ಆಲ್ಟ್ರಾವಿಯೋಲೆಟ್ F77 ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದ ಬೆಂಗಳೂರು ಕಂಪನಿ!

By Web DeskFirst Published Nov 13, 2019, 12:54 PM IST
Highlights

ಬೆಂಗಳೂರು ಮೂಲದ ಆಲ್ಟ್ರಾವಿಯೋಲೆಟ್ ಕಂಪನಿ  F77 ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಎಲೆಕ್ಟ್ರಿಕ್ ಬೈಕ್‌ಗಳ ಪೈಕಿ ಆಲ್ಟ್ರಾವಿಯೋಲೆಟ್ ಕಂಪನಿ  F77  ಆಕರ್ಷಕ ಲುಕ್ ಹೊಂದಿದೆ. ಈ ಬೈಕ್ ಕುರಿತ ಹೆಚ್ಚಿನ ವಿವರ, ಇಲ್ಲಿದೆ.

ಬೆಂಗಳೂರು(ನ.13): ಆಟೋಮೊಬೈಲ್ ಕಂಪನಿಗಳು ಇದೀಗ ಎಲೆಕ್ಟ್ರಿಕ್ ವಾಹನ ತಯಾರಿಕೆಗೆ ಹೆಚ್ಚು ಒತ್ತು ನೀಡುತ್ತಿದೆ. ಕಾರಣ ಇದು ಭವಿಷ್ಯದ ವಾಹನ ಎಂದೇ ಗುರುತಿಸಿಕೊಂಡಿದೆ. ಈಗಾಗಲೇ ಹಲವು ಸ್ಟಾರ್ಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಸೇರಿದಂತೆ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಬೆಂಗಳೂರಿನ ಎದರ್ ಕಂಪನಿ ಈಗಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ  ಮಾಡಿದೆ. ಇದೀಗ ಬೆಂಗಳೂರಿನ ಮತ್ತೊಂದು ಕಂಪನಿ ಆಲ್ಟ್ರಾವಿಯೋಲೆಟ್  ಆಕರ್ಷಕ ಹಾಗೂ ಅತ್ಯಾಧನಿಕ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. 

ಇದನ್ನೂ ಓದಿ: ರೊವ್ವೆಟ್ ಎಲೆಕ್ಟ್ರಿಕ್ ಬೈಕ್, ಸ್ಕೂಟರ್ ಬಿಡುಗಡೆ!

ಬೆಂಗಲೂರು ಮೂಲದ ಆಲ್ಟ್ರಾವಿಯೋಲೆಟ್ ಪ್ರೈವೇಟ್ ಲಿಮಿಟೆಡ್ ಕಂಪನಿ ನೂತನ ಆಲ್ಟ್ರಾವಿಯೋಲೆಟ್ F77 ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ರಿಮೂಟ್ ಕಂಟ್ರೋಲ್ ಹಾಗೂ ಆ್ಯಪ್ ಕನೆಕ್ಟಿವಿಟಿ ಸೇರಿದಂತೆ ಹಲವು ಫೀಚರ್ಸ್ ಈ ಬೈಕ್‌ನಲ್ಲಿದೆ. 

ಇದನ್ನೂ ಓದಿ: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಹೂರ್ತ ಫಿಕ್ಸ್!

ಆಲ್ಟ್ರಾವಿಯೋಲೆಟ್ F77  ಬೈಕ್ ಕ್ರೊಮ್ ಚಾರ್ಜಿಂಗ್ ಪಾಡ್ ಹೊಂದಿದ್ದು, ಅತ್ಯಂತ ವೇಗವಾಗಿ ಚಾರ್ಜ್ ಆಗಲಿದೆ. 1340mm  ವ್ಹೀಲ್ ಬೇಸ್, 800mm ಎತ್ತರ ಹೊಂದಿದೆ. ಫ್ರಂಡ್ 320mm ಡಿಸ್ಕ್ ಬ್ರೇಕ್, ರೇರ್ 230mm ಡಿಸ್ಕ್ ಬ್ರೇಕ್, ಡ್ಯುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ.

33.5hp  ಪವರ್ ಹಾಗೂ 90nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಬೈಕ್‌ನ ಗರಿಷ್ಛ ವೇಗ 147 ಕಿ,ಮೀ ಪ್ರತಿ ಗಂಟೆಗೆ.  ಆಲ್ಟ್ರಾವಿಯೋಲೆಟ್ F77 ಬೈಕ್  ಬೆಲೆ 3 ರಿಂದ 3.25 ಲಕ್ಷ ರೂಪಾಯಿ. 

ನವೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!