ಬಾಲಿವುಡ್ ನಟಿ ವಿದ್ಯಾ ಬಾಲನ್ ಮನೆಗೆ ಹೊಸ ಅತಿಥಿ!

Published : Apr 24, 2019, 07:44 PM ISTUpdated : Apr 24, 2019, 11:01 PM IST
ಬಾಲಿವುಡ್ ನಟಿ ವಿದ್ಯಾ ಬಾಲನ್ ಮನೆಗೆ ಹೊಸ ಅತಿಥಿ!

ಸಾರಾಂಶ

ನಟಿ ವಿದ್ಯಾ ಬಾಲನ್ ಬಹುಬೇಡಿಕೆಯ ನಟಿ. 2014ರಲ್ಲಿ ವಿದ್ಯಾ ಬಾಲನ್ ಉದ್ಯಮಿ ಸಿದ್ದಾರ್ಥ್ ರಾಯ್ ಕಪೂರ್ ವಿವಾಹವಾಗಿದ್ದಾರೆ. ಸದ್ಯ ಬಾಲಿವುಡ್‌ನ ಚಿತ್ರಗಳಲ್ಲಿ ಬ್ಯೂಸಿಯಾಗಿರುವ ವಿದ್ಯಾ ಬಾಲನ್  ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ. 

ಮುಂಬೈ(ಏ.24): ಬಾಲಿವುಡ್ ನಟಿ ವಿದ್ಯಾಬಾಲನ್ ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ. ಹೌದು, ಇದು ನಿಜ ವಿದ್ಯಾ ಬಾಲನ್ ನೂತನ ಮರ್ಸಿಡೀಸ್ ಬೆಂಝ್ ಇ ಕ್ಲಾಸ್ ಕಾರು ಖರೀದಿಸಿದ್ದಾರೆ. 2019ರಲ್ಲಿ ಬಾಲಿವುಡ್ ನಟ-ನಟಿಯರು ಸರದಿ ಸಾಲಿನಲ್ಲಿ ದುಬಾರಿ ಕಾರುಗಳನ್ನು ಖರೀದಿಸುತ್ತಿದ್ದಾರೆ. ಇದೀಗ ವಿದ್ಯಾ ಬಾಲನ್ ಕೂಡ ಈ ಸಾಲಿಗೆ ಸೇರಿದ್ದಾರೆ.

ಇದನ್ನೂ ಓದಿ: ಮಾರುತಿ 800 to BMW: ವರ್ಷದಿಂದ ವರ್ಷಕ್ಕೆ ಬದಲಾಗುತ್ತೆ ಸಚಿನ್ ಕಾರು!

ವಿದ್ಯಾ ಬಾಲನ್ ನೀಲಿ ಬಣ್ಣದ ಮರ್ಸಿಡೀಸ್ ಬೆಂಝ್ ಇ ಕ್ಲಾಸ್ ಕಾರು ಖರೀದಿಸಿದ್ದಾರೆ. ಈ ಸೆಡಾನ್ ಕಾರು ಅತ್ಯಂತ ಆರಾಮದಾಯಕ ಕಾರು. ಮರ್ಸಿಡೀಸ್ ಬೆಂಝ್ ಇ ಕ್ಲಾಸ್ ಕಾರಿನ ಬೆಲೆ 56.57 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದೆ. ಟಾಪ್ ವೇರಿಯೆಂಟ್  ಬೆಲೆ 1.50 ಕೋಟಿ ರೂಪಾಯಿ. 

ಇದನ್ನೂ ಓದಿ: ಭಾರತೀಯ ಕಾರ್ಪೆಂಟರ್‌ಗೆ ಜಾಕ್‌ಪಾಕ್- ಲಕ್ಕಿ ಡ್ರಾನಲ್ಲಿ ಬಂತು 2 ಕೋಟಿ ಕಾರು!

ಮರ್ಸಡೀಸ್ ಬೆಂಝ್ ಇ ಕ್ಲಾಸ್ ಕಾರಿನಲ್ಲಿ  4.0 ಲೀಟರ್ ಟರ್ಬೋ ಚಾರ್ಜಡ್ ಪೆಟ್ರೋಲ್ ಎಂಜಿನ್, ಹೊಂದಿದ್ದು,  612 Bhp ಪವರ್ ಹಾಗೂ 850 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇದೇ ವಿಭಾಗದಲ್ಲಿ 2-ಲೀಟರ್ ಪೆಟ್ರೋಲ್ ಎಂಜಿನ್,  2.0 ಲೀಟರ್ ಡೀಸೆಲ್ ಎಂಜಿನ್ ಹಾಗೂ 3.0 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. 

PREV
click me!

Recommended Stories

ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?
Virat Kohli to KL Rahul: ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು