ಬಾಲಿವುಡ್ ನಟನ ಬೈಕ್ ಸೀಝ್ ಮಾಡಿದ ಪೊಲೀಸ್!

Published : Apr 16, 2019, 05:26 PM ISTUpdated : Apr 16, 2019, 05:32 PM IST
ಬಾಲಿವುಡ್ ನಟನ ಬೈಕ್ ಸೀಝ್ ಮಾಡಿದ ಪೊಲೀಸ್!

ಸಾರಾಂಶ

ನಿಯಮ ಉಲ್ಲಂಘಿಸಿದ ಕಾರಣಕ್ಕೆ ಬಾಲಿವುಡ್ ಹೀರೋ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಷ್ಟಕ್ಕೂ ಪೊಲೀಸರು ಬೈಕ್ ಸೀಝ್ ಮಾಡಿದ್ದೇಕೆ? ಇಲ್ಲಿದೆ ಹೆಚ್ಚಿನ ವಿವರ.

ಮುಂಬೈ(ಏ.16): ನಿಯಮ ಎಲ್ಲರಿಗೂ ಒಂದೇ. ಎಚ್ಚರ ತಪ್ಪಿದರೆ ದಂಡ ಖಚಿತ. ಅದರಲ್ಲೂ ಸಿಗ್ನಲ್ ಕ್ಯಾಮರ, ಡಿಜಿಟಲ್ ಚಲನ್ ಸೇರಿದಂತೆ ಆಧುನಿಕ ತಂತ್ರಜ್ಞಾನದ ಮೂಲಕ ತ್ವರಿತಗತಿಯಲ್ಲಿ ನಿಯಮ ಉಲ್ಲಂಘನೆಗೆ ದಂಡ ವಿದಿಸಲಾಗುತ್ತಿದೆ. ಇದೀಗ ರಸ್ತೆ ನಿಯಮ ಉಲ್ಲಂಘಿಸಿದ ಬಾಲಿವುಡ್ ನಟನ ಬೈಕ್ ಸೀಝ್ ಮಾಡಿದ ಘಟನೆ ಮುಂಬೈನಲ್ಲಿ ನಡೆದಿದೆ. ದಡಕ್ ಹೀರೋ ಇಶಾನ್ ಕಟ್ಟರ್ ಬೈಕನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಇದನ್ನೂ ಓದಿ: ಮತದಾನ ಮಾಡುವ ಗ್ರಾಹಕರಿಗೆ ಹೀರೋ ಮೋಟಾರ್‌ನಿಂದ ಭರ್ಜರಿ ಗಿಫ್ಟ್!

ನೋ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿದ್ದರು. ನಿಯಮ ಉಲ್ಲಂಘಿಸಿ ಪಾರ್ಕಿಂಗ್ ಮಾಡಿದ ಇಶಾನ್ ಕಟ್ಟರ್  KTM 250 ಡ್ಯೂಕ್ ಬೈಕನ್ನು ಪೊಲೀಸರು ಸೀಝ್ ಮಾಡಿದ್ದಾರೆ. ಕ್ರೇನ್ ಮೂಲಕ ಇಶಾನ್ ಬೈಕನ್ನು  ಪೊಲೀಸ್ ಟ್ರಕ್‌ಗೆ ತುಂಬಿಸಿದ್ದಾರೆ. ಅಷ್ಟರಲ್ಲೇ ಇಶಾನ್ ಸ್ಥಳಕ್ಕೆ ಆಗಮಿಸಿದ್ದಾರೆ.  ಬಳಿಕ 500 ರೂಪಾಯಿ ದಂಡ ಕಟ್ಟಿ ಬೈಕ್ ಬಿಡಿಸಿಕೊಂಡಿದ್ದಾರೆ.

 

 

ಇದನ್ನೂ ಓದಿ: KTM ಡ್ಯೂಕ್ 125 ಪ್ರತಿಸ್ಪರ್ಧಿ- ಬಜಾಜ್ ಪಲ್ಸಾರ್ 125NS ಶೀಘ್ರದಲ್ಲಿ!

ಇಶಾನ್ ಕಟ್ಟರ್ ಮುಂಬೈ ಸುತ್ತಾಡಲು, ಶಾಪಿಂಗ್ ಹಾಗೂ ಇತರ ಕೆಲಸಗಳಿಗಾಗಿ ಬೈಕನ್ನೇ ಹೆಚ್ಚಾಗಿ ಬಳಸುತ್ತಾರೆ. ಮುಂಬೈ ನಗರದ ಟ್ರಾಫಿಕ್‌ನಲ್ಲಿ ಸುಲಭವಾಗಿ ಪ್ರಯಾಣಿಸಲು ಹಾಗೂ ಸಮಯಕ್ಕೆ ಸರಿಯಾಗಿ ಹಾಜರಾಗಲು ಬೈಕ್ ಸೂಕ್ತ.  ಇಶಾನ್ ಬಳಿ ಇರೋ KTM 250 ಡ್ಯೂಕ್  248.8cc, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್,  30 Bhp ಪವರ್ (@9,000 rpm) ಹಾಗೂ 24 Nm (@7,500 rpm) ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇನ್ನು ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ