ಬಾಲಿವುಡ್ ಸ್ಟಾರ್ ಜಾನ್ ಅಬ್ರಾಹಾಂ ಬಳಿ ಎಷ್ಟು ಸೂಪರ್ ಬೈಕ್ ಇವೆ? ಈ ಪ್ರಶ್ನೆ ಸ್ಪಷ್ಟ ಉತ್ತರ ಹಲವರಿಗೆ ತಿಳಿದಿರಲಿಲ್ಲ. ಇದೀಗ ಜಾನ್ ಸ್ವತಃ ತಮ್ಮಲ್ಲಿರುವ ಬೈಕ್ ವಿವರ ನೀಡಿದ್ದಾರೆ. ಈ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಮುಂಬೈ(ನ.21): ಬಾಲಿವುಡ್ ನಟ ಜಾನ್ ಅಬ್ರಾಹಾಂಗೆ ಸೂಪರ್ ಬೈಕ್ ಮೇಲೆ ಹೆಚ್ಚು ಪ್ರೀತಿ. ಅಬ್ರಾಹಾಂ ಮೂವಿಗಳಲ್ಲೂ ಸೂಪರ್ ಬೈಕನ್ನೇ ಹೆಚ್ಚಾಗಿ ಬಳಸಿದ್ದಾರೆ. ಜಾನ್ ಅಬ್ರಾಹಾಂ ಹಲವು ಬಾರಿ ತಮ್ಮ ಸೂಪರ್ ಬೈಕ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಆದರೆ ಜಾನ್ ಬಳಿ ಎಷ್ಟು ಸೂಪರ್ ಬೈಕ್‌ಗಳಿವೆ ಅನ್ನೋದು ಎಲ್ಲರ ಕುತೂಹಲವಾಗಿತ್ತು. ಇದೀಗ ಸ್ವತಃ ಜಾನ್ ಅಬ್ರಾಹಾಂ ತಮ್ಮಲ್ಲಿರುವ ಸೂಪರ್ ಬೈಕ್ ಕುರಿತು ವಿಡಿಯೋ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ!
undefined
ಜಾನ್ ಅಬ್ರಹಾಂ ಬಳಿ ದುಬಾರಿ ಮೌಲ್ಯದ 6 ಸೂಪರ್ ಬೈಕ್‌ಗಳಿವೆ. ಎಲ್ಲಾ ಬೈಕ್‌ಗಳ ಬೆಲೆ ಸರಿಸುಮಾರು 20 ರಿಂದ 25 ಲಕ್ಷ ರೂಪಾಯಿ. ಸಾಮಾಜಿಕ ಜಾಲತಾಣದಲ್ಲಿ ಜಾನ್ ತಮ್ಮ ಸೂಪರ್ ಬೈಕ್ ಕುರಿತ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಜಾನ್ ವಿಡಿಯೋ ಅತೀ ಹೆಚ್ಚು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ಇದನ್ನೂ ಓದಿ: ಕಾಲೇಜು ಹುಡುಗಿಯರ ಗೋವಾ ಟ್ರಿಪ್; ಬಸ್ ಚಾಲಕನ ಲೈಸೆನ್ಸ್ ರದ್ದು
ಜಾನ್ ಬಳಿ ಕಪ್ಪು ಬಣ್ಣದ ಖವಾಸಕಿ ನಿಂಜಾ ZX-14R ಬೈಕ್ ಇದೆ. ಇದರ ಬೆಲೆ ಸುಮಾರು 19.5 ಲಕ್ಷ ರೂಪಾಯಿ. ರೆಡ್ ಬ್ಲಾಕ್ ಹಾಗೂ ವೈಟ್ ಶೇಡ್ ಹೊಂದಿರುವ ಎಪ್ರಿಲಿಯಾ RSV4 ಬೈಕ್‌ನ್ನೂ ಹೊಂದಿದ್ದಾರೆ. ಈ ಬೈಕ್ ಬೆಲೆ 20 ಲಕ್ಷ ರೂಪಾಯಿ. ಇನ್ನು ಜಾನ್ ಬಳಿ ಇರುವ ಮೂರನೇ ಸೂಪರ್ ಬೈಕ್ ಯಮಹಾ R1. ಇದರ ಬೆಲೆ 19.5 ಲಕ್ಷ ರೂಪಾಯಿ.
ಇದನ್ನೂ ಓದಿ: ಕಡಿಮೆ ಬೆಲೆಯ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಲಾಂಚ್!
ರೆಡ್ ಬೀಸ್ಟ್ ಡ್ಯುಕಾಟಿ V4 ಪಿನಾಗಲ್ ಜಾನ್ ಬಳಿಯಿರುವ ನಾಲ್ಕನೇ ಸೂಪರ್ ಬೈಕ್. ಈ ಬೈಕ್ ಬೆಲೆ 15 ಲಕ್ಷ ರೂಪಾಯಿ. ಇನ್ನು MV ಆಗಸ್ಟಾ F3 800 ಬೈಕ್ ಹೊಂದಿದ್ದು, ಇದರ ಬೆಲೆ 18 ಲಕ್ಷ ರೂಪಾಯಿ. ಜಾನ್ ಬಳಿ ಇರುವ ಸೂಪರ್ ಬೈಕ್ ಪೈಕಿ ದುಬಾರಿ ಬೈಕ್ ಎಂದರೆ ಯಮಹಾ VMax. ಯಮಹಾ ಕಂಪನಿಯ 60ನೇ ವಾರ್ಷಿಕ ಆಚರಣೆ ಪ್ರಯುಕ್ತ ಈ ಬೈಕ್ ಬಿಡುಗಡೆ ಮಾಡಲಾಗಿತ್ತು. ಸ್ಪೆಷಲ್ ಎಡಿಶನ್ ಬೈಕ್ 1700cc ಎಂಜಿನ್ ಹೊಂದಿದೆ. ಈ ಬೈಕ್ ಬೆಲೆ 25 ಲಕ್ಷ ರೂಪಾಯಿ.