ಬೆಂಗಳೂರಿನಲ್ಲಿ ವೋಲ್ವೋ ಪರ್ಸನಲ್ ಸರ್ವೀಸ್ ಕೇಂದ್ರ ಆರಂಭ

Published : Nov 19, 2019, 08:34 PM IST
ಬೆಂಗಳೂರಿನಲ್ಲಿ ವೋಲ್ವೋ ಪರ್ಸನಲ್ ಸರ್ವೀಸ್ ಕೇಂದ್ರ ಆರಂಭ

ಸಾರಾಂಶ

ವೋಲ್ವೋ ಕಾರು ಕಂಪನಿ ಬೆಂಗಳೂರಿನಲ್ಲಿ ವಿಶೇಷ ಸರ್ವೀಸ್ ಸೆಂಟರ್ ಸೇವೆ ಆರಂಭಿಸಿದೆ. ಬೆಂಗಳೂರಿನ ಮಾರ್ಷಲ್ ಮೋಟರ್ಸ್ ಗೆ ಅಧಿಕೃತ ಸೇವಾ ಕೇಂದ್ರದ  ಮಾನ್ಯತೆ ನೀಡಲಾಗಿದ್ದು, ಗ್ರಾಹಕರಿಗೆ ತಡೆರಹಿತ ಹಾಗೂ ಅತ್ಯುತ್ತಮ ಗುಣಮಟ್ಟದ ಸೇವೆ ನೀಡಲಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಬೆಂಗಳೂರು(ನ.19):  ವಿಶ್ವದ ಖ್ಯಾತ ಕಾರು ತಯಾರಿಕಾ ಕಂಪನಿಯಾಗಿರುವ ವೋಲ್ವೋ ಕಾರ್ ಇಂಡಿಯಾ, ಕರ್ನಾಟಕದ ತನ್ನ ಗ್ರಾಹಕರಿಗೆ ವಿಶ್ವ ದರ್ಜೆಯ ಸರ್ವೀಸ್ ಒದಗಿಸಲು ವಿಶೇಷ ಸೇವೆ ಆರಂಭಿಸಿದೆ.  ಬೆಂಗಳೂರಿನಲ್ಲಿರುವ ಮಾರ್ಷಲ್ ಮೋಟರ್ಸ್ ಗೆ ಅಧಿಕೃತ ಸೇವಾ ಕೇಂದ್ರದ ಮಾನ್ಯತೆ ನೀಡಿದೆ. ಇದು ವೋಲ್ವೋ ಪರ್ಸನಲ್ ಸರ್ವೀಸ್ (VPS) ಡೀಲರ್ ಆಗಿದ್ದು, ವಿಶ್ವದ ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ವೋಲ್ವೋ ಕಾರುಗಳಿಗೆ ಇಲ್ಲಿ ಸರ್ವೀಸ್ ಒದಗಿಸಲಿದೆ. 

ಇದನ್ನೂ ಓದಿ: ವೋಲ್ವೋ ಕಾರುಗಳಿಗೆ ಸ್ಪೀಡ್ ಲಿಮಿಟ್- ಸುರಕ್ಷೆತೆ ಮುಖ್ಯ ಎಂದ ಕಂಪನಿ!

ಈ ವಿಪಿಎಸ್ ಗ್ರಾಹಕರ ಕಾಯುವ ಅವಧಿಯನ್ನು ಕನಿಷ್ಠ ಶೇ.50 ರಷ್ಟನ್ನು ಉಳಿತಾಯ ಮಾಡಲಿದೆ. ಸರ್ವೀಸ್ ಸೆಂಟರ್ ಟೆಕ್ನಿಶಿಯನ್ ಗಳು ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕದಲ್ಲಿರಲಿದ್ದು, ಎರಡೂ ಬದಿಯಿಂದಲೂ ಸ್ಪಷ್ಟವಾದ ಮಾಹಿತಿಗಳು ವಿನಿಮಯವಾಗಿ ವಾಹನದ ಸರ್ವೀಸ್ ಉತ್ತಮ ಮಟ್ಟದಿಂದ ಕೂಡಿರಲಿದೆ.ವೋಲ್ವೋ ಕಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಚಾರ್ಲ್ಸ್ ಫ್ರಂಪ್ ಸಮ್ಮುಖದಲ್ಲಿ ಮಾರ್ಷಲ್ ಮೋಟರ್ಸ್ ಗೆ ಈ ಅಧಿಕೃತ ಸೇವಾ ಕೇಂದ್ರದ ಪ್ರಮಾಣ ಪತ್ರವನ್ನು ವಿತರಿಸಲಾಯಿತು. 

ಇದನ್ನೂ ಓದಿ: ದುಬಾರಿ ವೋಲ್ವೋ ಕಾರು ಖರೀದಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್!

ಈ ಸಂದರ್ಭದಲ್ಲಿ ಮಾತನಾಡಿದ ವೋಲ್ವೋ ಕಂಪಿ ಭಾರದದ ವ್ಯವಸ್ಥಾಪಕ ನಿರ್ದೇಶಕ ಚಾರ್ಲ್ಸ್ ಫ್ರಂಪ್   ``ನಮ್ಮ ಶೋರೂಂನಲ್ಲಿ ಮಾರಾಟವಾದ ಕಾರುಗಳಿಗೆ ಸೂಕ್ತವಾದ ರೀತಿಯಲ್ಲಿ ಸರ್ವೀಸ್ ಸೌಲಭ್ಯವನ್ನು ಒದಗಿಸುತ್ತಿದ್ದೇವೆ. ನಮ್ಮ ವಿಪಿಎಸ್ ನೆಟ್ವರ್ಕ್ ಮೂಲಕ ಗ್ರಾಹಕರು ತಡೆರಹಿತವಾದ ಸೇವೆಗಳನ್ನು ಪಡೆಯಬಹುದಾಗಿದೆ. ನಮ್ಮ ಪಾಲುದಾರರಾಗಿರುವ ಮಾರ್ಷಲ್ ಮೋಟರ್ಸ್ ಇದೀಗ ಪ್ರಮಾಣೀಕೃತ ವಿಪಿಎಸ್ ಡೀಲರ್ ಎಂದು ಘೋಷಿಸಲು ನಮಗೆ ಸಂತಸವೆನಿಸುತ್ತದೆ’’ ಎಂದರು.

ವೋಲ್ವೋ ಕಾರು ಸಂಸ್ಥೆಯು ತನ್ನ ಗ್ರಾಹಕರಿಗೆ ಗುಣಮಟ್ಟದ ಸಮಯವನ್ನು ವಾಪಸ್ ನೀಡಲು ಬಯಸುತ್ತದೆ. ಈ ಮೂಲಕ ಗ್ರಾಹಕರು ತಮ್ಮ ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಬಹುದಾಗಿದೆ. ಈ ವಿಪಿಎಸ್ ಮಾದರಿಯ ಸೇವೆಯು ಗ್ರಾಹಕರಿಗೆ ತಮ್ಮ ಅತ್ಯಮೂಲ್ಯವಾದ ಸಮಯವನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯ ಅನುಭವವನ್ನು ನೀಡುತ್ತಿರುವ ವೋಲ್ವೋ ಕಾರು ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನು ಹೊಂದುತ್ತಿರುವುದಕ್ಕೆ ನಮಗೆ ಅತೀವ ಸಂತಸವೆನಿಸುತ್ತಿದೆ. ಎಂದು ಮಾರ್ಷಲ್ ಮೋಟರ್ಸ್ ನ ಡೀಲರ್ ಪ್ರಿನ್ಸಿಪಾಲ್ ರಿತೇಶ್ ರೆಡ್ಡಿ ಹೇಳಿದರು.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ