ನಿಸಾನ್ ಆದಾಯದಲ್ಲಿ 70% ಕುಸಿತ; ಡಿಸ್ಕೌಂಟ್ ನೀಡಲು ಚಿಂತನೆ!

By Web DeskFirst Published Nov 12, 2019, 7:38 PM IST
Highlights

ಜಪಾನ್ ಕಾರು ಕಂಪನಿ ನಿಸಾನ್ ಕಳೆದ ವರ್ಷದಿಂದ ಸಂಕಷ್ಟಕ್ಕೆ ಸಿಲುಕಿದೆ. ಕಂಪನಿ ಮುಖ್ಯಸ್ಥನ  ಬಂಧನ ಬಳಿಕ ಸುಧಾರಿಸಿಕೊಂಡಿದ್ದ ಕಂಪನಿ ಇದೀಗ ಆದಾಯದಲ್ಲಿ ಕುಸಿತ ಕಾಣೋ ಮೂಲಕ ಹಿನ್ನಡೆ ಅನುಭವಿಸಿದೆ.

ಟೊಕಿಯೊ(ನ.12): ಪ್ರಸಕ್ತ ವರ್ಷ ಭಾರತದ ಕಾರು ಮಾರಾಟ ಪಾತಾಳಕ್ಕಿಳಿದಿದೆ. ದಸರಾ ಹಾಗೂ ದೀಪಾವಳಿ ಹಬ್ಬದ ದಿನಗಳಲ್ಲಿ ಕೊಂಚ ಚೇತರಿಕೆ ಕಂಡರೂ ನಷ್ಟ ಸರಿದೂಗಿಸಲು ಸಾಧ್ಯವಾಗಿಲ್ಲ. ಭಾರತ ಹಾಗೂ ಏಷ್ಯಾ ಉಪ ಖಂಡಗಳಲ್ಲಿನ ಆರ್ಥಿಕ ಹಿಂಜರಿತ ನಿಸಾನ್ ಕಾರು ಕಂಪನಿ ಮೇಲೆ ತೀವ್ರ ಹೊಡೆತ ಬಿದ್ದಿದೆ. ನಿಸಾನ್ ಆದಾಯದಲ್ಲಿ ಶೇಕಡಾ 70 ರಷ್ಟು ಕುಸಿತ ಕಂಡಿದೆ. 

ಇದನ್ನೂ ಓದಿ: ನಿಸಾನ್‌, ಡಾಟ್ಸನ್‌ ಕಾರು ಕೊಳ್ಳುವವರಿಗೆ ಭರ್ಜರಿ ಆಫರ್!

ನಿಸಾನ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ  2.1 ಬಿಲಿಯನ್ ಡಾಲರ್ ಆದಾಯದ ನಿರೀಕ್ಷೆಯಲ್ಲಿತ್ತು. ಆದರೆ ಆದಾಯ 1.5 ಬಿಲಿಯನ್ ಡಾಲರ್ ಕೂಡ ದಾಟಿಲ್ಲ. ನಿಸಾನ್ ಆದಾಯದ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಟೊಕಿಯೊ ಶೇರು ಮಾರುಕಟ್ಟೆಯಲ್ಲಿ ನಿಸಾನ ಶೇರು ಕುಸಿತ ಕಂಡಿದೆ. 

ಇದನ್ನೂ ಓದಿ: ನಿಸಾನ್ ಕಿಕ್ಸ್-ಜೂಮ್ ಕಾರು ಒಪ್ಪಂದ; ಬೆಂಗಳೂರಿಗರಿಗೆ ಭರ್ಜರಿ ಕೊಡುಗೆ!

ಹಣದ ಅವ್ಯವಹಾರದಿಂದ ಚೇರ್ಮೆನ್ ಕಾರ್ಲೋಸ್ ಗೂಸನ್ ಬಂಧನದ ಬಳಿಕ ನಿಸಾನ್ ಕಂಪನಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಗೂಸನ್ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಆದರೆ ಕಂಪನಿ ಗೂಸನ್ ಬಂಧನದ ಬೆನ್ನಲ್ಲೇ ಅಮಾನತು ಮಾಡಿತ್ತು. 

ಗೂಸನ್ ಬಳಿಕ ಹಿರೋಟೊ ಸಾಯ್ಕವಾ ಮುಖ್ಯಸ್ಥನ ಜವಾಬ್ದಾರಿ ವಹಿಸಿಕೊಂಡರು ಕಂಪನಿಯನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ. ಹೀಗಾಗಿ ರಾಜೀನಾಮೆ ನೀಡಿದರು. ಕಳೆದ ತಿಂಗಳು ನಿಸಾನ್ ಕಂಪನಿ ಮಾಕಿಟೊ ಉಚಿಡ ನೂತನ ಮುಖ್ಯಸ್ಥರಾಗಿ ಆಯ್ಕೆಯಾದ ಬೆನ್ನಲ್ಲೇ ಆದಾಯ ಮಾಹಿತಿ ಬಹಿರಂಗವಾಗಿದೆ. ಹೀಗಾಗಿ ಉಚಿಡ ಕುರ್ಚಿಯೂ ಅಲುಗಾಡುತ್ತಿದೆ.

click me!