ಹಿಮಾಲಯದ ಕಣಿವೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಮುಂದೆ ಸಾಗಲು ಪರದಾಡಿದೆ. ಆದರೆ ಇದೇ ವೇಳೆ ಹೊಂಡಾ CBR ಬೈಕ್ ಸಲೀಸಾಗಿ ಮುಂದೆ ಸಾಗಿದೆ. ಎನ್‌ಫೀಲ್ಡ್ ಹಾಗೂ ಹೊಂಡಾ ಬೈಕ್ ನಡುವಿನ ಪೈಪೋಟಿ ಹೇಗಿತ್ತು? ಇಲ್ಲಿದೆ ನೋಡಿ.
ಸ್ಪಿತಿ ಕಣಿವೆ(ಫೆ.16): ಲಡಾಕ್, ಕಾಶ್ಮೀರ, ಹಿಮಾಲಯ ಸೇರಿದಂತೆ ಕಣಿವೆ ಪ್ರದೇಶಗಳ ರೈಡ್‌ಗೆ ಹೆಚ್ಚಿನವರು ರಾಯಲ್ ಎನ್‌ಫೀಲ್ಡ್ ಬೈಕ್ ಇಷ್ಟಪಡುತ್ತಾರೆ. ಆದರೆ ಇತ್ತೀಚೆಗೆ ಹಿಮಾಲಯದ ತಪ್ಪಲಿನ ಸ್ಪಿತಿ ಕಣಿವೆಯಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಸವಾರಿ ಕಷ್ಟವಾದರೆ, ಹೊಂಡಾ CBR ಸಲೀಸಾಗಿ ಮುಂದೆ ಸಾಗಿದೆ.
ಇದನ್ನೂ ಓದಿ: ಪಾಳು ಬಿದ್ದಿದ್ದ ಭಾರತದ ಮೊಟ್ಟ ಮೊದಲ ಮಾರುತಿ ಕಾರಿಗೆ ಮರು ಜೀವ!
undefined
ಯುವಕರಿಬ್ಬರು ಸ್ಪಿತಿ ಕಣಿವೆಗೆ ಬೈಕ್ ರೈಡ್ ಮೂಲಕ ತೆರಳಿದ್ದಾರೆ. ಕಣಿವೆ ಮೇಲ್ಬಾಗದಲ್ಲಿನ ನೀರಿನ ತೊರೆಯಲ್ಲಿ ರಾಯಲ್ ಎನ್‌ಫೀಲ್ಡ್ ಸಲೀಸಾಗಿ ಸಾಗಲು ಸಾಧ್ಯವಾಗಿಲ್ಲ. ಇದೇ ವೇಳೆ ಹೊಂಡಾ CBR ಯಾವುದೇ ಅಡ್ಡಿ ಇಲ್ಲದೆ ಸಾಗಿದೆ. ಈ ಮೂಲಕ ರಾಯಲ್ ಎನ್‌ಫೀಲ್ಡ್ ಬೈಕನ್ನ ಹೊಂಡಾ ಹಿಂದಿಕ್ಕಿದೆ.
ಇದನ್ನೂ ಓದಿ: TVS ಸ್ಟಾರ್ ಸಿಟಿ ಕಾರ್ಗಿಲ್ ಎಡಿಶನ್ ಬೈಕ್ ಬಿಡುಗಡೆ- ಬೆಲೆ 54 ಸಾವಿರ!
ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಹೋಲಿಸಿದರೆ ಹೊಂಡಾ ಬೈಕ್ ಲೈಟ್ ವೈಟ್. ಹೀಗಾಗಿ ಇದು ಕಲ್ಲು ಹಾಗೂ ನೀರಿನ ತೊರೆ, ಕಣಿವೆ ಪ್ರದೇಶಗಲ್ಲಿ ಸಲೀಸಾಗಿ ಮುಂದೆ ಸಾಗುತ್ತೆ. ಎನ್‌ಫೀಲ್ಡ್ ಹೆಚ್ಚು ಭಾರ ಇರೋದರಿಂದ ಸಲೀಸಾಗಿ ಸಾಗುವುದಿಲ್ಲ. ಆದರೆ ಲಾಂಗ್ ರೈಡ್ ಎನ್‌ಫೀಲ್ಡ್ ಹೆಚ್ಚು ಆರಾಮದಾಯಕವಾಗಿದೆ.