RCB ಸತತ ಸೋಲು ಅನುಭವಿಸಿ ಹತಾಶೆಗೊಂಡಿದೆ. ಆದರೆ ನಾಯಕ ವಿರಾಟ್ ಕೊಹ್ಲಿ 4 ಕೋಟಿ ರೂಪಾಯಿ ಮೌಲ್ಯದ ಕಾರು ಖರೀದಿಸಿದ್ದಾರೆ. ಕೊಹ್ಲಿ ಖರೀದಿಸಿದ ದುಬಾರಿ ಹಾಗೂ ಐಷಾರಾಮಿ ಕಾರು ಯಾವುದು? ಇಲ್ಲಿದೆ ವಿವರ.
ಮುಂಬೈ(ಏ.16): ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿರುವ ವಿರಾಟ್ ಕೊಹ್ಲಿಗೆ, ಈ ಬಾರಿ ಅದೃಷ್ಟ ಮಾತ್ರ ಕೈಹಿಡಿಯುತ್ತಿಲ್ಲ. ಸೋಲಿನ ಸರಮಾಲೆ ಕೊಹ್ಲಿ ಚಿಂತೆ ಹೆಚ್ಚಿಸಿದೆ. ಇದರ ನಡುವೆ ವಿರಾಟ್ ಕೊಹ್ಲಿ ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಕಾರು ಖರೀದಿಸಿದ್ದಾರೆ. ಇದರ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಐಪಿಎಲ್ ಆರಂಭಕ್ಕೂ ಮುನ್ನವೇ ಕೊಹ್ಲಿ ಈ ಕಾರು ಖರೀದಿಸಿದ್ದರು.
ಇದನ್ನೂ ಓದಿ: ರೋಲ್ಸ್ ರಾಯ್ಸ್ ಕಲ್ಲಿನಾನ್ ವಿಶ್ವದ ಅತ್ಯಂತ ದುಬಾರಿ SUV ಕಾರು!
undefined
ವಿರಾಟ್ ಕೊಹ್ಲಿಗೆ ಕಾರು ಕ್ರೇಜ್ ಇತರ ಆಟಗಾರರಿಗಿಂತ ಸ್ವಲ್ಪ ಹೆಚ್ಚಿದೆ. ಕೊಹ್ಲಿ ಬಳಿ ಆಡಿR8, ಬೆಂಟ್ಲಿ ಕಾಂಟಿನೆಂಟಲ್ GT, ರೇಂಜ್ ರೋವರ್ ಅಟೋಬಯೋಗ್ರಫಿ ಸೇರಿದಂತೆ ಹಲವು ದುಬಾರಿ ಕಾರುಗಳಿವೆ. ಈ ಸಾಲಿಗೆ ಇದೀಗ ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಕಾರು ಸೇರಿಕೊಂಡಿದೆ. ಕೊಹ್ಲಿ ಖರೀದಿಸಿದ ವೇರಿಯೆಂಟ್ ಯಾವುದು ಅನ್ನೋದು ಮಾಹಿತಿ ಬಹಿರಂಗವಾಗಿಲ್ಲ.
ಇದನ್ನೂ ಓದಿ: ಪವನ್ ಕಲ್ಯಾಣ್ to ಪಾಂಡ್ಯ: ಮರ್ಸಡೀಸ್ ಬೆಂಝ್ AMG G63 ಸೆಲೆಬ್ರೆಟಿ ಮಾಲೀಕರು!
ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಕಾರು 3.41 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 3.93 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಈ ಕಾರಿನ ಆನ್ ರೋಡ್ ಬೆಲೆ 4.6 ಕೋಟಿ ರೂಪಾಯಿ. 4.0-ಲೀಟರ್ V8 ಪೆಟ್ರೋಲ್ ಎಂಜಿನ್ ಹೊಂದಿದ್ದು, 500 Bhp (@6,000 rpm) ಹಾಗೂ 660 Nm (@1,700 rpm)ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.