ಡಿ.7 ರಿಂದ ಆರಂಭವಾಗಲಿದೆ ಸೂಪರ್ ಬೈಕ್ ಫೆಸ್ಟಿವಲ್!

Published : Nov 22, 2018, 05:04 PM IST
ಡಿ.7 ರಿಂದ ಆರಂಭವಾಗಲಿದೆ ಸೂಪರ್ ಬೈಕ್ ಫೆಸ್ಟಿವಲ್!

ಸಾರಾಂಶ

ಡಿಸೆಂಬರ್ 7 ರಿಂದ 9ರ ವರೆಗೆ ನಡೆಯಲಿರುವ ಸೂಪರ್ ಬೈಕ್ ಫೆಸ್ಟಿವಲ್ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಸೂಪರ್ ಬೈಕ್ ಫೆಸ್ಟಿವಲ್ ವಿಶೇಷತೆ ಏನು? ಇಲ್ಲಿದೆ ಹೆಚ್ಚಿನ ವಿವರ.

ಪುಣೆ(ನ.22): 7ನೇ ಆವೃತ್ತಿ ಸೂಪರ್ ಬೈಕ್ ಫೆಸ್ಟಿವಲ್ ಉತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿದೆ. ನಗರದ ಅಮೋನರ ಮಾಲ್‌ನಲ್ಲಿ ನಡೆಯಲಿರುವ ಈ ಸೂಪರ್ ಬೈಕ್ ಉತ್ಸವದಲ್ಲಿ ವಿಂಟೇಜ್, ಅಡ್ವೆಂಚರ್ ಸೇರಿದಂತೆ ಸೂಪರ್ ಬೈಕ್‌ಗಳನ್ನ ಪ್ರದರ್ಶಿಸಲಾಗುತ್ತದೆ.

ಡಿಸೆಂಬರ್ 7 ರಿಂದ 9 ರ ವರೆಗೆ ಈ ಸೂಪರ್ ಬೈಕ್ ಫೆಸ್ಟಿವಲ್ ನಡೆಯಲಿದೆ. ಈ ಫೆಸ್ಟಿವಲ್‌ನಲ್ಲಿ ಬೈಕ್ ಪ್ರದರ್ಶನ ಮಾತ್ರವಲ್ಲ, ರೇಸ್, ಸೂಪರ್ ಬೈಕ್ ಲೈಫ್‌ಸ್ಟೈಲ್, ಆಟೋ ಎಕ್ಸ್ಪೋ ಸೇರಿದಂತೆ ಹಲವು ಚಟುವಟಿಕೆಗಳು ಗಮನಸೆಳೆಯಲಿದೆ. ಇನ್ನು ವಿಶ್ವದ ಪ್ರಖ್ಯಾತ ಸೂಪರ್ ಬೈಕ್ ನಿರ್ಮಾಣ ಕಂಪೆನಿಗಳು ಪುಣೆ ಸೂಪರ್ ಬೈಕ್ ಫೆಸ್ಟಿವಲ್‌ನಲ್ಲಿ ಪಾಲ್ಗೊಳ್ಳಲಿದೆ.

ಸತತ 6 ವರ್ಷಗಳಿಂದ ಆಯೋಜಿಸಲಾಗುತ್ತಿರುವ ಪುಣೆ ಸೂಪರ್ ಬೈಕ್ ಫೆಸ್ಟಿವಲ್ ಯಶಸ್ವಿಯಾಗಿದೆ. ಇದೀಗ 7ನೇ ಆವೃತ್ತಿ ಕೂಡ ಅಷ್ಟೇ ಯಶಸ್ವಿಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

PREV
click me!

Recommended Stories

ಬೆಂಗಳೂರು ಮಾರುಕಟ್ಟೆಗೆ ಎಂಟ್ರಿಕೊಟ್ಟ ಅಮೆರಿಕ ಟೆಸ್ಲಾ ಕಾರು, ಕೇವಲ 22 ಸಾವಿರ ರೂ.ಗೆ ಬುಕಿಂಗ್
ಆಕಸ್ಮಿಕವಾಗಿ ಅಕ್ಸಿಲರೇಟ್ ಒತ್ತಿದ ಬಾಲಕಿ : ಸೆಗಣಿ ರಾಶಿಯಿಂದಾಗಿ ತಪ್ಪಿತ್ತು ದೊಡ್ಡ ಅನಾಹುತ:ವೀಡಿಯೋ