ಎಲೆಕ್ಟ್ರಿಕ ಸ್ಕೂಟರ್ ವಿಭಾಗದಲ್ಲಿ ಸಂಚಲನ ಮೂಡಿಸಿರುವ ಬೆಂಗಳೂರಿನ ಎದರ್ ಎನರ್ಜಿ ಇದೀಗ ದೆಹಲಿಯಲ್ಲಿ ಬಿಡುಗಡೆಯಾಗುತ್ತಿದೆ. ಬೆಂಗಳೂರು, ಚೆನ್ನೈನಲ್ಲಿ ಸದ್ಯ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಎದರ್ ಸ್ಕೂಟರ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಎದರ್, ದೇಶದ ಇತರ ನಗರಗಳಿಗೂ ಮಾರಾಟ ವಿಸ್ತರಿಸಲು ತಯಾರಿ ನಡೆಸುತ್ತಿದೆ.
ಬೆಂಗಳೂರು(ಆ.09): ಎಲೆಕ್ಟ್ರಿಕ್ ವಾಹಗಳಿಗೆ ಹೆಚ್ಚಿನ ಬೇಡಿಕೆ ಇದೆ. ಭವಿಷ್ಯದ ವಾಹನವಾಗಿರುವ ಎಲೆಕ್ಟ್ರಿಕ್ ವಾಹನಕ್ಕೆ ಸರ್ಕಾರ ಕೂಡ ರಿಯಾಯಿತಿ ನೀಡಿದೆ. ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರಿನ ಸ್ಟಾರ್ಟ್ ಆಪ್ ಕಂಪನಿ ಎದರ್ ಎನರ್ಜಿ ಇದೀಗ ತನ್ನ ಮಾರಾಟ ಜಾಲವನ್ನು ವಿಸ್ತರಿಸುತ್ತಿದೆ. ಎದರ್ ಎಲೆಕ್ಟ್ರಿಕ್ ಸ್ಕೂಟರ್ ಬೆಂಗಳೂರು ಹಾಗೂ ಚೆನ್ನೈ ನಗರದಲ್ಲಿ ಲಭ್ಯವಿದೆ. ಇದೀಗ ರಾಷ್ಟ್ರ ರಾಜಧಾನಿ ದೆಹಲಿಗೆ ಮಾರಾಟ ವಿಸ್ತರಿಸುತ್ತಿದೆ.
ಎಲೆಕ್ಟ್ರಿಕ್ ಸ್ಕೂಟರ್ ಯಶಸ್ಸಿನ ಬೆನ್ನಲ್ಲೇ ಬೈಕ್ ಬಿಡುಗಡೆಗೆ ಎದರ್ ಸಿದ್ಧತೆ!
undefined
ಎದರ್ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ದೆಹಲಿಯಲ್ಲಿ ಬಿಡುಗಡೆಯಾಗುತ್ತಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೊಸ ಎಲೆಕ್ಟ್ರಿಕ್ ನೀತಿ ಜಾರಿಗೆ ತಂದಿದ್ದಾರೆ. ವಿಶೇಷ ರಿಯಾಯಿತಿ, ಪ್ರೋತ್ಸಾಹಕ ಧನ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಿದ್ದಾರೆ. ಇದರ ಬೆನ್ನಲ್ಲೇ, ಎದರ್ ಎನರ್ಜಿ ದೆಹಲಿ ಪ್ರವೇಶಿಸುತ್ತಿದೆ. ಬೆಂಗಳೂರು ಹಾಗೂ ಚೆನ್ನೈನಲ್ಲಿ ಯಶಸ್ವಿಯಾಗಿರುವ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ದೆಹಲಿಯಲ್ಲಿ ಮೋಡಿ ಮಾಡಲು ಸಜ್ಜಾಗಿದೆ.
ಬೆಂಗಳೂರಿನ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಮತ್ತೆ 4 ನಗರಗಳಲ್ಲಿ ಲಾಂಚ್!
ದೆಹಲಿ ಸರ್ಕಾರ ಎಲೆಕ್ಟ್ರಿಕ್ ಸ್ಕೂಟರ್, ಬೈಕ್, ಹಾಗೂ ಇ ರಿಕ್ಷಾ ಖರೀದಿಸುವ ಗ್ರಾಹಕರಿಗೆ 30,000 ರೂಪಾಯಿ ಪ್ರೋತ್ಸಾಹಸ ಧನ ನೀಡಲಿದೆ. ಇನ್ನು ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಬರೋಬ್ಬರಿ 1.5 ಲಕ್ಷ ರೂಪಾಯಿ ಪ್ರೋತ್ಸಾಹಕ ಧನ ನೀಡಲಿದೆ. ಈ ಭರ್ಜರಿ ಯೋಜನೆ ಮೂಲಕ ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನ ಮಾರಾಟ ಉತ್ತೇಜಿಸಲು ದೆಹಲಿ ಸರ್ಕಾರ ನಿರ್ಧರಿಸಿದೆ. ಇಷ್ಟೇ ಅಲ್ಲ ಮಾಯು ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ತಗ್ಗಿಸಲು ಯೋಜನೆ ಹಾಕಿಕೊಂಡಿದೆ.
ದೆಹಲಿ ಸರ್ಕಾರದ ಯೋಜನೆಯಿಂದ ಎದರ್ ಎನರ್ಜಿ ಸ್ಕೂಟರ್ ಮಾರಾಟಕ್ಕೆ ಹೆಚ್ಚಿನ ಅವಕಾಶ ಸಿಗಲಿದೆ. ಸದ್ಯ ಎದರ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 2 ವೇರಿಯೆಂಟ್ ಲಭ್ಯವಿದೆ. ಎದರ್ 450 ಹಾಗೂ ಎದರ್ 450X ಸ್ಕೂಟರ್ ಲಭ್ಯವಿದೆ. ಈ ಸ್ಕೂಟರ್ ಆನ್ ರೋಡ್ ಬೆಲೆ ಸರಿಸುಮಾರು 1.5 ಲಕ್ಷ ರೂಪಾಯಿ.