ಅಂಬಾನಿ ಬಳಿಯಿರುವ ದುಬಾರಿ ಕಾರು ಯಾವುದು? ಇಲ್ಲಿದೆ ವಿವರ!

Suvarna News   | Asianet News
Published : Jan 13, 2020, 08:29 PM IST
ಅಂಬಾನಿ ಬಳಿಯಿರುವ ದುಬಾರಿ ಕಾರು ಯಾವುದು? ಇಲ್ಲಿದೆ ವಿವರ!

ಸಾರಾಂಶ

ವಿಶ್ವದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಬಳಿ ಹಲವು ದುಬಾರಿ ಕಾರುಗಳಿವೆ. ಈ ಪೈಕಿ ಅತ್ಯಂತ ದುಬಾರಿ ಕಾರು ಯಾವುದು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇಲ್ಲಿದೆ ಅಂಬಾನಿಯ ದುಬಾರಿ ಕಾರಿನ ವಿವರ.

ಮುಂಬೈ(ಜ.13): ಉದ್ಯಮಿ ಮುಖೇಶ್ ಅಂಬಾನಿ ಪ್ರತಿ ವರ್ಷ ದುಬಾರಿ ಕಾರು ಖರೀದಿಸುತ್ತಾರೆ. 2019ರಲ್ಲಿ ಕೆಲ ಕಾರುಗಳನ್ನು ಖರೀದಿಸಿದ್ದರು. ಇದರಲ್ಲಿ ದುಬಾರಿ ರೋಲ್ಸ್ ರಾಯ್ಸ್ ಕಲ್ಲಿನಾನ್, ಟೆಸ್ಲಾ ಎಸ್ ಮಾಡೆಲ್ ಕಾರು ಹಾಗೂ ಲ್ಯಾಂಬೋರ್ಗಿನಿ ಉರುಸ್ ಕಾರು ಖರೀದಿಸಿದ್ದಾರೆ. ಕಳೆದ ವರ್ಷ ಆಕಾಶ ಅಂಬಾನಿ ಮದುವೆಗೆ ಈ ಕಾರುಗಳನ್ನು ಖರೀದಿಸಲಾಗಿದೆ.

ಇದನ್ನೂ ಓದಿ: ಅಂಬಾನಿ ಕಾರು ಕಲೆಕ್ಷನ್ ಕಂಡು ದಂಗಾದ ಮುಂಬೈ ಇಂಡಿಯನ್ಸ್!

ಅಂಬಾನಿ ಬಳಿ ಇರುವ ಕಾರುಗಳ ಪೈಕಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಸೀರಿಸ್ VIII ಕಾರು ಅತ್ಯಂತ ದುಬಾರಿ ಕಾರಾಗಿದೆ. ಇದರ ಬೆಲೆ 13.5 ಕೋಟಿ ರೂಪಾಯಿ. ಇನ್ನು ಬುಲೆಟ್‌ಫ್ರೂಪ್ ಸೇರಿದಂತೆ ಇತರ ಕಸ್ಟಮೈಸೇಶನ್ ಬಳಿಕ ಇದರ ಬೆಲೆ ಸರಿಸುಮಾರು 15 ಕೋಟಿ ರೂಪಾಯಿ ದಾಟಲಿದೆ.

ಇದನ್ನೂ ಓದಿ: ಅಂಬಾನಿ ಆಫೀಸ್ ಹೋಗಲು ಬೇಕು 14 ಕೋಟಿ ಮೌಲ್ಯದ ಬೆಂಗಾವಲು ಕಾರು!

ಅಂಬಾನಿ ಬಳಿ ರೋಲ್ಸ್ ರಾಯ್ಸ್ ಘೋಸ್ಟ್, ಬೆಂಟ್ಲಿ, ಲ್ಯಾಂಬೋರ್ಗಿನಿ ಸೇರಿದಂತೆ ಹಲವು ಕಾರಗಳಿವೆ. ಈ ಕಾರುಗಳ ಬೆಲೆ ಗರಿಷ್ಠ 8 ಕೋಟಿ. ಆದರೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಸೀರಿಸ್ VIII ದುಬಾರಿ ಕಾರು ಅನ್ನೋ ಪಟ್ಟ ಅಲಂಕರಿಸಿದೆ. 

ಇದನ್ನೂ ಓದಿ: ಅಂಬಾನಿ ಪುತ್ರರ ಭದ್ರತೆಗಾಗಿ ಹೊಸ ರೇಂಜ್ ರೋವರ್ ಕಾರು!

ರೋಲ್ಸ್ ರಾಯ್ಸ್ ಫ್ಯಾಂಟಮ್ ಸೀರಿಸ್ VIII EWB ಕಾರು  6.75-ಲೀಟರ್ ಟ್ವಿನ್ ಟರ್ಬೋಚಾರ್ಜಡ್ V12  ಎಂಜಿನ್ ಹೊಂದಿದೆ. ಗರಿಷ್ಠ 563 Bhp ಪವರ್ ಹಾಗೂ 900 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 8 ಸ್ಪೀಡ್ ಟ್ರಾನ್ಸಮಿಶನ್ ಹೊಂದಿದೆ. ಈ ಕಾರು 100 ಕಿ.ಮೀ ವೇಗ ತಲುಪಲು ತೆಗೆದುಕೊಳ್ಳುವ ಸಮಯ 5.4 ಸೆಕೆಂಡ್.

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ