1.3 ಕೋಟಿ ಮೌಲ್ಯದ ರೇಂಜ್ ರೋವರ್ ಕಾರು ಖರೀದಿಸಿದ ನಟಿ ದಿಶಾ ಪಟಾನಿ!

By Web Desk  |  First Published Nov 11, 2019, 9:34 PM IST

ಬಾಲಿವುಡ್ ನಟಿ ದಿಶಾ ಪಟಾನಿ ನೂತನ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ದಿಶಾ ಖರೀದಿಸಿದ ಕಾರಿನ ಬೆಲೆ 1.3 ಕೋಟಿ ರೂಪಾಯಿ. ದುಬಾರಿ ಬೆಲೆಯ ಈ ಕಾರಿ ವಿಶೇಷತೆ ಏನು? ಇಲ್ಲಿದೆ ವಿವರ.


ಮುಂಬೈ(ನ.11): ಬಾಲಿವುಡ್ ಸೆಲೆಬ್ರೆಟಿಗಳಿಗೂ ರೇಂಜ್ ರೋವರ್ ಕಾರಿಗೂ ಅವಿನಾಭಾವ ಸಂಬಂಧವಿದೆ. ಬಹುತೇಕ ಎಲ್ಲಾ ಸೆಲೆಬ್ರೆಟಿಗಳೂ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ಈ ಸಾಲಿಗೆ ಬಾಲಿವುಡ್‌ನ ಬಳುಕುವ ಬಳ್ಳಿ ಎಂದೇ ಖ್ಯಾತಿ ಹೊಂದಿರುವ ದಿಶಾ ಪಟಾನಿ ಸೇರಿಕೊಂಡಿದ್ದಾರೆ. ದಿಶಾ ರೇಂಜ್ ರೋವರ್ ಸ್ಪೋರ್ಟ್ ಕಾರು ಖರೀದಿಸಿದ್ದಾರೆ.

ಇದನ್ನೂ ಓದಿ: ಅಂಬಾನಿ ಪುತ್ರರ ಭದ್ರತೆಗಾಗಿ ಹೊಸ ರೇಂಜ್ ರೋವರ್ ಕಾರು

Tap to resize

Latest Videos

ದಿಶಾ ಪಟಾನಿ  HSE ಪೆಟ್ರೋಲ್ ವೇರಿಯೆಂಟ್ ರೇಂಜ್ ರೋವರ್ ಸ್ಪೋರ್ಟ್ ಕಾರಿನ ಬೆಲೆ 1.3 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಈ ಮೂಲಕ ಕತ್ರಿನಾ ಕೈಫ್, ಅಮಿತಾಬ್ ಬಚ್ಚನ್, ಸಂಜಯ್ ದತ್, ಶಾರೂಕ್ ಖಾನ್, ಸಲ್ಮಾನ್ ಖಾನ್, ಆಲಿಯಾ ಭಟ್ ಸೇರಿದಂತೆ ಹಲವು ಬಾಲಿವುಡ್ ನಟ ನಟಿಯರ ಸಾಲಿಗೆ ದಿಶಾ ಪಟಾನಿ ಸೇರಿಕೊಂಡಿದ್ದಾರೆ.  

 

 
 
 
 
 
 
 
 
 
 
 
 
 

And I thought I was tall ! Thank you @landrover_modimotors Worli , for the lovely experience ! #ad

A post shared by disha patani (paatni) (@dishapatani) on Nov 5, 2019 at 9:30am PST

ಇದನ್ನೂ ಓದಿ: ಬದಲಾಯಿತು ಪ್ರಧಾನಿ ಮೋದಿ ಕಾರು, ರೇಂಜ್ ರೋವರ್‌ಗೆ ಗುಡ್ ಬೈ?

ರೇಂಜ್ ರೋವರ್ ಸ್ಪೋರ್ಟ್ ಕಾರಿನಲ್ಲಿ 2 ವೇರಿಯೆಂಟ್ ಲಭ್ಯವಿದೆ. 2.0 ಲೀಟರ್ ಪೆಟ್ರೋಲ್ ಹಾಗೂ 3.0 ಲೀಟರ್ ಪೆಟ್ರೋಲ್ ವೇರಿಯೆಂಟ್ ಲಭ್ಯವಿದೆ.  3.0 ಲೀಟರ್ ಪೆಟ್ರೋಲ್ ಕಾರು 6 ಸಿಲಿಂಡರ್ ಹೊಂದಿದ್ದು,335bhp ಪವರ್ ಹಾಗೂ 450N ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 2.0 ಲೀಟರ್ ಪೆಟ್ರೋಲ್ ಎಂಜಿನ್ ಕಾರು, 6 ಸಿಲಿಂಡರ್ ಹೊಂದಿದ್ದು, 296bhp ಪವರ್ ಹಾಗೂ  400Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 

click me!