ಹ್ಯುಂಡೈ ಸ್ಯಾಂಟ್ರೋ ಆ್ಯನಿವರ್ಸರಿ ಎಡಿಷನ್‌ ಬಿಡುಗಡೆ!

Published : Oct 26, 2019, 08:34 PM IST
ಹ್ಯುಂಡೈ ಸ್ಯಾಂಟ್ರೋ ಆ್ಯನಿವರ್ಸರಿ ಎಡಿಷನ್‌ ಬಿಡುಗಡೆ!

ಸಾರಾಂಶ

ಸಣ್ಣ ಕಾರಿನಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಹ್ಯುಂಡೈ ಸ್ಯಾಂಟ್ರೋ ಇದೀಗ ಆ್ಯನಿವರ್ಸಿ ಎಡಿಶನ್ ಕಾರು ಬಿಡುಗಡೆ ಮಾಡಿದೆ. ಈ ಕಾರಿನ ವಿಶೇಷತೆ ಹಾಗೂ ಬೆಲೆ ವಿವರ ಇಲ್ಲಿದೆ.

ನವದೆಹಲಿ(ಅ.26):  ಹ್ಯುಂಡೈ ಮೋಟಾರ್‌ ಇಂಡಿಯಾ ತನ್ನ ಆ್ಯನಿವರ್ಸರಿ ಪ್ರಯುಕ್ತ ಎರಡು ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಸ್ಯಾಂಟ್ರೋ ಸ್ಪೋರ್ಟ್ಸ್ MT ಹಾಗೂ AMT ಆವೃತ್ತಿಗಳು ಮಾರುಕಟ್ಟೆಗೆ ಬಂದಿವೆ. ಆ್ಯನಿವರ್ಸರಿಯ ಲಾಂಛನ ಇದರಲ್ಲಿರೋದು ವಿಶೇಷ. ಇದು ಸೀಮಿತ ಆವೃತ್ತಿ ಮಾಡೆಲ್‌ಗಳು ಇದರಲ್ಲಿವೆ.

ಇದನ್ನೂ ಓದಿ: ಸ್ಯಾಂಟ್ರೋ ಕಾರು ದರ ಪರಿಷ್ಕರಣೆ; ಇಲ್ಲಿದೆ ನೂತನ ಬೆಲೆ!

ಈ ಮಾಡೆಲ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಹ್ಯುಂಡೈ ಮೋಟಾರ್‌ ಇಂಡಿಯಾ ಲಿಮಿಟೆಡ್‌ನ ನ್ಯಾಷನಲ್‌ ಸೇಲ್ಸ್‌ ಹೆಡ್‌ ವಿಕಾಸ್‌ ಜೈನ್‌, ‘ಸ್ಯಾಂಟ್ರೋದ ಈ ವಿಶೇಷ ಆವೃತ್ತಿಯಲ್ಲಿ ಜಾಗತಿಕ ತಂತ್ರಜ್ಞಾನ, ಸ್ಟೈಲಿಶ್‌ ವಿನ್ಯಾಸ ಹಾಗೂ ಇನ್ನಿತರ ಫೀಚರ್‌ಗಳನ್ನು ಅಳವಡಿಸಲಾಗಿದೆ’ ಎಂದರು.

ಇದನ್ನೂ ಓದಿ: ಎಪಿ ಸಿಎಂ ಜಗನ್ ಕಾರು ನಿಲ್ಲಿಸಿ, ವಂಚನೆ ಪ್ರಕರಣ ದಾಖಲಿಸಿದ ಪೊಲೀಸ್!

ಬೆಲೆ: ಸ್ಪೋರ್ಟ್ಸ್ MT(ಆನಿವರ್ಸರಿ ಆವೃತ್ತಿ) : 5,16,890 ರು.

ಸ್ಪೋರ್ಟ್ಸ್ AMT(ಆನಿವರ್ಸರಿ ಆವೃತ್ತಿ) : 5,74,890 ರು.

PREV
click me!

Recommended Stories

ಹೊಸ ಕಾರ್‌ಗಳಲ್ಲೀಗ ಸ್ಟೆಪ್ನಿ ಮಾಯ!
ಬಜಾಜ್‌ ಚೇತಕ್‌ನಿಂದ ಮತ್ತೊಂದು ಎಲೆಕ್ಟ್ರಿಕ್‌ ಸ್ಕೂಟರ್‌