ಖರೀದಿಸಿದ ಫಾರ್ಚುನರ್ ಕಾರಿನ ಬ್ರೇಕ್ ಫೇಲ್; ಡೆಮೋ ಕಾರನ್ನೇ ಸೀಝ್ ಮಾಡಿದ ಗ್ರಾಹಕ!

By Web Desk  |  First Published Dec 1, 2019, 7:30 PM IST

ಹೊಸ ಕಾರು ಖರೀದಿಸಿ ಬೆನ್ನಲ್ಲೇ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಸರಿಪಡಿಸಿದರೂ ಕಾರಿನ  ಸಮಸ್ಯೆ ಮುಂದುವರಿದಿದೆ. ರೊಚ್ಚಿಗೆದ್ದ ಗ್ರಾಹಕ ಡೆಮೋ ಕಾರನ್ನೇ ಸೀಝ್ ಮಾಡಿದ್ದಾನೆ.


ಬಾಲಾಸೋರ್(ಡಿ.01): ಬರೋಬ್ಬರಿ 35 ಲಕ್ಷ ರೂಪಾಯಿ ನೀಡಿ ಹೊಚ್ಚ ಹೊಸ ಟೊಯೊಟಾ ಫಾರ್ಚುನರ್ ಕಾರು ಖರೀದಿಸಿದ ಗ್ರಾಹಕ, ನೆಟ್ಟಗೆ ಒಂದು ದಿನ ಪ್ರಯಾಣ ಮಾಡಿಲ್ಲ. ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಡೀಲರ್ ಬಳಿ ತೆರಳಿ ಕಾರನ್ನು ಸರಿಪಡಿಸಿ ಮನೆಗೆ ತಂದರೆ  ಬ್ರೇಕ್ ಫೇಲ್. ಇದರಿಂದ ರೊಚ್ಚಿಗೆದ್ದ ಗ್ರಾಹಕ ಡೆಮೋ ಕಾರನ್ನೇ ವಶಕ್ಕೆ ಪಡೆದ ಘಟನೆ ನಡೆದಿದೆ.

ಇದನ್ನೂ ಓದಿ: AP CM ಜಗನ್ ಕಾರು ನಿಲ್ಲಿಸಿ, ವಂಚನೆ ಪ್ರಕರಣ ದಾಖಲಿಸಿದ ಪೊಲೀಸ್!.

Latest Videos

undefined

ಒಡಿಶಾದ ಬಾಲಾಸೋರ್‌ನಲ್ಲಿ ಗ್ರಾಹಕನೋರ್ವ ಟೊಯೊಟಾ ಪಾರ್ಚುನರ್ ಕಾರು ಖರೀದಿಸಿದ್ದಾನೆ. ಆದರೆ ತಾಂತ್ರಿಕ ದೋಷದಿಂದ ಮತ್ತೆ ಡೀಲರ್ ಬಳಿ ತೆರಳಿ ಕಾರನ್ನು ಸರಿಪಡಿಸಲು ಕೋರಿದ್ದಾನೆ. ಮನೆಗೆ ಕಾರು ಬಂದಾಗ ಬ್ರೇಕ್ ಫೇಲ್ ಆಗಿದೆ. ಮತ್ತೆ ಡೀಲರ್‌ ಬಳಿ ಕಾರನ್ನು ಹಿಂತುರಿಗಿಸಿ, ಹೊಸ ಕಾರು ನೀಡಲು ಮನವಿ ಮಾಡಿದ್ದಾನೆ. ಅದೇ ಕಾರನ್ನ ಸರಿಪಡಿಸುವುದಾಗಿ ಡೀಲರ್ ಪಟ್ಟು ಹಿಡಿದ್ದಾರೆ. ರೋಸಿ ಹೋದ ಗ್ರಾಹಕ ಗ್ರಾಹಕರ ನ್ಯಾಯಾಲಯದ ಮೆಟ್ಟೇಲೇರಿದ್ದಾನೆ.

ಇದನ್ನೂ ಓದಿ: ಹೆಲ್ಮೆಟ್ ಹಾಕದ ಪೊಲೀಸ್:  ತನ್ನ ಕೈಯಾರೆ ತನಗೆ ದಂಡ ಹಾಕಿಸಿಕೊಂಡ

ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಎಚ್ಚೆತ್ತ  ಡೀಲರ್, ಹೊಸ ಕಾರು ನೀಡುವುದಾಗಿ ಹೇಳಿದ್ದಾರೆ. ಇಷ್ಟೇ ಅಲ್ಲ ಕೇಸ್ ವಾಪಾಸ್ ಪಡೆಯಲು ಸೂಚಿಸಿದ್ದಾರೆ. ಡೀಲರ್ ಭರವಸೆ ಬಳಿಕ ಕೇಸ್ ವಾಪಾಸ್ ಪಡೆದ  ಗ್ರಾಹಕನಿಗೆ ಹೊಸ ಕಾರು ನೀಡದೆ ಸತಾಯಿಸಿದ್ದಾರೆ. ಕಾರು ಬಂದಿಲ್ಲ, ಕಂಪನಿ ವಿಚಾರಣೆ ನಡೆಸಿತ್ತಿದೆ ಎಂದು ಸಬೂಬು ನೀಡಿದ್ದಾರೆ. ಪ್ರತಿ ದಿನ ಒಂದೊಂದು ಕಾರಣ ಕೇಳಿ ರೊಚ್ಚಿಗೆದ್ದ ಗ್ರಾಹಕ, ಶೋ ರೂಂನಲ್ಲಿ ನಿಲ್ಲಿಸಿದ್ದ ಡೆಮೋ ಕಾರನ್ನು ತೆಗೆದು ಮನಗೆ ಬಂದಿದ್ದಾನೆ.

ಇದನ್ನೂ ಓದಿ: 8 ವರ್ಷದ ಬಾಲಕನ ಬೈಕ್ ರೈಡ್; ತಂದೆಗೆ 30,000 ರೂ ದಂಡ!.

ಬಳಿಕ ಹೊಸ ಕಾರು ನೀಡಿದ  ಬಳಿಕ ಈ ಕಾರನ್ನು ವಾಪಾಸ್ ಮಾಡುವುದಾಗಿ ಹೇಳಿದ್ದಾನೆ. ಇಷ್ಟೇ ಅಲ್ಲ ಪೊಲೀಸ್ ದೂರು ನೀಡುವುದಾದರೆ ನೀಡಿ, ಮತ್ತೆ ಗ್ರಾಹಕರ ಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಸಿದ್ದಾನೆ. ಸದ್ಯ ಈ ಗ್ರಾಹಕನಿಗೆ ಹೊಸ ಕಾರು ನೀಡಲಾಗಿದೆಯೇ ಅನ್ನೋದು ಇನ್ನಷ್ಟೇ ಬಹಿರಂಗವಾಗಬೇಕಿದೆ. 


 

click me!