ಮುಂಬೈ ಹುಡುಗನ ಡಾಗ್ ಕೇರ್; ಟಾಟಾ ಮಾಲೀಕರಿಂದ ಸಿಕ್ತು ಭರ್ಜರಿ ಆಫರ್!

By Web DeskFirst Published Nov 21, 2019, 7:19 PM IST
Highlights

ರಸ್ತೆಗಳಲ್ಲಿ ವಾಹನ ಡಿಕ್ಕಿಯಾಗಿ ನಾಯಿ ಸತ್ತು ಬಿದ್ದಿರುವ ಘಟನೆಗಳು ಮರುಕಳಿಸುತ್ತಲೇ ಇವೆ. ಪ್ರತಿ ನಗರ, ಹೆದ್ದಾರಿಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ನಾಯಿಗಳನ್ನು ಅಪಘಾತದಿಂದ ತಪ್ಪಿಸಲು ಮಾಡಿದ ಹೊಸ ಐಡಿಯಾ, 27 ಹರೆಯದ ಹುಡುಗನ ಬದುಕನ್ನೇ ಬದಲಿಸಿದೆ. ಸಾಮಾಜಿಕ ಕಳಕಳಿಗೆ ಟಾಟಾ ಮಾಲೀಕ ರತನ್ ಟಾಟ್ ಭರ್ಜರಿ ಆಫರ್ ನೀಡಿದ್ದಾರೆ.

ಮುಂಬೈ(ನ.21): ಹೊಸ ಐಡಿಯಾ, ಪರಿಕಲ್ಪನೆ, ಕೌಶಲ್ಯಕ್ಕೆ ಹೆಚ್ಚಿನ ಬೇಡಿಕೆ ಇದೆ. ಹೀಗೆ ಒಂದು ನವೀನ ಕಲ್ಪೆನೆ 27ರ ಹರೆಯದ ಹುಡುಗನ ಬದುಕನ್ನೇ ಬದಲಿಸಿದೆ. ಟಾಟಾ ಸಂಸ್ಥೆಯಲ್ಲಿ ಸಾಮಾನ್ಯ ಉದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಶಾಂತನು ನಾಯ್ಡು ಇದೀಗ ಮುಂಬೈ ಮಾತ್ರವಲ್ಲ, ದೇಶ ವಿದೇಶಗಳಲ್ಲೇ ಹೆಸರುವಾಸಿಯಾಗಿದ್ದಾನೆ.

ಇದನ್ನೂ ಓದಿ: ಟಾಟಾ ಇಂಡಿಗೋ To ಮರ್ಸಡೀಸ್ ಬೆಂಝ್- ರತನ್ ಟಾಟಾ ಕಾರ್ ಕಲೆಕ್ಷನ್ ಹೇಗಿದೆ?.

2014ರಲ್ಲಿ ಪದವಿ ಮುಗಿಸಿದ ಶಾಂತನು ನಾಯ್ಡು, ಟಾಟಾ ಗ್ರೂಪ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡ. ಒಂದು ದಿನ ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ವಾಹನ ಡಿಕ್ಕಿ ಹೊಡೆದ ಕಾರಣ ನಾಯಿಯೊಂದು ನಡೀ ಬೀದಿಯಲ್ಲಿ ಸತ್ತು ಬಿದ್ದಿತ್ತು. ನಾಯಿ ಕಾಳಜಿ ಹೆಚ್ಚಿದ್ದ ಶಾಂತನು ನಾಯ್ಡುಗೆ ಈ ಘಟನೆ ಮನಸ್ಸಿಗೆ ತೀವ್ರ ಬೇಸರ ತಂದಿತ್ತು. ಇದಕ್ಕೆ ಪರಿಹಾರ ಹುಡುಕುವ ಪ್ರಯತ್ನಕ್ಕೆ ಮುಂದಾದ.

ಇದನ್ನೂ ಓದಿ: ಹೆಚ್ಚು ಮೈಲೇಜ್, ಕಡಿಮೆ ಬೆಲೆ; ಟಾಟಾ ಬಿಡುಗಡೆ ಮಾಡಿದೆ ಹೊಸ ಕಾರು!

ಕೊನೆಗೆ  ತನ್ನ ಗೆಳೆಯರಿಗೆ ಕರೆ ಮಾಡಿ, ನಾಯಿಗೆ ಕಾಲರ್ ಪಟ್ಟಿ ತಯಾರು ಮಾಡಬೇಕಿದೆ. ಅದು ಹೇಗಿರಬೇಕೆಂದರೆ, ಚಾಲಕ ಅದೆಷ್ಟೇ ದೂರದಲ್ಲಿದ್ದರೂ ಕಾಣಬೇಕು. ಈ ಮೂಲಕ ನಾಯಿಗೆ ಡಿಕ್ಕಿ ಹೊಡೆದು ಹೋಗುವ ಅಪಾಯ ನಿಲ್ಲಬೇಕು ಎಂದಿದ್ದ. ಬಳಿಕ  ಗೆಳೆಯರ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿ, ರೇಡಿಯಂ ಕಾಲರ್ ಪಟ್ಟಿ ತಯಾರಾಯಿತು.

ಇದನ್ನೂ ಓದಿ: ಸೇಫ್ಟಿಗೆ ಮೊದಲ ಆದ್ಯತೆ- 5 ಸ್ಟಾರ್ ಕಾರನ್ನೇ ನೀಡುತ್ತೇವೆ: ರತನ್ ಟಾಟಾ.

ಮುಂಬೈನ ಬೀದಿ ಬೀದಿಗಳಲ್ಲಿ ನಾಯಿ ಕೊರಳಿಗೆ ಶಾಂತನು ಈ ರೇಡಿಯಂ ಕಾಲರ್ ಪಟ್ಟಿ ಹಾಕತೊಡಗಿದೆ. ಮುಂಬೈ ನಗರದಲ್ಲಿ ವಿನೂತನ ಡಾಗ್ ಕಾಲರ್ ಪ್ರಸಿದ್ದಿಯಾಯಿತು.  ಟಾಟಾ ಗ್ರೂಪ್‌ ನ್ಯೂಸ್ ಲೆಟರ್‌ನಲ್ಲೂ ಶಾಂತನೂ ಸಾಮಾಜಿಕ ಕಳಕಳಿ ಸುದ್ದಿ ಪ್ರಕಟಗೊಂಡಿತು. ಇದೇ ವೇಳೆ ಶಾಂತನೂ ತಂದೆ ಸಲಹೆಯೊಂದನ್ನು ನೀಡಿದರು. ನಾಯಿಗಳನ್ನು ಹೆಚ್ಚಾಗಿ ಇಷ್ಟಪಡುವ ಟಾಟಾ ಮಾಲೀಕ ರತನ್ ಟಾಟಾಗೆ ಪತ್ರ ಬರೆಯಲು ಸೂಚಿಸಿದರು.

 

ಇದನ್ನೂ ಓದಿ: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಹೂರ್ತ ಫಿಕ್ಸ್!

ಪತ್ರ ಬರೆಯಲು ಹಿಂದೇಟು ಹಾಕಿದ್ದ ಶಾಂತನು ಕೊನೆಗೂ ಧರ್ಯ ಮಾಡಿ ರತನ್ ಟಾಟಾಗೆ ಪತ್ರ ಬರೆದೇ ಬಿಟ್ಟ.  ದಾರಿ ಅಪಘಾತದಲ್ಲಿ ನಾಯಿ ಸಾವೀಗೀಡಾಗುವುದನ್ನು, ಗಾಯಗೊಳ್ಳುವುದನ್ನು ತಪ್ಪಿಸಲು ರೇಡಿಯಂ ಕಾಲರ್ ಪಟ್ಟಿ ಬಳಕೆ ಹೆಚ್ಚು ಸೂಕ್ತ ಹಾಗೂ ಉಪಯುಕ್ತ ಎಂದಿದ್ದ. 2 ತಿಂಗಳ ಬಳಿಕ ರತನ್ ಟಾಟಾರಿಂದ ಪ್ರತಿಕ್ರಿಯೆ ಬಂದಿತ್ತು.

ರತನ್ ಟಾಟಾ ಪ್ರತಿಕ್ರಿಯೆ ಶಾಂತನೂ ಬದುಕನ್ನೇ ಬದಲಿಸಿತು. ನಾಯಿ ಕಾಲರ್ ಪಟ್ಟಿ ಯೋಜನೆಗೆ  ಸಂಪೂರ್ಣ ಬಂಡವಾಳ ರತನ್ ಟಾಟಾ ನೀಡುವುದಾಗಿ ಘೋಷಿಸಿದ್ದರು. ಶಾಂತನೂ ನಾಯ್ಡು  ಬದುಕಿನ ಚಿತ್ರಣವೇ ಬದಲಾಯಿತು. ಸಣ್ಣ ಹಾಗೂ  ಪರಿಣಾಮಕಾರಿ ಕಳಕಳಿ ಶಾಂತನುಗೆ ಹೊಸ ರೆಕ್ಕೆ ನೀಡಿತು. 
 

click me!