ಪ್ರಧಾನಿ ನರೇಂದ್ರ ಮೋದಿ ಕನಸಿಗೆ ಆಟೋಮೊಬೈಲ್ ಕಂಪನಿಗಳಾದ ಟೊಯೊಟಾ ಹಾಗೂ ಮಹೀಂದ್ರ ಸಾಥ್ ನೀಡಿದೆ. ಈ ಮೂಲಕ ಹೊಸ ಭಾರತಕ್ಕೆ ದಿಟ್ಟ ಹೆಜ್ಜೆ ಇಟ್ಟಿದೆ.
ಬೆಂಗಳೂರು(ಅ.02): ಪ್ರಧಾನಿ ನರೇಂದ್ರ ಮೋದಿಯ ಸ್ವಚ್ಚ ಭಾರತ ಅಭಿಯಾನದ ಬಳಿಕ ಇದೀಗ ಪ್ಲಾಸ್ಟಿಕ್ ಬಹಿಷ್ಕರಿಸಿ ಪರಿಸರ ಉಳಿಸಿ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. 150ನೇ ಗಾಂಧಿ ಜಯಂತಿ ಸಂದರ್ಭದಲ್ಲಿ ಮೋದಿ, ಪ್ಲಾಸ್ಟಿಕ್ ನಿಷೇಧ ಕುರಿತು ಖಡಕ್ ಮಾತುಗಳನ್ನಾಡಿದ್ದಾರೆ. ಇದೀಗ ಮೋದಿ ಕನಸಿಗೆ ಆಟೋಮೊಬೈಲ್ ಕಂಪನಿಗಳಾದ ಮಹೀಂದ್ರ ಹಾಗೂ ಟೊಯೊಟಾ ಕೈಜೋಡಿಸಿದೆ.
ಇದನ್ನೂ ಓದಿ: ಪ್ರವಾಹದಲ್ಲಿ ಸಿಕ್ಕಿಬಿದ್ದ ಜಾಗ್ವಾರ್, ರಸ್ತೆ ದಾಟಿದ ಬೊಲೆರೋ: ಮಹೀಂದ್ರಾ ಟ್ವೀಟ್ ವೈರಲ್!
undefined
ಪರಿಸರ ನಾಶ ಮಾಡುವ ಪ್ಲಾಸ್ಟಿಕ್ ಮುಕ್ತಮಾಡಲು ಮಹೀಂದ್ರ ಹಾಗೂ ಟೊಯೊಟಾ ಮುಂದಾಗಿದೆ. ಮಹೀಂದ್ರ ಹಾಗೂ ಟೊಯೊಟಾ ಕಂಪನಿ ತಮ್ಮ ಕಾರು ಉತ್ಪಾದನೆಯಲ್ಲಿ ಯಾವುದೇ ಪ್ಲಾಸ್ಟಿಕ್ ಬಳಕೆ ಮಾಡದಿರಲು ನಿರ್ಧರಿಸಿದೆ. ಇದೀಗ ಬಿಡದಿ ಸಮೀಪವಿರುವ ಟೊಯೊಟಾ ಉತ್ಪಾದನಾ ಘಟಕದಲ್ಲಿ ಪ್ಲಾಸ್ಟಿಕ್ ಮುಕ್ತ ಮಾಡಲಾಗಿದೆ.
ಇದನ್ನೂ ಓದಿ: ಕಾರು ಗಿಫ್ಟ್ ಕೇಳಿದ ಅಭಿಮಾನಿ; ಮಹೀಂದ್ರ ಉತ್ತರಕ್ಕೆ ಕಕ್ಕಾಬಿಕ್ಕಿ!
ಮಹೀಂದ್ರ ಕಂಪನಿಯ 15 ಘಟಕಗಳು ಯಾವುದೇ ಪ್ಲಾಸ್ಟಿಕ್ ಉಪಯೋಗಿಸಿದಿರಲು ನಿರ್ಧರಿಸಿದೆ. ಮಹೀಂದ್ರ ವ್ಯವಸ್ಥಾಪಕ ನಿರ್ದೇಶಕ ಪವನ್ ಗೊಯೆಂಕಾ ಪ್ಲಾಸ್ಟಿಕ್ ಮುಕ್ತ ಘಟಕದ ಕುರಿತು ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಭಾರತದಲ್ಲಿ ಮಹೀಂದ್ರ ಹಾಗೂ ಫೋರ್ಡ್ ಕಂಪನಿ ಜೊತೆಯಾಗಿ ಕಾರು ಉತ್ಪಾದನೆ ಮಾಡಲಿದೆ. ಹೀಗಾಗಿ ಫೋರ್ಡ್ ಕೂಡ ಶೀಘ್ರದಲ್ಲೇ ಪ್ಲಾಸ್ಟಿಕ್ ಮುಕ್ತ ಮಾಡಲಿದೆ.