ಒಂದು ವರ್ಷದಲ್ಲಿ ಒಂದು ಲಕ್ಷ; ದಾಖಲೆ ಬರೆದ ಬೌನ್ಸ್‌ ರೈಡ್‌!

By Web Desk  |  First Published Oct 26, 2019, 8:51 PM IST

ಬೌನ್ಸ್ ಸ್ಕೂಟರ್ ಸೌಲಭ್ಯ ಇದೀಗ ಬೆಂಗಳೂರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಕಡಿಮೆ ಬೆಲೆ ಹಾಗೂ ನಿಗಧಿತ ಸಮಯದಲ್ಲಿ ತಲುಪಲು ಬೌನ್ಸ್ ಸ್ಕೂಟರ್‌ಗಿಂತ ಉತ್ತಮ ಮತ್ತೊಂದಿಲ್ಲ. ಇದೀಗ ಬೌನ್ಸ್ ಸ್ಕೂಟರ್ ಸೇವೆ ಒಂದು ವರ್ಷ ಪೂರೈಸುತ್ತಿದೆ. ಇಷ್ಟೇ ಅಲ್ಲ ದಾಖಲೆಯನ್ನು ಬರೆದಿದೆ. 


ಬೆಂಗಳೂರು(ಅ.26):  ದೀಪಾವಳಿ ಹಬ್ಬದ ಟೈಮ್‌ನಲ್ಲೇ ಬೌನ್ಸ್‌ ತನ್ನ ಮೊದಲ ವರ್ಷದ ವಾರ್ಷಿಕೋತ್ಸವ ಆಚರಿಸುತ್ತಿದೆ. ಕಡಿಮೆ ಬೆಲೆಗೆ ಬಾಡಿಗೆಗೆ ದ್ವಿಚಕ್ರ ವಾಹನ ಪೂರೈಸುವ ಸಂಸ್ಥೆ ಬೌನ್ಸ್‌. ಬೆಂಗಳೂರಿನಲ್ಲಿ ದಿನಕ್ಕೆ ಏನಿಲ್ಲವೆಂದರೂ 1ಲಕ್ಷ ಸವಾರರು ಬೌನ್ಸ್‌ ಸ್ಕೂಟರ್‌ಗಳನ್ನು ಬಳಸುತ್ತಿದ್ದಾರೆ. 

ಇದನ್ನೂ ಓದಿ: ಬೌನ್ಸ್‌ ಸ್ಕೂಟರ್‌ ಬಳಸಿ ಬಳಿಕ ಬೆಂಕಿ ಹಚ್ಚಿದರು!

Tap to resize

Latest Videos

undefined

13 ತಿಂಗಳಲ್ಲಿ ನಗರದಲ್ಲಿ 10 ಮಿಲಿಯನ್‌ ವಹಿವಾಟನ್ನು ಪೂರ್ಣಗೊಳಿಸಲಾಗಿದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ. ಬೌನ್ಸ್‌ 9,500 ಸ್ಕೂಟರ್‌ಗಳೊಂದಿಗೆ 70ದಶಲಕ್ಷಕ್ಕೂ ಹೆಚ್ಚು ಕಿ.ಮೀ ಪೂರೈಸಿದ್ದು, ಜಾಗತಿಕ ಕಂಪನಿಗಳಾದ ಲೈಮ್‌, ಬರ್ಡ್‌ಗೆ ಸಮನಾಗಿ ನಿಂತಿದೆ. ಕಿ.ಮಿ ರು.5 ದರದಲ್ಲಿ ಸವಾರರಿಗೆ ಸ್ಕೂಟರ್‌ ಬಾಡಿಗೆಗೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ 10 ಮೆಟ್ರೋಪಾಲಿಟನ್‌ ಸಿಟಿಗಳಿಗೆ ವಿಸ್ತರಿಸುವ ಗುರಿ ಹೊಂದಿದೆ.

ಇದನ್ನೂ ಓದಿ: ದೀಪಾವಳಿ ಆಫರ್; ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗೆ ಭರ್ಜರಿ ಡಿಸ್ಕೌಂಟ್!

ಬೌನ್ಸ್ ಬಳಸುವ ಗ್ರಾಹಕರು, ಎಲ್ಲೆಂದರಲ್ಲಿ ನಿಲ್ಲಿಸಿ, ಹೆಲ್ಮೆಟ್, ಟೈಯರ್ ಸೇರಿದಂತೆ ಇತರ ಬಿಡಿಭಾಗಗಳನ್ನು ಎಗರಿಸಿ ಕಂಪನಿಗೆ ಅತೀವ ನಷ್ಟ ತಂದೊಡ್ಡಿದ ಪ್ರಕರಣಗಳು ಇವೆ. ಕೆಲವು ಭಾಗಗಳಲ್ಲಿ ಬೌನ್ಸ್ ಸ್ಕೂಟರ್‌ಗಳನ್ನು ಚರಂಡಿಗೆ ಹಾಕಿದ ಘಟನೆಗಳೂ ನಡೆದಿದೆ. ಜಾಗರೂಕರಾಗಿ, ಎಚ್ಚರದಿಂದ ಉಪಯೋಗಿಸಿದರೆ ಉತ್ತಮ.
 

click me!