ಬಾಲಕನ ಮುಂದೆ ಚಾಲಕನ ಪೋಸ್; ಮರಳಿ ಬಂದಾಗ ಲೈಸೆನ್ಸ್ ಕ್ಯಾನ್ಸಲ್!

By Web Desk  |  First Published Dec 2, 2019, 11:42 AM IST

ಬಲ್ ಚಾಲಕರ ಲೈಸೆನ್ಸ್ ರದ್ದಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ನಿಯಮ ಉಲ್ಲಂಗಿಸಿ ಪೇಚಿಗೆ ಸಿಲುಕುತ್ತಿರುವ ಚಾಲಕರ ಸಾಲಿಗೆ ಮತ್ತೊಬ್ಬ ಸೇರಿಕೊಂಡಿದ್ದಾನೆ. ಈತ ಬಾಲಕನಿಗೆ ಗೇರ್ ಬದಲಾಯಿಸಲು ಅವಕಾಶ ಮಾಡಿಕೊಟ್ಟು ಇದೀಗ ಪೊಲೀಸರ ಮುಂದೆ ಕೈಕಟ್ಟಿ ನಿಂತಿದ್ದಾನೆ.


ಪಟ್ಟಣಂದಿಟ್ಟ(ಡಿ.01): ಚಲಿಸುತ್ತಿರುವಾಗ ವಾಹನದ ಸಂಪೂರ್ಣ ನಿಯಂತ್ರಣ ಚಾಲಕನ ಮೇಲಿರುತ್ತದೆ. ಈ ವೇಳೆ ಇತರ ಯಾವುದೇ ಅಡೆ ತಡೆ ಚಾಲಕನಿಗೆ ಇರಬಾರದು. ಆದರೆ ನಿಯಮ ಸರಿಯಾಗಿ ಅರ್ಥ ಮಾಡಿಕೊಳ್ಳದ ಅಥವಾ ನಿಯಮವನ್ನು ನಿರ್ಲಕ್ಷ್ಯಿಸುವ ಚಾಲಕನಿಗೆ ದಂಡ ತಪ್ಪಿದ್ದಲ್ಲ. ಇದೀಗ ಚಲಿಸುತ್ತಿರುವಾಗ ಬಸ್‌ನ ಗೇರ್ ಬದಲಾಯಿಸಲು ಬಾಲಕನಿಗೆ ಅವಕಾಶ ನೀಡಿದ ಡ್ರೈವರ್‌ ಲೈಸೆನ್ಸ್ ರದ್ದು ಮಾಡಲಾಗಿದೆ.

ಇದನ್ನೂ ಓದಿ: ಕಾಲೇಜು ಹುಡುಗಿಯರ ಗೋವಾ ಟ್ರಿಪ್; ಬಸ್ ಚಾಲಕನ ಲೈಸೆನ್ಸ್ ರದ್ದು

Tap to resize

Latest Videos

undefined

ಕೇರಳದ ಪಟ್ಟಣಂದಿಟ್ಟ ಸಮೀಪದ ತಿರುವಳ್ಳ-ಮಲಪಳ್ಳಿ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಟೂರಿಸ್ಟ್ ಬಸ್ ಚಾಲಕ ಕೆವಿ ಸುಧೀಶ್ ಲೈಸೆನ್ಸ್ 6 ತಿಂಗಳ ಅಮಾನತು ಮಾಡಲಾದಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವೇಳೆ ಬಸ್‌ನಲ್ಲಿದ್ದ ಬಾಲಕನಿಗೆ ಗೇರ್ ಬದಲಾಯಿಸಲು ಡ್ರೈವರ್ ಅವಕಾಶ ಮಾಡಿಕೊಟ್ಟಿದ್ದಾನೆ. ಸಂಪೂರ್ಣ ಚಿತ್ರಣವನ್ನು ವಿಡಿಯೋ ಕೂಡ ಮಾಡಲಾಗಿದೆ.

ಇದನ್ನೂ ಓದಿ: ಶಾಲಾ ಪ್ರವಾಸಕ್ಕೂ ಮೊದಲು ಚಾಲಕನ ಸಾಹಸ; ಬಸ್ ವಶಕ್ಕೆ, ಲೆಸೆನ್ಸ್ ರದ್ದು!

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್‌ನಿಂದ ಆರಂಭದಲ್ಲಿ ಬಸ್ ಚಾಲಕ ಹಿರಿ ಹಿರಿ ಹಿಗ್ಗಿದ್ದಾನೆ. ಹಲವು ಕರೆ ಮಾಡಿ, ಬಾಲಕನಿಗೆ ಬಸ್ ಗೇರ್ ಪರಿಚಯಿಸಿದ್ದಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೀಗೆ ಕರೆಗಳ ನಡುವೆ ಪಟ್ಟಣಂದಿಟ್ಟ ಪೊಲೀಸರಿಂದ ಕರೆ ಬಂದಿದೆ. ಅಷ್ಟರಲ್ಲಿ ಚಾಲಕನ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.  ನಿಯಮ ಉಲ್ಲಂಘಿಸಿದ ಕಾರಣಕ್ಕೆ ಬಸ್ ಚಾಲಕನ ಲೈಸೆನ್ಸ್ ರದ್ದು ಮಾಡಲಾಯಿತು.

ಇದನ್ನೂ ಓದಿ: ಟ್ರಾಫಿಕ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಹೋದವರಿಗೆ 15 ಸಾವಿರ ದಂಡ !

ಇತ್ತೀಚೆಷ್ಟೆ ಕೇರಳ ಬಸ್ ಚಾಲಕ ಗೋವಾ ಟ್ರಿಪ್ ವೇಳೆ ಕಾಲೇಜು ಹುಡುಗಿಯರಿಗೆ ಗೇರ್ ಬದಲಾಯಿಸಲು ಅವಕಾಶ ನೀಡಿದ ಕಾರಣಕ್ಕೆ ಚಾಲಕನ ಲೈಸೆನ್ಸ್ ರದ್ದು ಮಾಡಲಾಗಿತ್ತು. ಇದೀಗ ಬಾಲಕನಿಗೆ ಗೇರ್ ಬದಲಾಯಿಸಲು ಅವಕಾಶ ನೀಡಿ ಲೈಸೆನ್ಸ್ ಕಳೆದುಕೊಂಡಿದ್ದಾನೆ. ಕೇರಳದಲ್ಲಿ ಬಸ್ ಚಾಲಕರ ಲೈಸೆನ್ಸ್ ರದ್ದು ಪ್ರಕರಣಗಳು ಹೆಚ್ಚಾಗುತ್ತಿದೆ.

ಡಿಸೆಂಬರ್ 2ರ ಟಾಪ್ 10  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!