ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನ ಬಳಕೆಗೆ ಹೆಚ್ಚು ಒತ್ತು ನೀಡುತ್ತಿದೆ. ಇದಕ್ಕಾಗಿ ಕೆಲ ಯೋಜನೆಗಳನ್ನು ಜಾರಿಗೆ ತಂದಿದೆ. ಸಬ್ಸಡಿ, ಪ್ರೋತ್ಸಾಹಕ ಧನ ಸೇರಿದಂತೆ ಕೆಲ ಸ್ಕೀಮ್‌ಗಳು ಚಾಲ್ತಿಯಲ್ಲಿದೆ. ಆದರೂ ಎಲೆಕ್ಟ್ರಿಕ್ ವಾಹನ(EV)ಬೆಲೆ ದುಬಾರಿ. ಇದೀಗ ರಾಯಲ್ ಎನ್‌ಫೀಲ್ಡ್ ಬೈಕನ್ನು ಇದೀಗ ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿದ್ದು, EV ಕಂಪನಿಗಳೆ ದಂಗಾಗಿದೆ. ಮೇಡ್ ಇನ್ ಇಂಡಿಯಾ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಕೊಚ್ಚಿ(ಆ.09): ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇದೀಗ ಸರಿಸುಮಾರು 1 ಲಕ್ಷ ರೂಪಾಯಿ. ಇನ್ನು ಎಲೆಕ್ಟ್ರಿಕ್ ಬೈಕ್ ಬೆಲೆ ಸರಿಸುಮಾರು 2 ಲಕ್ಷ ರೂಪಾಯಿ. ಆದರೆ ಕಡಿಮೆ ಬೆಲೆಯಲ್ಲಿ ನೂತನ ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ ನಿರ್ಮಾಣ ಮಾಡಲಾಗಿದೆ. ಈ ಬೈಕ್ ನಿರ್ಮಿಸಿರುವುದು ಕೇರಳದ ಕೊಚ್ಚಿಯಲ್ಲಿ. ಕೇರಳದ ಹೌಂಡ್ ಎಲೆಕ್ಟ್ರಿಕ್ ಕಂಪನಿ ನೂತನ ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ರಾಯಲ್ ಎನ್‌ಫೀಲ್ಡ್ ಬೈಕ್ ನಿರ್ಮಾಣ ಮಾಡಿದೆ.
ದೆಹಲಿಯಲ್ಲಿ ಬಿಡುಗಡೆಯಾಗುತ್ತಿದೆ ಬೆಂಗಳೂರಿನ ಎದರ್ ಎಲೆಕ್ಟ್ರಿಕ್ ಸ್ಕೂಟರ್!
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್‌ನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಲಾಗಿದೆ. ಪೆಟ್ರೋಲ್ ಎಂಜಿನ್ ಬೈಕನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಲು ಹೌಂಡ್ ಎಲೆಕ್ಟ್ರಿಕ್ ಡಿ ಹರಿಕೃಷ್ಣ ಹಾಗೂ ಮುಸ್ತಾಫಾ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಈ ಜವಾಬ್ದಾರಿ ನೀಡಲಾಗಿತ್ತು. ಕಂಪನಿ ಹೀರೋ ಸ್ಪ್ಲೆಂಡರ್ ರೀತಿಯ ಲಘು ಬೈಕ್‌ಗನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಲು ನಿರ್ಧರಿಸಿತ್ತು ಎಂದು ಹೌಂಡ್ ಎಲೆಕ್ಟ್ರಿಕ್ ಸಿಇಒ ಪೌಲ್ ಅಲೆಕ್ಸ್ ಹೇಳಿದ್ದಾರೆ.
470 ಕಿ.ಮೀ ಮೈಲೇಜ್, 15 ನಿಮಿಷದಲ್ಲಿ ಚಾರ್ಜಿಂಗ್, ಬರುತ್ತಿದೆ Evoke 6061 ಎಲೆಕ್ಟ್ರಿಕ್ ಬೈಕ್!
ಹರಿಕೃಷ್ಣ ಹಾಗೂ ಮುಸ್ತಾಫ ಕೊಂಚ ಭಿನ್ನವಾಗಿ ಆಲೋಚಿಸಿದ್ದಾರೆ. ಈಗಾಗಲೇ ಹಲವರು ಲಘು ಬೈಕ್‌ಗಳನ್ನು ಎಲೆಕ್ಟ್ರಿಕ್ ಬೈಕ್ ಆಗಿ ಪರಿವರ್ತಿಸಿದ್ದಾರೆ. ಹೀಗಾಗಿ ರಾಯಲ್ ಎನ್‌ಫೀಲ್ಡ್ ಬೈಕನ್ನೇ ಪರಿವರ್ತಿಸಲು ಯೋಜನೆ ಹಾಕಿಕೊಂಡಿದ್ದಾರೆ. 10kw ಎಲೆಕ್ಟ್ರಿಕ್ ಮೋಟಾರ್, 72A/62V ಬ್ಯಾಟರಿ ಪ್ಯಾಕ್ ಬಳಸಲು ನಿರ್ಧರಿಸಿದ್ದಾರೆ.
ರಾಯಲ್ ಎನ್‌ಫೀಲ್ಡ್ ಬೈಕ್ ಎಂಜಿನ್ ಸಂಪೂರ್ಣ ತೆಗೆದು ಈ ಜಾಗದಲ್ಲಿ 32 ಕೆಜಿ ತೂಕದ ಬ್ಯಾಟರಿ ಹಾಗೂ 10 ಕೆಜಿ ತೂಕದ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗಿದೆ. ಇದಕ್ಕಾಗಿ ಹಲವು ಅಧ್ಯಯನ ನಡೆಸಲಾಗಿದೆ. ರಾಯಲ್ ಎನ್‌ಫೀಲ್ಡ್ ನೈಜತೆಗೆ ಯಾವುದೇ ಧಕ್ಕೆ ಬರದ ರೀತಿಯಲ್ಲಿ ಬೈಕ್ ತಯಾರಿಸಲು ಪ್ಲಾನ್ ಮಾಡಿದ್ದಾರೆ.
ರಾಯಲ್ ಎನ್‌ಫೀಲ್ಡ್ ಬೈಕ್ ಪರಿವರ್ತಿಸಲು 10 ತಿಂಗಳ ಕಾಲ ತೆಗೆದುಕೊಂಡಿದ್ದಾರೆ. ಒಟ್ಟು 166 ಕೆಜಿ ತೂಕದ ಈ ಬೈಕ್ ಸಂಪೂರ್ಣ ಚಾರ್ಜ್‌ಗೆ 80 ಕಿಲೋಮೀಟರ್ ಮೈಲೇಜ್ ನೀಡಲಿದೆ. ಗರಿಷ್ಠ ವೇಗ 100 ಕಿ.ಮೀ ಪ್ರತಿ ಗಂಟೆಗೆ. ಎಲೆಕ್ಟ್ರಿಕ್ ಬೈಕ್ ಪರಿವರ್ತನೆಗೆ ಒಟ್ಟು 35,000 ರೂಪಾಯಿ ಖರ್ಚಾಗಿದೆ.