ರಾತ್ರಿ ಕಾರು ಡ್ರೈವ್‌ ಅಂದ್ರೆ ವಿರಾಟ್‌ ಕೊಹ್ಲಿಗೆ ಇಷ್ಟ!

By Web Desk  |  First Published Oct 26, 2019, 8:03 PM IST

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆಡಿ ಕಾರಿನ ನಡುವೆ ಹಲವು ರೋಚಕ ಕತೆಗಳಿವೆ. ಇದೀಗ ಕೊಹ್ಲಿ ಹಗಲು ಡ್ರೈವ್‌ಗಿಂತ ರಾತ್ರಿ ಕಾರು ಡ್ರೈವ್ ಮಾಡಲು ಹೆಚ್ಚು ಇಷ್ಟ ಪಡುತ್ತಾರೆ. ಇಷ್ಟೇ ಅಲ್ಲ ಕ್ರಿಕೆಟ್ ಬಿಡುವಿನ ವೇಳೆ ಕೊಹ್ಲಿ ರಾತ್ರಿ ಡ್ರೈವ್ ಕೂಡ ಮಾಡುತ್ತಾರೆ. ಈ ಕುರಿತು ಕೊಹ್ಲಿ ಏನು ಹೇಳಿದ್ದಾರೆ. ಇಲ್ಲಿದೆ ವಿವರ.


ಮುಂಬೈ(ಅ.26): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಕಾರುಗಳ ಪ್ರೀತಿ ಹೆಚ್ಚು. ಬಾಲ್ಯದಲ್ಲಿ ಕೊಹ್ಲಿಯನ್ನು ತಂದೆ ಸ್ಕೂಟರ್ ಮೂಲಕ ಕ್ರಿಕೆಟ್ ಅಭ್ಯಾಸ ಮಾಡಲು ಕರೆದೊಯ್ಯುತ್ತಿದ್ದರು. ಇದೀಗ ಕೊಹ್ಲಿ ಬಳಿ ಹಲವು ಐಷಾರಾಮಿ ಕಾರುಗಳಿವೆ.  ವಿರಾಟ್‌ ಕೊಹ್ಲಿಗೆ ಆಡಿ ಕಾರುಗಳು ಅಂದ್ರೆ ಭಾರಿ ಇಷ್ಟ. ಅವರು ರಾಯಭಾರಿ ಆಗುವ ಮೊದಲೇ ಒಂದೆರಡು ಆಡಿಗಳನ್ನು ಖರೀದಿಸಿದ್ದರು. ತಮ್ಮ ಮತ್ತು ಆಡಿ ಸಂಬಂಧದ ಬಗ್ಗೆ ಮಾತಾಡುತ್ತಾ ಅವರು, ‘ನನಗೆ ರಾತ್ರಿ ಖಾಲಿ ರಸ್ತೆಯಲ್ಲಿ ಜೋರಾಗಿ ಮ್ಯೂಸಿಕ್‌ ಹಾಕಿಕೊಂಡು ಡ್ರೈವ್‌ ಮಾಡುವುದು ಇಷ್ಟ’ ಎಂದರು. ತಕ್ಷಣ ಆಡಿ ಕಾರು ಬಿಡುಗಡೆ ಕಾರ್ಯಕ್ರಮದ ನಿರೂಪಕಿ ತಕ್ಷಣ ಯಾರ ಜತೆ ಎಂದಳು. ವಿರಾಟ್‌ ಅವಳ ಕಡೆ ನೋಡುತ್ತಾ, ನನ್ನ ಹೆಂಡ್ತಿ ಜತೆ ಕಣಮ್ಮಾ ಎಂದು ನಕ್ಕರು.

ಇದನ್ನೂ ಓದಿ: ಸುಜುಕಿ ವಾಕು ಸ್ಪೋ ಕಾನ್ಸೆಪ್ಟ್ ಕಾರು ಅನಾವರಣ; ಆಕರ್ಷಕ ಲುಕ್‌ಗೆ ಮಾರುಹೋದ ಜನ!

Latest Videos

undefined

ಜರ್ಮನ್‌ ಮೂಲದ ಐಷಾರಾಮಿ ಕಾರು ತಯಾರಿಕಾ ಕಂಪನಿ ಆಡಿ ಬಿಎಸ್‌ 6 ಇಂಜಿನ್‌ ಹೊಂದಿರುವ ಹೊಸ ಆಡಿ ಎ6 ಕಾರನ್ನು ಲಾಂಚ್‌ ಮಾಡಿದೆ. ಆ ಕಾರನ್ನು ಲಾಂಚ್‌ ಮಾಡಿದ್ದು ಆಡಿ ರಾಯಭಾರಿ ವಿರಾಟ್‌ ಕೊಹ್ಲಿ. ಭಾರತ ಆಡಿ ವಿಭಾಗದ ಮುಖ್ಯಸ್ಥ ಬಲ್‌ಬೀರ್‌ ಸಿಂಗ್‌ ಧಿಲ್ಲೋನ್‌ ತಾವೇ ಡ್ರೈವ್‌ ಮಾಡುತ್ತಾ ಕೊಹ್ಲಿಯನ್ನು ಕರೆದುಕೊಂಡು ಬಂದಿದ್ದು ಈ ಕಾರ್ಯಕ್ರಮದ ವಿಶೇಷ. ಅಂದಹಾಗೆ ಈ ಕಾರ್ಯಕ್ರಮ ನಡೆದಿದ್ದು ಮುಂಬೈಯಲ್ಲಿ.

ಇದನ್ನೂ ಓದಿ: 3 ತಿಂಗಳಲ್ಲಿ ಕಿಯಾ ಸೆಲ್ಟೋಸ್ ದಾಖಲೆ; SUV ಕಾರಿಗೆ ಭಾರಿ ಬೇಡಿಕೆ!

ಹೊಚ್ಚ ಹೊಸ ಆಡಿ ಎ6 ಸ್ಟೈಲೇ ಬೇರೆ
2.0 ಲೀ ಟಿಎಫ್‌ಎಸ್‌ಐ ಇಂಜಿನ್‌ ಹೊಂದಿರುವ, 6.8 ಸೆಕೆಂಡಿನಲ್ಲಿ ಗಂಟೆಗೆ ನೂರು ಕಿಮಿ ವೇಗ ತಲುಪಬಲ್ಲ ಶಕ್ತಿಶಾಲಿ ಕಾರು ಆಡಿ ಎ6. ಸ್ಟೈಲಿಷ್‌ ವಿನ್ಯಾಸ, 3ಡಿ ಸರೌಂಡ್‌ ಸೌಂಡು ಇದರ ವಿಶೇಷತೆ. ಇದರ ಇಂಟೀರಿಯರ್‌ ಸಿಕ್ಕಾಪಟ್ಟೆಮಜಾ ಕೊಡುತ್ತದೆ. ಸುಮಾರು ಮೂವತ್ತು ಬಣ್ಣದ ಇಂಟೀರಿಯರ್‌ ಲೈಟ್ಸ್‌ಗಳಿಗೆ. ಮೂಡ್‌ಗೆ ತಕ್ಕಂತೆ ಲೈಟೂ ಇರಲಿದೆ. ಇದರ ಆರಂಭಿಕ ಬೆಲೆ ರು.54,20,000.

ಹೇಗಿದೆ ಆಡಿ ಎ6?
ಐದು ಜನ ಆರಾಮಾಗಿ ಕೂರಬಹುದಾದ ಈ ಕಾರಲ್ಲಿ ಸುಮಾರು 500 ಕೆಜಿ ಭಾರದ ಲಗೇಜನ್ನು ಆರಾಮಾಗಿ ಇಡಬಹುದು. 73 ಲೀ ಸಾಮರ್ಥ್ಯದ ಪೆಟ್ರೋಲ್‌ ಟ್ಯಾಂಕ್‌ ಇದೆ. ಅದ್ಭುತವಾದ ಇನ್‌ಫೋಟೇನ್‌ಮೆಂಟ್‌ ವ್ಯವಸ್ಥೆ ಇದೆ. ಲೇನ್‌ ಡಿಪಾರ್ಚರ್‌ ವಾರ್ನಿಂಗ್‌ ಎಂಬ ಫೀಚರ್‌ ದಾರಿ ಆಚೀಚೆಯಾದಾಗ ಎಚ್ಚರಿಕೆ ಕೊಡುತ್ತದೆ. ಇನ್ನು ಪಾರ್ಕ್ ಅಸಿಸ್ಟ್‌ ಫೀಚರ್‌ ಮಾಮೂಲು. ನಿಮ್ಮಲ್ಲಿ ಅಮೆಜಾನ್‌ ಅಲೆಕ್ಸಾ ಇದ್ದರೆ ಅಲೇಕ್ಸಾ, ಆಡಿ ಎ6 ವಿಶೇಷತೆ ಹೇಳು ಅಂದರೆ ಸಲೀಸಾಗಿ ಎ6 ಮಾಹಿತಿ ನೀಡುತ್ತದೆ. ಅಂಥಾ ವ್ಯವಸ್ಥೆ ಆಡಿ ಮಾಡಿಕೊಂಡಿದೆ.

ನೀವು ಹೇಗೆ ಕಾರು ಓಡಿಸುತ್ತೀರಿ ಎಂದು ಗೊತ್ತಾಗುತ್ತದೆ!
ಮೈ ಆಡಿ ಕನೆಕ್ಟ್ ಎಂಬ ಆ್ಯಪ್‌ ಇದೆ. ಅದನ್ನು ಡಿಸೆಂಬರ್‌ ಅಂತ್ಯದವರೆಗೆ ಕಂಪನಿ ಫ್ರೀ ಕೊಡುತ್ತಿದೆ. ಆ ಆ್ಯಪನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ಹಾಕಿಕೊಂಡರೆ ನಿಮ್ಮ ಫೋನು ಕಾರಿಗೆ ಕನೆಕ್ಟ್ ಆಗಿದ್ದರೆ ನೀವು ಹೇಗೆ ಕಾರನ್ನು ಓಡುಸುತ್ತಿದ್ದೀರಿ, ಆ್ಯಕ್ಸಲೇಟರ್‌ ಜಾಸ್ತಿ ಒತ್ತುತ್ತಿದ್ದೀರಾ, ಗಾಡಿ ಹೇಗೆ ಓಡಿತು ಎಂಬೆಲ್ಲಾ ಮಾಹಿತಿ ಆ ಆ್ಯಪ್‌ನಲ್ಲಿ ಸ್ಟೋರ್‌ ಆಗುತ್ತದೆ.

click me!