ವಿಶ್ವದ ದುಬಾರಿ SUV ಕಾರು ಖರೀದಿಸಿದ ರೋನಾಲ್ಡೋ!

By Web Desk  |  First Published Apr 17, 2019, 4:33 PM IST

ಪುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡ್ 20ನೇ ಕಾರು ಖರೀದಿಸಿದ್ದಾರೆ. ಈ ಬಾರಿ ರೋನಾಲ್ಡೋ ವಿಶ್ವದ ಅತ್ಯಂತ ದುಬಾರಿ SUV ಕಾರು ಖರೀದಿಸಿದ್ದಾರೆ. ರೋನಾಲ್ಡೋ ಖರೀದಿಸಿದ ನೂತನ ಕಾರು ಯಾವುದು? ಇಲ್ಲಿದೆ ವಿವರ.


ಪೋರ್ಚುಗಲ್(ಏ.17): ವಿಶ್ವದ ಸ್ಟಾರ್ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋ  ಪ್ರತಿ ವರ್ಷದ ಆದಾಯ  ಸರಿ ಸುಮಾರು 750 ಕೋಟಿ ರೂಪಾಯಿ. ವಿಶ್ವದ ಶ್ರೀಮಂತರ ಕ್ರೀಡಾಪಟುಗಳ ಪೈಕಿ ಅಗ್ರಸ್ಥಾನದಲ್ಲಿರುವ ರೋನಾಲ್ಡೋ , ಆದಾಯ ವರ್ಷದಿಂದ ವರ್ಷಕ್ಕೆ ಡಬಲ್ ಆಗ್ತಿದೆ. ಶ್ರೀಮಂತ ಕ್ರೀಡಾಪಟು ರೋನಾಲ್ಡೋ ಬಳಿ ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ವಿಶೇಷ ಅಂದರೆ ರೋನಾಲ್ಡೋ  ಪ್ರೈವೇಟ್ ಜೆಟ್ ಕೂಡ ಹೊಂದಿದ್ದಾರೆ.

ಇದನ್ನೂ ಓದಿ: ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೋ ರೋನಾಲ್ಡೋ ಬಳಿ ಏಷ್ಟು ಕಾರುಗಳಿವೆ ಗೊತ್ತಾ?

Tap to resize

Latest Videos

undefined

ಇದೀಗ ರೋನಾಲ್ಡ್ ಕಾರು ಸಂಗ್ರಹಕ್ಕೆ ಮತ್ತೊಂದು ಸೇರ್ಪಡೆಯಾಗಿದೆ. ಈ ಬಾರಿ ರೋನಾಲ್ಡೋ ಖರೀದಿಸಿದ ಕಾರು ವಿಶ್ವದ ಅತ್ಯಂತ ದುಬಾರಿ SUV ಕಾರಾದ ರೋಲ್ಸ್ ರಾಯ್ಸ್ ಕಲ್ಲಿನಾನ್. ದುಬಾರಿ ಕಾರಾದರೂ ರೋನಾಲ್ಡೋಗೆ ಇದು ಕಡಿಮೆ ಬೆಲೆಯ ಕಾರು.  ಇದರ ಬೆಲೆ 6.95 ಕೋಟಿ(ಎಕ್ಸ್ ಶೋ ರೂಂ). ರೋಲ್ಸ್ ರಾಯ್ಸ್ ಕಲ್ಲಿನಾನ್ ಕಾರು 6.75 ಲೀಟರ್ V12 ಪೆಟ್ರೋಲ್ ಎಂಜಿನ್ ಹೊಂದಿದ್ದು,  563 Bhp ಪವರ್ ಹಾಗೂ 850 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  6 ಸ್ಪೀಡ್ ಅಟೋಮ್ಯಾಟಿಕ್ ಗೇರ್ ಹೊಂದಿದೆ. 

 

Trabalho feito 👌👍 pic.twitter.com/C5i336jdQ4

— Cristiano Ronaldo (@Cristiano)

 

ಇದನ್ನೂ ಓದಿ: ರೋಲ್ಸ್ ರಾಯ್ಸ್ ದುಬಾರಿ ಕಾರು ಖರೀದಿಸಿದ ಭಾರತದ ಮೊದಲ ಮಹಿಳೆ!

ರೋನಾಲ್ಡೋ ಬಳಿ ಬುಗಾಟಿ ವೆಯ್‌ರಾನ್, ಲ್ಯಾಂಬೋರ್ಗಿನಿ ಅವೆಂಟಡರ್, ಬೆಂಟ್ಲಿ ಜಿಟಿ ಸ್ಪೀಡ್, ಆಸ್ಟನ್ ಮಾರ್ಟಿನ್ ಡಿಬಿ9, ಆಡಿ ಆರ್8, ಫೆರಾರಿ 599 ಜಿಟಿಓ, ಫೆರಾರಿ 599 ಜಿಟಿಬಿ, ಫೆರಾರಿ ಎಫ್430, ರಾಲ್ಸ್ ರಾಯ್ಸ್ ಫ್ಯಾಂಟಮ್, 

click me!