದ್ಧ ಘೋಷಿಸಿ ಗೆಲುವು ಸಾಧಿಸಿದ ಚಾಣಾಕ್ಯ ಲಾಲ್ ಬಹದ್ದೂರ್ ಶಾಸ್ತ್ರಿ,  ಪ್ರಧಾನ ಮಂತ್ರಿಯಾದಾಗ ಫಿಯೆಟ್ 1100 ಕಾರು ಖರೀಸಿದ್ದರು. ಈ ಕಾರನ್ನ 12,000 ರೂಪಾಯಿ ನೀಡಿ ಶಾಸ್ತ್ರಿ  ಖರೀದಿಸಿದ್ದರು.

ಪ್ರಧಾನ ಮಂತ್ರಿಯಾಗಿದ್ದ ಶಾಸ್ತ್ರಿಗೆ ಈ ಕಾರು ಖರೀದಿಸಲು ಹಣವಿರಲಿಲ್ಲ. ಶಾಸ್ತ್ರಿ ಬ್ಯಾಂಕ್ ಖಾತೆಯಲ್ಲಿ ಇದ್ದಿದ್ದು ಕೇವಲ 7,000 ರೂಪಾಯಿ. ಹೀಗಾಗಿ ಫಿಯೆಟ್ 1100 ಕಾರು ಖರೀದಿಸಲು ಶಾಸ್ತ್ರಿಗೆ 5,000 ರೂಪಾಯಿಗಳ ಕೊರತೆ ಎದುರಾಗಿತ್ತು. ಒಂದು ಹಂತದಲ್ಲಿ ಕಾರು ಬೇಡ ಎಂದೇ ನಿರ್ಧರಿಸಿದ್ದ ಶಾಸ್ತ್ರಿ ಕೊನೆಗೆ ಅನಿವಾರ್ಯತೆಯಿಂದ ಕಾರು ಖರೀದಿಗೆ ಮುಂದಾದರು. ಇದಕ್ಕಾಗಿ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಿಂದ ಶಾಸ್ತ್ರಿ 5,000 ರೂಪಾಯಿ ಸಾಲ ಪಡೆದಿದ್ದರು.

ಶಾಸ್ತ್ರಿ ಕಾರು ಖರೀದಿಸಿ ಸಾಲ ಮರುಪಾವತಿಸೋ ಮೊದಲೇ 1966ರಲ್ಲಿ ಅನುಮಾನಾಸ್ವದವಾಗಿ ಸಾವನ್ನಪ್ಪಿದ್ದರು. ಶಾಸ್ತ್ರಿ ಸಾವಿನ ಬಳಿಕ ಅವರ ಪತ್ನಿ, ತಮಗೆ  ಬಂದ ಪೆನ್ಶನ್ ಹಣದಲ್ಲಿ ಸಾಲ ಪಾವತಿಸಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಬಳಸಿದ ಫಿಯೆಟ್ 1100 ಕಾರು ಇದೀಗ ದೆಹಲಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮೆಮೋರಿಯಲ್ ವಸ್ತುಸಂಗ್ರಹಾಲಯದಲ್ಲಿದೆ. 

click me!