ಬಜಾಜ್ ಅವೆಂಜರ್ 160 ABS ಬಿಡುಗಡೆಯಾಗಿದೆ. ಆಧುನಿಕ ತಂತ್ರಜ್ಞಾನ, ABS ಬ್ರೇಕ್ ಸೇರಿದಂತೆ ಹಲವು ವಿಶೇಷತೆ ಹೊಂದಿರುವ ಈ ಬೈಕ್ ಬೆಲೆ ಎಷ್ಟು? ಇಲ್ಲಿದೆ ವಿವರ.
ನವದೆಹಲಿ(ಏ.24): ಬಜಾಜ್ ಇದೀಗ ನೂತನ ಅವೆಂಜರ್ ಬಿಡುಗಡೆ ಮಾಡಿದೆ. ಅವೆಂಜರ್ 160 ABS ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಸಿಂಗಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೆಕಿಂಗ್ ಸಿಸ್ಟಮ್) ಹೊಂದಿರುವ ನೂತನ ಬೈಕ್, ಅವೆಂಜರ್ ಬೇಡಿಕೆ ಹೆಚ್ಚಿಸಲಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಬಾಲಿವುಡ್ ನಟಿ ವಿದ್ಯಾ ಬಾಲನ್ ಮನೆಗೆ ಹೊಸ ಅತಿಥಿ!
undefined
ನೂತನ ಅವೆಂಜರ್ 160 ABS ಬೈಕ್ ಬೆಲೆ Rs 81,036 ರೂಪಾಯಿ(ಎಕ್ಸ್ ಶೋ ರೂಂ). ಅವೆಂಜರ್ 160 ABS ಬಿಡುಗಡೆಯಾದ ಕಾರಣ, ಅವೆಂಜರ್ 180 ಬೈಕ್ ಸ್ಥಗಿತಗೊಂಡಿದೆ. ಅವೆಂಜರ್ ಬೈಕ್‌ಗಳಲ್ಲಿ ಎಂಟ್ರಿ ಲೆವಲ್ ಬೈಕ್ 180 ಸ್ಥಗಿತಗೊಳಿಸಲಾಗುತ್ತಿದೆ.
ಇದನ್ನೂ ಓದಿ: ಮಾರುತಿ 800 to BMW: ವರ್ಷದಿಂದ ವರ್ಷಕ್ಕೆ ಬದಲಾಗುತ್ತೆ ಸಚಿನ್ ಕಾರು!
ನೂತನ ಅವೆಂಜರ್ 160 ಬೈಕ್ ಎಂಜಿನ್ ಹಾಗೂ ಪಲ್ಸಾರ್ 160 ಎಂಜಿನ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ನೂತನ ಅವೆಂಜರ್ ಬೈಕ್ 160.3 cc ಎಂಜಿನ್ ಹೊಂದಿದ್ದು, 15.5 PS ಪವರ್ ಹಾಗೂ 14.6 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಅವೆಂಜರ್ 180 ಬೈಕ್ 15.5 PS ಪವರ್ ಹಾಗೂ 13.7 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.