ಜಾವಾ ಬೆನ್ನಲ್ಲೇ ಮಹೀಂದ್ರ ಕಂಪನಿಯಿಂದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!
ಮಹೀಂದ್ರ ಕಂಪೆನಿ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಮುಂದಾಗಿದೆ. ದೆಹಲಿ ಹಾಗೂ ಭಾರತದ ಪ್ರಮುಖ ನಗರಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ತಡೆಗಟ್ಟಲು ಮಹೀಂದ್ರ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ.
ಮುಂಬೈ(ನ.22): ಜಾವಾ ಮೋಟರ್ ಬೈಕ್ ಬಿಡುಗಡೆ ಮಾಡಿ ಭಾರಿ ಸಂಚಲನ ಮೂಡಿಸಿದ ಮಹೀಂದ್ರ&ಮಹೀಂದ್ರ ಕಂಪನಿ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಬಿಡುಡೆ ಮಾಡಲು ಮುಂದಾಗಿದೆ. ಈ ಮೂಲಕ ವಾಯು ಮಾಲಿನ್ಯ ನಿಯಂತ್ರಣಕ್ಕೆ ಮಹೀಂದ್ರ ನಿರ್ಧರಿಸಿದೆ. ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಮುಂದಾಗಿದೆ. ಇದಕ್ಕಾಗಿ ಅಮೆರಿಕಾದ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾದ ಕಿಕ್ ಸ್ಕೂಟ್ ನೆಟ್‌ವರ್ಕ್ ಜೊತೆ ಒಪ್ಪಂದ ಮಾಡಿಕೊಂಡಿದೆ.
ದೆಹಲಿಯಲ್ಲಿ ಮೊದಲು ಈ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಲು ಮುಂದಾಗಿದೆ. ಇದಕ್ಕಾಗಿ ಮಹೀಂದ್ರ ಕಂಪನಿ ಚೇರ್ಮೆನ್ ಆನಂದ್ ಮಹೀಂದ್ರ ಹಾಗೂ ಸ್ಕೂಟ್ ನೆಟ್‌ವರ್ಕ್ ಸಿಇಒ ಮೈಕೆಲ್ ಕೆಟಿಂಗ್, ದೆಹಲಿ ಸಾರಿಗೆ ಸಚಿವರನ್ನ ಬೇಟಿಯಾಗಿ ಮಾತುಕತೆ ನಡೆಸಿದ್ದಾರೆ. ದೆಹಲಿಯಂತ ನಗರದಲ್ಲಿ ಈ ಮೊದಲೇ ಎಲೆಕ್ಟ್ರಿಕ್ ವಾಹನಗಳನ್ನ ಪರಿಚಯಿಸಬೇಕಿತ್ತು. ತಕ್ಷಣವೇ ಇದೀಗ ಅತ್ಯುತ್ತಮ ಸೇವೆ ಒದಗಿಸಲು ನಾವು ಸಿದ್ದರಿದ್ದೇವೆ ಎಂದು ಸ್ಕೂಟ್ ನೆಟ್‌ವರ್ಕ್ ಸಿಇಒ ಮೈಕೆಲ್ ಕೆಟಿಂಗ್ ಹೇಳಿದ್ದಾರೆ.
ಜಾವಾ ಮೋಟರ್ ಬೈಕ್ ಬಿಡುಗಡೆ ಮಾಡಿ ಭಾರಿ ಸಂಚಲನ ಮೂಡಿಸಿದ ಮಹೀಂದ್ರ&ಮಹೀಂದ್ರ ಕಂಪನಿ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ಬಿಡುಡೆ ಮಾಡಲು ಮುಂದಾಗಿದೆ. ಈ ಮೂಲಕ ವಾಯು ಮಾಲಿನ್ಯ ನಿಯಂತ್ರಣಕ್ಕೆ ಮಹೀಂದ್ರ ನಿರ್ಧರಿಸಿದೆ. ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಮುಂದಾಗಿದೆ. ಇದಕ್ಕಾಗಿ ಅಮೆರಿಕಾದ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾದ ಕಿಕ್ ಸ್ಕೂಟ್ ನೆಟ್‌ವರ್ಕ್ ಜೊತೆ ಒಪ್ಪಂದ ಮಾಡಿಕೊಂಡಿದೆ.