ಸುಪ್ರೀಂ ಕೋರ್ಟ್ ಹೊಸ ನೀತಿಯಿಂದ ನೂತನ ಕಾರು ಖರೀದಿ ಇನ್ನು ಕಷ್ಟವಾಗಲಿದೆ. ಕೇವಲ ಕಾರು ಖರೀದಿ ಮಾತ್ರವಲ್ಲ, ಕಾರು ಸರ್ವೀಸ್, ಮೈಂಟೇನೆನ್ಸ್ ಕೂಡ ದುಬಾರಿಯಾಗಲಿದೆ.
ಬೆಂಗಳೂರು(ನ.23): ಸುಪ್ರೀಂ ಕೋರ್ಟ್ ನೀಡಿರುವ ಹೊಸ ಆದೇಶದಿಂದ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳ ಬೆಲೆ ಹೆಚ್ಚಾಗಲಿದೆ. ವಾಯು ಮಾಲಿನ್ಯ ಹೆಚ್ಚುತ್ತಿರುವುದರಿಂದ 2020ರಿಂದ ಭಾರತದಲ್ಲಿ BS(VI)ಭಾರತ್ ಸ್ಟೇಜ್(VI) ತಂತ್ರಜ್ಞಾನ ಹೊಂದಿರುವ ಕಾರುಗಳನ್ನ ಮಾರಾಟ ಮಾಡಲು ಹೇಳಿದೆ. ಹೀಗಾಗಿ ಹೊಸ ಕಾರುಗಳ ಬೆಲೆ ಹೆಚ್ಚಾಗಲಿದೆ.
ಇದನ್ನೂ ಓದಿ: ಮಾರುತಿ ಸುಜುಕಿ ಎರ್ಟಿಗಾ ಕಾರು ಬಿಡುಗಡೆ-ಬೆಲೆ ಎಷ್ಟು?
undefined
2017ರಲ್ಲಿ BS(IV)ತಂತ್ರಜ್ಞಾನ ಕಾರುಗಳ ಮಾರಾಟ ಮಾಡಲು ಸೂಚಿಸಿತ್ತು. ಆದರೆ ಗಣನೀಯ ಪ್ರಮಾಣದಲ್ಲಿ ವಾಹನಗಳು ಹೊಗೆ ಉಗುಳುತ್ತಿದೆ. ಇದರಿಂದ ವಾಯು ಮಾಲಿನ್ಯ ನಿಯಂತ್ರಮಟ್ಟ ಮೀರಿದೆ. ಹೀಗಾಗಿ ಸುಪ್ರೀಂ ಕೋರ್ಟ್ BS(VI) ವಾಹನಗಳನ್ನ ಮಾರಟಕ್ಕೆ ಸೂಚಿಸಿದೆ.
ಬಿಎಸ್ 4 ರಿಂದ ಬಿಎಸ್ 6 ರ ತಂತ್ರಜ್ಞಾನ ಅಭಿವೃದ್ದಿಯಿಂದ ಪೆಟ್ರೋಲ್ ಕಾರುಗಳ ಬೆಲೆ 25,000 ದಿಂದ 30,000 ರೂಪಾಯಿ ಹೆಚ್ಚಾಗಲಿದೆ. ಇನ್ನು ಡೀಸೆಲ್ ಕಾರುಗಳ ಬೆಲೆ 75,000 ದಿಂದ 1 ಲಕ್ಷ ರೂಪಾಯಿ ವರೆಗೆ ಹೆಚ್ಚಾಗಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಬಿಎಸ್ 4 ವಾಹನಗಳನ್ನ 2020 ರಿಂದ ಮಾರಾಟ ಮಾಡುವಂತಿಲ್ಲ.
ಇದನ್ನೂ ಓದಿ:ಮಾರುತಿ ಸುಜುಕಿ ಕಂಪೆನಿಯ ಫ್ಲಾಪ್ ಕಾರುಗಳಿವು!
ಹೊಸ ನೀತಿಯಿಂದ ಹೊಸ ವಾಹನ ಖರೀದಿ ಮಾತ್ರವಲ್ಲ, ಸರ್ವೀಸ್, ಮೈಂಟೇನೆನ್ಸ್ ಕೂಡ ಹೆಚ್ಚಾಗಲಿದೆ. ಬಿಎಸ್ 4 ತಂತ್ರಜ್ಞಾನದಿಂದ ನೇರವಾಗಿ ಬಿಎಸ್ 6 ತಂತ್ರಜ್ಞಾನ ಅಭಿವೃದ್ದಿ ಪಡಿಸಲು ಹೆಚ್ಚಿನ ಕಾಲಾವಕಾಶ ಬೇಕು ಎಂದು ಆಟೋಮೊಬೈಲ್ ಕ್ಷೇತ್ರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಆದರೆ ಈ ಮನವಿಯನ್ನ ಕೋರ್ಟ್ ತಳ್ಳಿ ಹಾಕಿದೆ.
ಇದನ್ನೂ ಓದಿ:ಜಾವಾ ಬೆನ್ನಲ್ಲೇ ಮಹೀಂದ್ರ ಕಂಪನಿಯಿಂದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!