ಜೀಪ್ ಕಂಪಾಸ್ ಮೇಲೆ 1 ಲಕ್ಷ ರೂ. ಡಿಸ್ಕೌಂಟ್-ಆಫರ್ ಕೆಲದಿನ ಮಾತ್ರ!

Published : Nov 22, 2018, 03:56 PM IST
ಜೀಪ್ ಕಂಪಾಸ್ ಮೇಲೆ 1 ಲಕ್ಷ ರೂ. ಡಿಸ್ಕೌಂಟ್-ಆಫರ್ ಕೆಲದಿನ ಮಾತ್ರ!

ಸಾರಾಂಶ

ಭಾರತದಲ್ಲಿ ಹೆಚ್ಚು ಆಕರ್ಷಣೆಯಾಗಿರುವ ಜೀಪ್ ಕಂಪಾಸ್ ಇದೀಗ ಬರೋಬ್ಬರಿ 1 ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಈ ಆಫರ್ ಕೆಲ ದಿನಗಳು ಮಾತ್ರ. ಇಲ್ಲಿದೆ ಹೆಚ್ಚಿನ ವಿವರ.

ಮುಂಬೈ(ನ.22): ಭಾರತದಲ್ಲಿ ಅತೀ ಕಡಿಮೆ ಅವಧಿಯಲ್ಲಿ  SUV ಕಾರು ಸೆಗ್ಮೆಂಟ್‌ನಲ್ಲಿ ಜನಮನ್ನಣೆಗಳಿಸಿದ ಜೀಪ್ ಕಂಪಾಸ್ ಕಾರುಗಳ ಮೇಲೆ ಬರೋಬ್ಬರಿ 1 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಈ ಆಫರ್ ನವೆಂಬರ್ 30 ರ ವರೆಗೆ ಮಾತ್ರ ಅನ್ವಯವಾಗಲಿದೆ.

1ಲಕ್ಷ ರೂಪಾಯಿ ಡಿಸ್ಕೌಂಟ್ ಆಫರ್‌ನ್ನ ವಿಂಗಡಿಸಲಾಗಿದೆ. ಹಳೇ ಕಾರು ಎಕ್ಸ್‌ಚೇಂಜ್ ಬೋನಸ್ 50,000 ರೂಪಾಯಿ ನೀಡಲಾಗಿದೆ. ಇನ್ನು ಕೆಲ ಡೀಲರ್‌ಗಳು 25,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ನೀಡಿದ್ದಾರೆ. ಇನ್ನು ಕಾರ್ಪೊರೇಟರ್ ಡಿಸ್ಕೌಂಟ್ 15,000 ರೂಪಾಯಿ ಸೇರಿದಂತೆ ಒಟ್ಟು 1 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

ಪೆಟ್ರೋಲ್ ವೇರಿಯೆಂಟ್ ಜೀಪ್ ಕಾಂಪಾಸ್‌ಗಿಂತ ಡೀಸೆಲ್ ವೇರಿಯೆಂಟ್ ಕಾರಿಗೆ ಹೆಚ್ಚಿನ ಡಿಸ್ಕೌಂಟ್ ಸಿಗಲಿದೆ. 15-25 ಲಕ್ಷ ರೂಪಾಯಿಯ ಜೀಂಪ್ ಕಂಪಾಸ್ ಕಾರು  ಇತ್ತೀಚೆಗೆ ಇತರ ಬ್ರ್ಯಾಂಡ್ ಕಾರುಗಳಿಂದ ಭಾರಿ ಪೈಪೋಟಿ ಎದುರಿಸುತ್ತಿದೆ.
 

PREV
click me!

Recommended Stories

ಮಾರುತಿ ಬಲೆನೋಗಿಂತ ಭಾರಿ ಭಿನ್ನ, ಟೋಯೋಟಾ ಗ್ಲಾಂಜಾ ಫೇಸ್‌ಲಿಫ್ಟ್ ಕಾರಿನಲ್ಲಿದೆ ಹಲವು ಅಚ್ಚರಿ
2026 TVS Radeon ಹೊಸ ಬೈಕ್ ಲಾಂಚ್, ಬೆಲೆ 67000! ಬಜೆಟ್ ಸ್ನೇಹಿ ಮೂಲಕ ಕಂಪನಿ ಭರ್ಜರಿ ಪ್ಲಾನ್