ಭಾರತದಲ್ಲಿ ಫೆರಾರಿ F8 ಟ್ರಿಬ್ಯೂಟೋ ಕಾರು ಬಿಡುಗಡೆ!

By Suvarna NewsFirst Published Aug 9, 2020, 2:56 PM IST
Highlights

ಸೂಪರ್ ಕಾರು ಫೆರಾರಿ ಹೊಸ ಅವತಾರದಲ್ಲಿ ಭಾರತದಲ್ಲಿ ಬಿಡುಗಡೆಯಾಗಿದೆ. ಫೆರಾರಿ 488 GTB ಕಾರಿನ ಬದಲಾಗಿ ಇದೀಗ ಹೊಚ್ಚ ಹೊಸ ಹಾಗೂ ಹಲವು ವಿಶೇಷತೆ ಒಳಗೊಂಡಿರುವ ಫೆರಾರಿ F8 ಟ್ರಿಬ್ಯುಟೋ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ದೆಹಲಿ(ಆ.09): ಫೆರಾರಿ ಭಾರತದಲ್ಲಿ V8 ಪವರ್ ಎಂಜಿನ್ ಹೊಂದಿರುವ ಫೆರಾರಿ F8 ಟ್ರಿಬ್ಯುಟೋ ಕಾರು ಬಿಡುಗಡೆಯಾಗಿದೆ. ಇದರ ಬೆಲೆ 4.02 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇಟಲಿ ಮೂಲದ ಫೆರಾರಿ ಬಿಡುಗಡೆ ಮಾಡಿರುವ ಟ್ವಿನ್ ಟರ್ಬೋ ಎಂಜಿನ್ ಫೆರಾರಿ F8 ಟ್ರಿಬ್ಯುಟೋ ಕಾರು ಅತ್ಯಂತ ಶಕ್ತಿಶಾಲಿ ಹಾಗೂ ದಕ್ಷ ಎಂಜಿನ್ ಹೊಂದಿದೆ. 

ಮೊದಲ ಫೆರಾರಿ ಕಾರು 25 ವರ್ಷಗಳ ಬಳಿಕ ಹರಾಜು-ಬೆಲೆ 41 ಕೋಟಿಯಿಂದ ಆರಂಭ!.

3.9 ಲೀಟರ್ , ಟ್ವಿನ್ ಟರ್ಬೋ V8 ಎಂಜಿನ್ ಹೊಂದಿರುವ ನೂತನ ಫೆರಾರಿ F8 ಕಾರಿನ ಸಾಮರ್ಥ್ಯವನ್ನು  488 GTB ಫೆರಾರಿ ಕಾರಿಗಿಂತ 50PS ಪವರ್ ಹಾಗೂ  10Nm ಪೀಕ್ ಟಾರ್ಕ್ ಹೆಚ್ಚಿಸಲಾಗಿದೆ.  488 GTB ಫೆರಾರಿ ಕಾರು   730PS ಪವರ್ ಹಾಗೂ  770Nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ. 

ಅಂಬಾನಿ ಮನೆ ಸೇರಿದ ಫೆರಾರಿ ಹಾಗೂ ಮೆಕ್ಲೆರೆನ್ ಸೂಪರ್ ಕಾರು!.

ನೂತನ ಫೆರಾರಿ F8 ಕಾರು 100 ಕಿ.ಮೀ ವೇಗವನ್ನು ಕೇವಲ 2.9 ಸೆಕೆಂಡ್‌ನಲ್ಲಿ ತಲುಪಲಿದೆ. ಇನ್ನು 7.8 ಸೆಕೆಂಡ್‌ಗಳಲ್ಲಿ 200 ಕಿ.ಮೀ ವೇಗ ತಲುಪಲಿದೆ. ನೂನತ ಕಾರಿನ ಗರಿಷ್ಠ ವೇಗ 340 kmph. 2019ರ ಜಿನೆವಾ ಮೋಟಾರು ಶೋನಲ್ಲಿ ನೂತನ ಫೆರಾರಿ F8 ಟ್ರಿಬ್ಯುಟೋ ಕಾರನ್ನು ಪರಿಚಯಿಸಲಾಗಿತ್ತು.

ನೂತನ ಫೆರಾರಿ F8 ಟ್ರಿಬ್ಯುಟೋ ಕಾರು ಲ್ಯಾಂಬೋರ್ಗಿನಿ ಹುರಾಕಾನ್ EVo ಹಾಗೂ ಮೆಕ್ಲೆರಾನ್ 720S ಕಾರಿಗೆ ಪ್ರತಿಸ್ಪರ್ಧಿಯಾಗಿದೆ.

click me!