ತೈವಾನ್ ಅಧ್ಯಕ್ಷರ ಚುನಾವಣಾ ಪ್ರಚಾರ, ಡಬಲ್ ಆಯ್ತು ಆನಂದ್ ಮಹೀಂದ್ರ ಸಂತಸ!

By Suvarna News  |  First Published Jan 13, 2020, 10:40 PM IST

ಮಹೀಂದ್ರ & ಮಹೀಂದ್ರ ಗ್ರೂಪ್ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಪ್ರತಿ ಕ್ಷಣವೂ ಸಕ್ರಿಯರಾಗಿರುತ್ತಾರೆ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಜಾಯಮಾನ ಆನಂದ್ ಮಹೀಂದ್ರ ಅವರದ್ದು. ಇದೀಗ ತೈವಾನ್‌ ದೇಶದಲ್ಲಿ ಚುನಾವಣಾ ಸಮೀಪಿಸುತ್ತಿದೆ. ಹೀಗಾಗಿ ತೈವಾನ್ ಅಧ್ಯಕ್ಷರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇದು ಆನಂದ್ ಮಹೀಂದ್ರ ಸಂತಸ ಹೆಚ್ಚಿಸಿದೆ. 


ಮುಂಬೈ(ಜ.13): ಮಹೀಂದ್ರ ಮುಖ್ಯಸ್ಥ ಸ್ಥಾನಕ್ಕೆ ಆನಂದ್ ಮಹೀಂದ್ರ ವಿದಾಯ ಹೇಳುತ್ತಿದ್ದಾರೆ. ಆದರೆ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಎಂದಿನಂತೆ ಸಕ್ರಿಯರಾಗಿರುತ್ತಾರೆ. ಇದೀಗ ಆನಂದ್ ಮಹೀಂದ್ರ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ತೈವಾನ್ ದೇಶದ ಅಧ್ಯಕ್ಷರ ಚುನಾವಣಾ ಪ್ರಚಾರ.

ಇದನ್ನೂ ಓದಿ: ಸ್ಕೂಟರ್‌ನಲ್ಲಿ ತಾಯಿ ಸುತ್ತಾಡಿಸಿದ ಮೈಸೂರಿಗನಿಗೆ ಆನಂದ್ ಮಹೀಂದ್ರ ಭರ್ಜರಿ ಗಿಫ್ಟ್!

Tap to resize

Latest Videos

ಈ ವಿಡಿಯೋದಲ್ಲಿ ಏನಿದೆ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ತೈವಾನ್ ಅಧ್ಯಕ್ಷರ ಚುನಾವಣಾ ಪ್ರಚಾರದಲ್ಲಿ ಮಹೀಂದ್ರ ಸ್ಕಾರ್ಪಿಯೋ ಪಿಕ್ ಅಪ್ ಬಳಸಲಾಗಿದೆ. ತೈವಾನ್ ಚುನಾವಣಾ ಪ್ರಚಾರದಲ್ಲೂ ಮಹೀಂದ್ರ ವಾಹನ ಬಳಿಸಿರುವುದು ಆನಂದ್ ಮಹೀಂದ್ರ ಸಂತಸವನ್ನು ಡಬಲ್ ಮಾಡಿದೆ.

ಇದನ್ನೂ ಓದಿ: ಅಪರೂಪದ ಫೋಟೋಗೆ ಕ್ಯಾಪ್ಶನ್‌ ಸ್ಪರ್ಧೆ; ಉತ್ತರಕ್ಕೆ ಸುಸ್ತಾದ ಮಹೀಂದ್ರ!.

ಭಾರತದ ಹೆಮ್ಮೆ. ತೈವಾನ್ ಮಣ್ಣಿನಲ್ಲಿ ಭಾರತದ ವಾಹನ ಚುನಾವಣಾ ಪ್ರಚಾರದಲ್ಲಿ ಮಿಂಚುತ್ತಿದೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ. 

 

Indeed a moment of pride. And I have to admit that broke this news to me first! 🙏🏽 https://t.co/XYYaYMFwsr

— anand mahindra (@anandmahindra)

ಮಹೀಂದ್ರ ಪಿಕ್ ಅಪ್ ಅತ್ಯಂತ ಬಲಿಷ್ಠ ವಾಹನ. 2,609 cc, 4 ಸಿಲಿಂಡರ್ ಸಿಲಿಂಡರ್, ಡೈರೆಕ್ಟ್ ಇಂಜೆಕ್ಷನ್ ಡೀಸೆಲ್ ಎಂಜಿನ್ ಹೊಂದಿದೆ. ಇಂಧನ ಸಾಮರ್ಥ್ಯ 80 ಲೀಟರ್, 2D or 4WD ಕಾನ್‌ಫಿಗರೇಶನ್ ಹೊಂದಿದೆ. 

click me!