ಎಲೆಕ್ಟ್ರಿಕ್ ಕಾರು ಖರೀದಿಸುವವರಿಗೆ ಕೇಂದ್ರ ಸರ್ಕಾರ ನೀಡಲಿದೆ 50 ಸಾವಿರ ರೂ!

By Web DeskFirst Published Feb 17, 2019, 12:13 PM IST
Highlights

ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ 50,000 ರೂಪಾಯಿ ನೀಡಲು ಮುಂದಾಗಿದೆ. ಈ ಮೂಲಕ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಳಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಇಲ್ಲಿದೆ ಈ ಯೋಜನೆ ಹೆಚ್ಚಿನ ವಿವರ.

ನವದೆಹಲಿ(ಫೆ.17): ಮಾಲಿನ್ಯ ನಿಯಂತ್ರಣ ಹಾಗೂ ಇಂಧನ ಬಳಕೆಯನ್ನ ಕಡಿಮೆ ಮಾಡಲು ಸರ್ಕಾರ ಎಲೆಕ್ಟ್ರಿಕ್ ಕಾರು ಬಳಕೆಗೆ ಉತ್ತೇಜನ ನೀಡುತ್ತಿದೆ. 2022ರ ವೇಳೆಗೆ ಭಾರತ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಯೋಜನೆ ರೂಪಿಸಿದೆ. ಇದಕ್ಕಾಗಿ   ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಕೇಂದ್ರ ಸರ್ಕಾರ 50,000 ರೂಪಾಯಿ ನೀಡಲು ಮುಂದಾಗಿದೆ.

ಇದನ್ನೂ ಓದಿ: ಪಾಳು ಬಿದ್ದಿದ್ದ ಭಾರತದ ಮೊಟ್ಟ ಮೊದಲ ಮಾರುತಿ ಕಾರಿಗೆ ಮರು ಜೀವ!

ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಸರ್ಕಾರ 50,000 ರೂಪಾಯಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಸರ್ಕಾರ ನಿರ್ಧರಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೂ ಮುನ್ನ ಕೇಂದ್ರ ಸರ್ಕಾರ ಘೋಷಣೆ ಮಾಡಲಿದೆ. ಇದರೊಂದಿಗೆ ಕೆಲ ರಾಜ್ಯಗಳು ರಿಜಿಸ್ಟ್ರೇಶನ್ ಹಾಗೂ ರೋಡ್ ಟ್ಯಾಕ್ಸ್ ಉಚಿತವಾಗಿ ನೀಡಲು ಮುಂದಾಗಿದೆ. ಇನ್ನು ಎಲೆಕ್ಟ್ರಿಕ್ ಕಾರುಗಳಿಗೆ ಉಚಿತ ಪಾರ್ಕಿಂಗ್ ನೀಡೋ ಕುರಿತು ಯೋಜನೆ ಸಿದ್ದವಾಗುತ್ತಿದೆ.

ಇದನ್ನೂ ಓದಿ: ಮನೆ ಮುಂದೆ ಕಾರು ನಿಲ್ಲಿಸಿದರೂ ನೀಡಬೇಕು ಪಾರ್ಕಿಂಗ್ ಚಾರ್ಚ್!

2019ರಲ್ಲಿ ಹಲವು ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕಾಗಿ ಈಗಾಗಲೇ ಚಾರ್ಜಿಂಗ್ ಸ್ಟೇಶನ್ ಕೂಡ ನಿರ್ಮಾಣ ಮಾಡಲಾಗುತ್ತಿದೆ. ಮಾರುತಿ ಸುಜುಜಿ ಸಂಸ್ಥೆಯ ವ್ಯಾಗನ್‌ಆರ್ ಎಲೆಕ್ಟ್ರಿಕ್,  ಹ್ಯುಂಡೈ ಕೋನಾ,  ಮಹೀಂದ್ರ KUV100 ಹಾಗೂ XUV300, ಟಾಟಾ ಟಿಯಾಗೋ, ಟಿಗೋರ್ ಎಲೆಕ್ಟ್ರಿಕ್ ಕಾರುಗಳು 2020ರೊಳಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. 

click me!