ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪ್ರತಿ ವರ್ಷ ಕಾರುಗಳನ್ನು ಬದಲಾಯಿಸುತ್ತಾರೆ. ಸಚಿನ್ ಬಳಿ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ಸಚಿನ್ ಖರೀದಿಸಿದ ಕಾರುಗಳೆಷ್ಟು? ಇಲ್ಲಿದೆ ಸಚಿನ್ ಕಾರು ಪ್ರೀತಿ.
ಮುಂಬೈ(ಏ.24): ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಇಂದು(ಏ.24) 46ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸಚಿನ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಸಚಿನ್ ಬರ್ತ್‌ಡೇ ಸಂಭ್ರಮ ಒಂದಡೆಯಾದರೆ ಸಚಿನ್ ಕುರಿತ ಹಲವು ಇಂಟ್ರೆಸ್ಟಿಂಗ್ ವಿಚಾರಗಳು ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ವಿರಾಟ್ ಕೊಹ್ಲಿ ಮನೆ ಸೇರಿತು 4 ಕೋಟಿ ರೂಪಾಯಿ ಕಾರು!
ಸಚಿನ್ ತೆಂಡುಲ್ಕರ್ ಬಳಿ BMW,ಮರ್ಸಿಡೀಸ್ ಬೆಂಝ್, ನಿಸ್ಸಾನ್ GT-R, ಫೆರಾರಿ ಸೇರಿದಂತೆ ದುಬಾರಿ ಕಾರುಗಳಿವೆ. ಆದರೆ ಸಚಿನ್ ಮೊದಲ ಕಾರು ಮಾರುತಿ 800. ಸಚಿನ್ ಬಹಳ ಇಷ್ಟಪಟ್ಟು ಹಾಗೂ ಕಷ್ಟಪಟ್ಟು ಖರೀದಿಸಿದ ಕಾರು ಈ ಮಾರುತಿ 800. ವಿಶೇಷ ಅಂದರೆ ಸಚಿನ್ ಬಳಿ ಈಗಲೂ ಮೊದಲು ಖರೀದಿಸಿದ ಮಾರುತಿ 800 ಕಾರಿದೆ. ಸಚಿನ್ ಬಳಿ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ಇದರಲ್ಲಿ ಕೆಲ ಕಾರುಗಳ ವಿವರ ಇಲ್ಲಿದೆ.
ಇದನ್ನೂ ಓದಿ: ರೋಲ್ಸ್ ರೋಯ್ಸ್ ಬದಲು ಹೊಸ ಕಾರು ಖರೀದಿಸಿದ ಅಮಿತಾಬ್ ಬಚ್ಚನ್!
ಫೆರಾರಿ 360 ಮೊಡೆನಾ:
ಫೆರಾರಿ 360 ಮೊಡೆನಾ ಕಾರು ಭಾರತದಲ್ಲಿ ಸಂಚಲ ಮೂಡಿಸಿದ ಕಾರು. ಆಸಿಸ್ ಕ್ರಿಕೆಟ್ ದಿಗ್ಗ ಡಾನ್ ಬ್ರಾಡ್ಮನ್ 29 ಟೆಸ್ಟ್ ಶತಕ ದಾಖಲೆಯನ್ನು ಸಚಿನ್ ಮುರಿದ ಬೆನ್ನಲ್ಲೇ ಫಾರ್ಮುಲಾ 1 ರೇಸಲ್ ಮೈಕಲ್ ಶುಮಾಕರ್ ಫೆರಾರಿ 360 ಮೊಡೆನಾ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಕೆಲ ವರ್ಷಗಳ ಹಿಂದೆ ಸಚಿನ್ ಈ ಕಾರನ್ನು ಮಾರಾಟ ಮಾಡಿದ್ದಾರೆ.
ನಿಸ್ಸಾನ್ GT-R
ಫೆರಾರಿ ಬಳಿಕ ಸಚಿನ್ ತೆಂಡೂಲ್ಕರ್ ನಿಸ್ಸಾನ್ GT-R ಕಾರನ್ನು ಖರೀದಿಸಿದರು. ಸರಿಸುಮಾರು 2.20 ಕೋಟಿ ರೂಪಾಯಿ ಮೌಲ್ಯದ ಈ ಕಾರಿಗೆ ಸಚಿನ್ ಆಲ್ಟರ್ ಕೂಡ ಮಾಡಿಸಿಕೊಂಡಿದ್ದರು. 2017ರಲ್ಲಿ ಸಚಿನ್ ಈ ಕಾರನ್ನು ಮಾರಾಟ ಮಾಡಿದ್ದಾರೆ.
BMW X5M
2002ರ ಮಾಡೆಲ್ BMW X5M ಕಾರು ಸಚಿನ್ ಹೆಚ್ಚು ಬಳಸಿದ್ದಾರೆ. ಈ ಕಾರಿನಲ್ಲೇ ಸಚಿನ್ ಹೆಚ್ಚು ಓಡಾಡಿದ್ದಾರೆ. ಈ ಕಾರು 72,000 ಕಿ.ಮೀ ಪ್ರಯಾಣ ಮಾಡಿದೆ. ಈ ಕಾರಿನ ಬೆಲೆ 80 ಲಕ್ಷ ರೂಪಾಯಿ. ಕಳೆದ ವರ್ಷ ಈ ಕಾರನ್ನೂ ಸಚಿನ್ ಮಾರಾಟ ಮಾಡಿದ್ದಾರೆ.
BMW i8
ತೆಂಡುಲ್ಕರ್ ಬಳಿ ಡಿಸಿ ಡಿಸೈನ್ ಕಸ್ಟಮೈಸ್ ಮಾಡಿರುವ BMW i8 ಕಾರಿದೆ. 2012ರಿಂದ ಸಚಿನ್ BMW ಕಾರಿನ ರಾಯಭಾರಿ ಆಗಿ ಆಯ್ಕೆಯಾಗಿದ್ದಾರೆ. ನೀಲಿ BMW i8 ಕಾರು ಖರೀದಿಸಿದ ಸಚಿನ್ ಈ ಕಾರನ್ನು ಮಾಡಿಫೈ ಮಾಡಿದ್ದಾರೆ. ಇದೀಗ ರೆಡ್ ಹಾಗೂ ಬ್ಲಾಕ್ ಲುಕ್‌ನಲ್ಲಿ ಕಂಗೊಳಿಸುತ್ತಿದೆ.
BMW i8 ಕಾರಿನ ಜೊತೆ BMW M6 ಗ್ರಾನ್ ಕಪ್, BMW 7 ಸೀರಿಸ್, BMW M5, ಮರ್ಸಡೀಸ್ ಬೆಂಝ್ c36 AMG ಕಾರು ಕೊಡ ಹೊಂದಿದ್ದಾರೆ. ವರ್ಷದಿಂದ ವರ್ಷಕ್ಕೆ ಸಚಿನ್ ತಮ್ಮ ಕಾರು ಬದಲಾಯಿಸಿದ್ದಾರೆ. ಕಾರಿನ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಂಡಿದ್ದಾರೆ.